USA

Explore Topics, Tips & Stories

Balloon
Arrow
Arrow

ಬಾಲ್ಕನ್ಸ್ ಅಥವಾ ಬಾಲ್ಟಿಕ್ಸ್?

6 mins. read
Sunila Patil
Sunila Patil
6 Mins Read
November 29, 2024
November 29, 2024

Quick Summary

ಬಾಲ್ಕನ್ಸ್ ಮತ್ತು ಬಾಲ್ಟಿಕ್ಸ್ ಎರಡೂ ಯುರೋಪಿನ ವಿಭಿನ್ನ ದೇಶ ಸಮೂಹಗಳು, ಆದ್ದರಿಂದ ನಿಮ್ಮ ಪ್ರವಾಸ ಯೋಜನೆಗೆ ಮೊದಲು ವ್ಯತ್ಯಾಸ ತಿಳಿದುಕೊಳ್ಳಿ.

ಬಾಲ್ಟಿಕ್ಸ್ ಯುರೋಪಿನ ವಾಯವ್ಯ ಭಾಗದಲ್ಲಿದ್ದು ಎಸ್ಟೋನಿಯಾ, ಲಾಟ್ವಿಯಾ ಮತ್ತು ಲಿಥುವಿನ್ಯಾ ದೇಶಗಳನ್ನು ಒಳಗೊಂಡಿದೆ.

ಬಾಲ್ಕನ್ಸ್ ಯುರೋಪಿನ ನೈಋತ್ಯ ಭಾಗದಲ್ಲಿದ್ದು ಅಲ್ಬೇನಿಯಾ, ಬೋಸ್ನಿಯಾ ಮತ್ತು ಹಟ್ಜಗೋವೆನ, ಬಲ್ಗೇರಿಯಾ, ಕ್ರೊಯೇಷಿಯಾ, ಕೊಸುವೊ, ಮಾಂಟಿನಿಗ್ರೊ, ಉತ್ತರ ಮ್ಯಾಸಡೋನಿಯ, ರೊಮೇನಿಯಾ, ಸರ್ಬಿಯಾ ಮತ್ತು ಸ್ಲೊವೇನಿಯಾ ಸೇರಿವೆ.

ಬಾಲ್ಕನ್ಸ್‌ನಲ್ಲಿ ಡುಬ್ರೊವ್ನಿಕ್‌ನ ಪ್ರಾಚೀನ ಗೋಡೆಗಳ ಸುತ್ತ ನಡೆದು ಓಲ್ಡ್ ಟೌನ್ ಅನ್ವೇಷಿಸಿ, ಏಡಿಯಾಟ್ರಿಕ್ ತೀರದ ದೃಶ್ಯಗಳನ್ನು ಆನಂದಿಸಿ.

ಪ್ಲಿಟ್‌ವಿಜ್ ಲೇಕ್ಸ್ ನ್ಯಾಷನಲ್ ಪಾರ್ಕ್‌ನಲ್ಲಿ ಯುನೆಸ್ಕೊ ತಾಣದ ಹಸಿರು-ನೀಲಿ ಸರೋವರಗಳು, ಜಲಪಾತಗಳು ಮತ್ತು ಮರದ ಕಾಲುದಾರಿಗಳನ್ನು ತಪ್ಪದೇ ನೋಡಿ.

ಬಾಲ್ಕನ್ಸ್‌ನಲ್ಲಿ ಮಧ್ಯಕಾಲೀನ ವೈಭವ ಮತ್ತು ಪ್ರಶಾಂತ ಪ್ರಕೃತಿ ಎರಡನ್ನೂ ನಿರೀಕ್ಷಿಸಬಹುದು, ನಿಮ್ಮ ಆಸಕ್ತಿಗೆ ತಕ್ಕಂತೆ ಆಯ್ಕೆ ಮಾಡಿ.

Published in the Sunday Prajavani on 01 December, 2024

ಮುಂದಿನ ಬಾರಿ ಎಲ್ಲಿಗೆ ಹೋಗುವುದು? ಈ ಪ್ರಶ್ನೆ ನಿಮಗೆ ಮೂಡಿರಬಹುದು. ನೀವು ಈಗಾಗಲೇ ಸ್ವಿಟ್ಜರ್‌ಲ್ಯಾಂಡಿನ ಪರ್ವತ ಶೃಂಗಗಳು, ಐಫೆಲ್ ಟವರ್, ಇಟಲಿಯ ರ‍್ರಬ್ಬಿಯಾಟ್ಟ ಪಿಜ್ಜಾದ ಸವಿ, ಸ್ಪೇನಿನ ಫ್ಲಮೆಂಕೊ ನೃತ್ಯ, ಗ್ರೀಸ್‌ನಲ್ಲಿ ದ್ವೀಪ ದ್ವೀಪಗಳ ನಡುವೆ “ಐಲ್ಯಾಂಡ್ ಹಾಪಿಂಗ್” ಇವೆಲ್ಲವನ್ನೂ ಕಂಡು ಮುಂದಿನ ಸ್ಫೂರ್ತಿಯ ತಾಣದ ಹುಡುಕಾಟದಲ್ಲಿದ್ದರೆ ಬಾಲ್ಕನ್ಸ್ ಅಥವಾ ಬಾಲ್ಟಿಕ್ಸ್ ಬಗ್ಗೆ ಏಕೆ ಆಲೋಚಿಸಬಾರದು? ಇವು ನಿಮಗೆ ಹೊಚ್ಚ ಹೊಸ ಶಬ್ದಗಳಂತೆ ಕೇಳÀಬಹುದು. ಅಷ್ಟೇ ಏಕೆ, ಈ ಪ್ರದೇಶಗಳು ಬಹುತೇಕರ ಪಾಲಿಗೆ ಈಗಲೂ ಅಜ್ಞಾತ ಸ್ಥಳಗಳೇ ಆಗಿವೆ. ಆದರೆ, ಇವು ಪ್ರತಿಯೊಬ್ಬರಿಗೂ ಸಮ್ಮೋಹನಗೊಳಿಸುವಷ್ಟು ಸಮೃದ್ಧ ಅನುಭಗಳನ್ನು ಕೊಡಮಾಡುತ್ತವೆ ಎಂಬುದು ಮಾತ್ರ ನಿಸ್ಸಂಶಯ.

 

ಹಾಗಾದರೆ, ಬಾಲ್ಕನ್ಸ್ ಅಥವಾ ಬಾಲ್ಟಿಕ್ಸ್ ಎಂದರೇನು? ಇವೆರಡರ ನಡುವೆ ಗೊಂದಲ ಉಂಟಾಗುವುದು ಸಹಜ. ಈ ಪ್ರದೇಶಗಳಿಗೆ ಪ್ರವಾಸ ಯೋಜಿಸುವ ಮುನ್ನ ಇವೆರಡೂ ದೇಶ ಸಮೂಹಗಳ ನಡುವಿನ ವ್ಯತ್ಯಾಸ ತಿಳಿಯುವುದು ಮುಖ್ಯವಾಗುತ್ತದೆ.

 

ಇವೆರಡೂ ಕೇಳಲು ಹೆಚ್ಚುಕಮ್ಮಿ ಒಂದೇ ರೀತಿ ಇವೆ. ಆದರೆ, ಇವು ಯುರೋಪಿನಲ್ಲಿರುವ ವಿಭಿನ್ನ ದೇಶ ಸಮೂಹಗಳಾಗಿವೆ. ಬಾಲ್ಟಿಕ್ ಪ್ರದೇಶವು ಯುರೋಪಿನ ವಾಯವ್ಯ ಭಾಗದಲ್ಲಿದ್ದು, ಎಸ್ಟೋನಿಯಾ, ಲಾಟ್ವಿಯ ಮತ್ತು ಲಿಥುವಿನ್ಯಾ ದೇಶಗಳನ್ನು ಒಳಗೊಳ್ಳುತ್ತದೆ. ಇವು ಬಾಲ್ಟಿಕ್ ಸಮುದ್ರದ ಪೂರ್ವ ದಂಡೆಗೆ ಹೊಂದಿಕೊAಡಿರುವ ದೇಶಗಳು. ಇನ್ನು ಬಾಲ್ಕನ್ಸ್ ಎಂದರೆ ಯುರೋಪಿನ ನೈಋತ್ಯದಲ್ಲಿರುವ ಮೂರು ಪರ್ಯಾಯ ದ್ವೀಪಗಳನ್ನು ಒಳಗೊಂಡಿದೆ. ಅಲ್ಬೇನಿಯಾ, ಬೋಸ್ನಿಯಾ ಮತ್ತು ಹಟ್ಜಗೋವೆನ, ಬಲ್ಗೇರಿಯಾ, ಕೊಯೇಷಿಯಾ, ಕಾಸುವೊ, ಮ್ಯಾಸಡೋನಿಯ, ಮಾಂಟಿನಿಗ್ರೊ, ರೊಮೇನಿಯಾ, ಸರ್ಬಿಯಾ ಮತ್ತು ಸ್ಲೊವೇನಿಯಾ ಈ ವ್ಯಾಪ್ತಿಯಡಿ ಬರುತ್ತವೆ. ಜೊತೆಗೆ, ಗ್ರೀಸ್ ಮತ್ತು ಟರ್ಕಿಯ ಒಂದಷ್ಟು ಪ್ರದೇಶಗಳು ಕೂಡ ಇದಕ್ಕೆ ಸೇರುತ್ತವೆ. ಈ ವ್ಯತ್ಯಾಸ ತಿಳಿದ ಮೇಲೂ ನಿಮ್ಮ ಪ್ರವಾಸಕ್ಕೆ ಬಾಲ್ಕನ್ಸ್ ಅಥವಾ ಬಾಲ್ಟಿಕ್ಸ್ ಇವೆರಡರ ಪೈಕಿ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದೆಂಬ ತಾಕಲಾಟ ನಿಮ್ಮನ್ನು ಕಾಡಬಹುದು. ಇವೆರಡೂ ಪ್ರದೇಶಗಳು ಸಮೃದ್ಧ ಚರಿತ್ರೆ, ಸಂಸ್ಕೃತಿಯಿAದ ಕೂಡಿದ್ದು, ಅನನ್ಯ ಅನುಭವಗಳು, ವಿಸ್ಮಯ ಭೂಪ್ರದೇಶಗಳು ಹಾಗೂ ವೈವಿಧ್ಯಮಯ ಆಹಾರ ಪದ್ಧತಿಗಳನ್ನು ನಿಮಗೆ ಉಣಬಡಿಸುತ್ತವೆ. ಬಾಲ್ಕನ್ ಪ್ರದೇಶದಲ್ಲಾದರೆ ಬೃಹತ್ ಪರ್ವತಗಳು; ಬಾಲ್ಟಿಕ್ ವ್ಯಾಪ್ತಿಯಲ್ಲಾದರೆ ಮಧ್ಯಕಾಲೀನ ವೈಭವ ಹಾಗೂ ಪ್ರಶಾಂತಮಯ ಪ್ರಕೃತಿ; ಆಯ್ಕೆ ಯಾವುದೇ ಆಗಿದ್ದರೂ ನಿಮ್ಮ ಪ್ರವಾಸವಂತೂ ಅವಿಸ್ಮರಣೀಯವಾಗುವುದರಲ್ಲಿ ಎರಡನೇ ಮಾತಿಲ್ಲ.

 

ನನ್ನಮಟ್ಟಿಗೆ ಹೇಳುವುದಾದರೆ, ಇವನ್ನು ಸಮುದ್ರ ತೀರದ ದೇಶಗಳು ಹಾಗೂ ಪರ್ವತಗಳಿಂದ ಸುತ್ತುವರಿದ ದೇಶಗಳು ಎಂದು ವರ್ಗೀಕರಿಸಲು ಇಷ್ಟಪಡುತ್ತೇನೆ. ಹೀಗೆ ಗುರುತಿಸುವುದು ಅವುಗಳ ಭೂ ಸ್ಥಾನವನ್ನು ಹಾಗೂ ಅವುಗಳ ನಡುವಿನ ವ್ಯತ್ಯಾಸದ ಚಿತ್ರಣವನ್ನು ಸ್ಪಷ್ಟವಾಗಿ ಮನಗಾಣಿಸುತ್ತದೆ. ಹಾಗೆ ನೋಡಿದರೆ, ಈ ದೇಶ ಸಮೂಹಗಳ ಹೆಸರಿನಲ್ಲಿಯೇ ವ್ಯತ್ಯಾಸ ಏನೆಂಬುದು ಕೂಡ ಅಡಗಿದೆ. “ಬಾಲ್ಟಿಕ್ಸ್” ಎಂಬುದು ಬಾಲ್ಟಿಕ್ ಸಮುದ್ರದಿಂದ ಬಂದಿರುವ ಹೆಸರಾಗಿದೆ. ಈ ಸಮುದ್ರವು ಅಟ್ಲಾಂಟಿಕ್ ಸಾಗರದ ಒಂದು ಕವಲು. ಇದು ಸ್ಕ್ಯಾಂಡಿನೇವಿಯಾದಿAದ ಸಣ್ಣ ದೋಣಿಯೊಂದರಲ್ಲಿ ಹೋಗಬಹುದಾದಷ್ಟು ಸನಿಹದಲ್ಲಿದೆ. ಮತ್ತೊಂದೆಡೆ, “ಬಾಲ್ಕನ್ಸ್” ಎಂಬುದು ಟರ್ಕಿಯ “ಬಾಲ್ಕನ್” ಎಂಬ ಶಬ್ದದಿಂದ ಬಂದಿರುವ ಹೆಸರಾಗಿದೆ. ಟರ್ಕಿ ಭಾಷೆಯಲ್ಲಿ “ಬಾಲ್ಕನ್” ಎಂದರೆ ಪರ್ವತ ಎಂದರ್ಥ. ಇದು ಯುರೋಪಿನ ನೈಋತ್ಯ ಭಾಗದಲ್ಲಿ ಪರ್ವತ ಮಾಲೆಯಂತೆ ಹಬ್ಬಿ ಹರಡಿರುವ ಪ್ರದೇಶವಾಗಿದೆ. ಅಲ್ಬೇನಿಯಾ, ಬೋಸ್ನಿಯಾ, ಹಟ್ಜಗೋವೆನ, ಬಲ್ಗೇರಿಯಾ, ಕ್ರೊಯೇಷಿಯಾ, ಕಾಸುವೊ, ಮಾಂಟಿನಿಗ್ರೊ, ಉತ್ತರ ಮ್ಯಾಸಡೋನಿಯ, ರೊಮೇನಿಯಾ, ಸರ್ಬಿಯಾ ಮತ್ತು ಸ್ಲೊವೇನಿಯಾ ದೇಶಗಳು ಇಲ್ಲಿ ನೆಲೆಯಾಗಿವೆ. ಬಾಲ್ಕನ್ ಪರ್ಯಾಯದ್ವೀಪವು ಮೂರು ಕಡೆಗಳಲ್ಲಿ ಏಡ್ರಿಯಾಟಿಕ್ ಸಮುದ್ರ, ಅಯೋನಿಯನ್ ಸಾಗರ ಮತ್ತು ಈಗನ್ ಸಮುದ್ರಗಳನ್ನು ಗಡಿಯಾಗಿ ಹೊಂದಿದೆ. ಭೌಗೋಳಿಕವಾಗಿ ಇಟಲಿ, ಗ್ರೀಸ್ ಮತ್ತು ಟರ್ಕಿಗೆ ಇದು ನಿಕಟವಾಗಿದೆ.

 

ಮೊದಲಿಗೆ ಬಾಲ್ಕನ್ಸ್ ವ್ಯಾಪ್ತಿಯ ವಿಶೇಷಗಳನ್ನು ನೋಡೋಣ. ಪ್ರಕ್ಷುಬ್ಧತೆಯಿಂದ ಕೂಡಿದ ಚರಿತ್ರೆ ಇಲ್ಲಿನದಾಗಿದೆ. ವಿವಿಧ ಸಾಮ್ರಾಜ್ಯಗಳು ಮತ್ತು ಸಂಸ್ಕೃತಿಗಳು ಇಲ್ಲಿ ಆಳ್ವಿಕೆ ನಡೆಸಿವೆ. ರೋಮನ್, ಬೈಜಾಂಟೈನ್, ಆಟಮನ್, ಆಸ್ಟ್ರೊ-ಹಂಗೇರಿಯನ್ ಸಾಮ್ರಾಜ್ಯಗಳು ಇವುಗಳಲ್ಲಿ ಕೆಲವು. ಬಾಲ್ಕನ್ ಯುದ್ಧಗಳು ಮತ್ತು ಯುಗೋಸ್ಲಾವ್ ಯುದ್ಧಗಳಂತಹ ಗಮನಾರ್ಹ ಸಂಘರ್ಷಗಳಿಗೆ ಸಾಕ್ಷಿಯಾದ ಪ್ರದೇಶವಿದು. ಇವು ಇಲ್ಲಿನ ಸಾಂಸ್ಕೃತಿಕ ಹಾಗೂ ರಾಜಕೀಯದ ಮೇಲೆ ಪ್ರಬಲ ಪ್ರಭಾವಗಳನ್ನು ಬೀರಿವೆ. ಪ್ರಸ್ತುತ, ಬಾಲ್ಕನ್ನರು ತಮ್ಮ ಕ್ಷಮತೆಗೆ, ಸಾಂಸ್ಕೃತಿಕ ವೈವಿಧ್ಯಕ್ಕೆ ಹಾಗೂ ವೈಭವದ ಪರಂಪರೆಗಳಿಗೆ ಹೆಸರಾಗಿದ್ದಾರೆ. ಮಂತ್ರಮುಗ್ಧಗೊಳಿಸುವ ಸುಂದರ ಭೂಪ್ರದೇಶಗಳು ಇಲ್ಲಿನ ಹೆಗ್ಗುರುತುಗಳಾಗಿವೆ. ಇನ್ನು, ಮೆಗಾ ಹಿಟ್ ಸರಣಿ “ದಿ ಗೇಮ್ ಆಫ್ ಥ್ರೋನ್ಸ್”ನಿಂದ ಹೆಚ್ಚು ಪ್ರಸಿದ್ಧಿಗೆ ಬಂದ ಕ್ರೊಯೇಷಿಯಾದ ಡುಬ್ರೊವ್ನಿಕ್ ನಗರದಲ್ಲಿ ಪ್ರಾಚೀನ ಗೋಡೆಗಳ ಗುಂಟ ಹೆಜ್ಜೆಹಾಕುತ್ತಾ ಚರಿತ್ರೆಯನ್ನು ಮೆಲುಕು ಹಾಕಬಹುದು; ಐತಿಹಾಸಿಕ ಓಲ್ಡ್ ಟೌನ್‌ಅನ್ನು ಅನ್ವೇಷಿಸಬಹುದು; ಏಡಿಯಾಟ್ರಿಕ್ ಕಡಲ ತೀರಗಳಲ್ಲಿ ಕಂಗೊಳಿಸುವ ಪ್ರಪಂಚದ ಪರಿಶುದ್ಧ ಜಲರಾಶಿಯನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿ ನೋಡಲೇಬೇಕಾದ ಮತ್ತೊಂದು ತಾಣವೆಂದರೆ ಪ್ಲಿಟ್‌ವಿಜ್ ಲೇಕ್ಸ್ ನ್ಯಾಷನಲ್ ಪಾರ್ಕ್. ಯುನೆಸ್ಕೊ ವಿಶ್ವಪಾರಂಪರಿಕ ತಾಣವೂ ಆದ ಇಲ್ಲಿ ಮನಸೂರೆಗೊಳ್ಳುವ ಹಸಿರು-ನೀಲಿ ಮಿಶ್ರಿತ ವರ್ಣಮಯ ಸರೋವರಗಳು, ಸರಣಿ ಜಲಪಾತಗಳು ಹಾಗೂ ದಟ್ಟ ಹಸಿರಿನ ಅರಣ್ಯವನ್ನು ಆನಂದಿಸಬಹುದು. ಸಾವಿರಾರು ವರ್ಷಗಳ ಹಿಂದೆ ನೈಸರ್ಗಿಕವಾಗಿ ರೂಪುಗೊಂಡ 16 ಪರಸ್ಪರ ಅಂತರ್‌ಸAಪರ್ಕಿತ ಸರೋವರಗಳ ಬಳಿ ಸುಳಿದಾಡುತ್ತಾ ಮರದ ಕಾಲುದಾರಿಗಳು ಹಾಗೂ ಮರದ ಸೇತುವೆಗಳ ಮೇಲೆ ಅಡ್ಡಾಡಬಹುದು.

 

ಮಾಂಟಿನಿಗ್ರೊದ “ಕೂಟ”ದಲ್ಲಿ ಪ್ರಾಚೀನ ಕೋಟೆಗೆ ನಡೆದು ಹೋಗಿ ಅಚ್ಚಳಿಯದ ನೆನಪನ್ನು ನಿಮ್ಮದಾಗಿಸಿಕೊಳ್ಳಬಹುದು .”ಕೂಟ” ಕೊಲ್ಲಿಯ ಚಿತ್ತಾಕರ್ಷಕ ಸೊಬಗು ಸವಿಯಬಹುದು. ಬೋಸ್ನಿಯಾ ಮತ್ತು ಹಟ್ಜಗೋವೆನದ ರಾಜಧಾನಿ ಸರಯಿವೊದಲ್ಲಿ ಲ್ಯಾಟಿನ್ ಬ್ರಿಜ್, ಮೊದಲ ವಿಶ್ವಯುದ್ಧಕ್ಕೆ ಕಾರಣವಾದ ಆಚ್ ಡ್ಯೂಕ್ ಬಿರುದಾಂಕಿತ ಫ್ರ‍್ಯಾಂಜ್ ಫರ್ಡಿನ್ಯಾಂಡ್‌ನ ಹತ್ಯಾ ಸ್ಥಳವನ್ನು ನೋಡಬಹುದು; ಆಟೊಮನ್ ಹಾಗೂ ಆಸ್ಪ್ರೊ-ಹಂಗೇರಿಯನ್ ವಾಸ್ತುಶಿಲ್ಪದ ಅನನ್ಯ ಸಂಯೋಜನೆಗೆ ಪ್ರತಕ್ಷ ಸಾಕ್ಷಿಯಾಗಬಹುದು. ಇಲ್ಲಿಗೆ ಹತ್ತಿರದಲ್ಲಿರುವ ಮೋಹ್‌ಸ್ತಾದಲ್ಲಿ ಪಾರಂಪರಿಕ ಡೈವಿಂಗ್ ಸ್ಪರ್ಧೆಗೆ ಹೆಸರಾದ ಸ್ಟಾರಿ ಬ್ರಿಜ್‌ಗೆ ತೆರಳಬಹುದು. ಸ್ಲೊವೇನಿಯಾದಲ್ಲಿನ ಲೇಕ್ ಬ್ಲೆಡ್‌ನಿಂದ ದೋಣಿಯಲ್ಲಿ ಬ್ಲೆಡ್ ಐಲ್ಯಾಂಡ್‌ಗೆ ಎಡತಾಕಬಹುದು; ಬ್ಲೆಡ್ ಕ್ಯಾಸಲ್‌ಗೆ ಕಾಲ್ನಡಿಗೆ ಮಾಡಬಹುದು ಹಾಗೂ ಸರವೋರದ ನಿರ್ಮಲ ಸೌಂದರ್ಯದಲ್ಲಿ ಮಿಂದೇಳಬಹುದು. ಸರ್ಬಿಯಾದ ಬೆಲ್ಗ್ರೇಡ್‌ನಲ್ಲಿ ರಸಮಯ ರಾತ್ರಿಗಳು, ಕಲೆಮ್ಯಾಗ್ಡನ್ ಕೋಟೆ, ಹಲವಾರು ವಸ್ತುಸಂಗ್ರಹಾಲಯಗಳು ಹಾಗೂ ಗ್ಯಾಲರಿಗಳು ನಿಮ್ಮನ್ನು ಸೆಳೆಯುತ್ತವೆ. ಕೊನೆಯದಾಗಿ, ಬಲ್ಗೇರಿಯಾದಲ್ಲಿನ ರೀಲಾ ಬೌದ್ಧವಿಹಾರವು ತನ್ನ ಮನೋಜ್ಞ ಭಿತ್ತಿ ವರ್ಣಚಿತ್ರಗಳು, ಸಮೃದ್ಧ ಇತಿಹಾಸ ಮತ್ತು ಕಾಲ್ನಡಿಗೆಗೆ ಹೇಳಿಮಾಡಿಸಿದಂತಹ ಸುಂದರ ರೀಲಾ ಪರ್ವತಗಳಿಂದ ಕೈಬೀಸಿ ಕರೆಯುತ್ತದೆ. ಪ್ರತಿಯೊಂದು ಸ್ಥಳವೂ ಪ್ರದೇಶದ ವೈವಿಧ್ಯಮಯ ಪರಂಪರೆÀ ಹಾಗೂ ನಿಸರ್ಗ ರಮಣೀಯತೆಯ ತುಣುಕಿನ ದರ್ಶನ ಮಾಡಿಸುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಯಾವುದೇ ಪ್ರವಾಸಿಗೆ ಬಾಲ್ಕನ್ ಪ್ರದೇಶವು ಭೇಟಿ ನೀಡಲೇಬೇಕಾದ ತಾಣವಾಗಿದೆ.

 

 

ಇನ್ನು, “ಬಾಲ್ಟಿಕ್ಸ್” ಎಂಬುದು ಬಾಲ್ಟಿಕ್ ಸಮುದ್ರದ ಪೂರ್ವದ ದಂಡೆಯಲ್ಲಿರುವ ದೇಶಗಳ ಸಮೂಹವಾಗಿದೆ. ಇದು ಎಸ್ಟೋನಿಯಾ, ಲಾಟ್ವಿಯ ಮತ್ತು ಲಿಥುವಿನ್ಯಾಗಳನ್ನು ಒಳಗೊಳ್ಳುತ್ತದೆ. ಸ್ವಾತಂತ್ರ್ಯ ಹಾಗೂ ವಿದೇಶಿ ಆಕ್ರಮಣ ಇವೆರಡನ್ನೂ ಕಂಡ ದೇಶಗಳು ಇವಾಗಿವೆ. ಇವು ಜರ್ಮನ್, ಸ್ವೀಡಿಶ್, ಪೋಲಿಶ್ ಹಾಗೂ ರಷ್ಯಾ ಸಾಮ್ರಾಜ್ಯಗಳ ಪ್ರಭಾವಗಳಿಗೆ ಒಳಗಾದ ದೇಶಗಳು. ಇವು 20ನೇ ಶತಮಾನದಲ್ಲಿ ಸೋವಿಯತ್ ರಷ್ಯಾ ಅಧೀನದಲ್ಲಿದ್ದವು. ಈ ದೇಶಗಳು ಸ್ವಾತಂತ್ಯ ಪಡೆದಿದ್ದು 1990ರ ದಶಕದ ಆರಂಭದಲ್ಲಿ. ಆನಂತರ ಈ ಬಾಲ್ಟಿಕ್ ದೇಶಗಳು ತ್ವರಿತವಾಗಿ ಅಭಿವೃದ್ಧಿ ಹೊಂದಿ, ಡಿಜಿಟಲ್ ಪ್ರಗತಿ, ಸಂರಕ್ಷಿತ ಐತಿಹಾಸಿಕ ತಾಣಗಳು ಮತ್ತು ಪ್ರಬಲ ರಾಷ್ಟ್ರೀಯ ಅಸ್ಮಿತೆಗಳಿಗೆ ಹೆಸರಾಗಿವೆ. ಬಾಲ್ಟಿಕ್ ಪ್ರದೇಶವು ಪ್ರವಾಸದ ದೃಷ್ಟಿಯಿಂದ ಅನನ್ಯ ಅನುಭವುಗಳು ಹಾಗೂ ದಿಗ್ಮೂಢಗೊಳಿಸುವ ನೋಟಗಳನ್ನು ಅನಾವರಣಗೊಳಿಸುತ್ತದೆ. ಹೆಲ್ಸಿಂಕಿಯಿAದ ದೋಣಿಯಲ್ಲಿ ಟಾಲಿನ್ ತಲುಪಿ ಕಲ್ಪನಾ ಲೋಕದಂತಿರುವ ಓಲ್ಡ್ ಟೌನ್‌ನಲ್ಲಿ ಅಡ್ಡಾಡಬಹುದು; ಅಲೆಕ್ಸಾಂಡರ್ ನಿವಸ್ಕಿ ಕ್ಯಾಥೆಡ್ರಲ್ ನೋಡಿ ಹುಬ್ಬೇರಿಸಬಹುದು; ಹುರುಪು ಮೂಡಿಸುವ ಕಲಮಾಹ ಡಿಸ್ಟ್ರಿಕ್ಟ್ ಅನ್ನು ಅನ್ವೇಷಿಸಬಹುದು. ಲಾಟ್ವಿಯದ ರೀಗಾದಲ್ಲಿ ಅದ್ಭುತ ನೂವೊ ಕಲಾ ವಾಸ್ತುಶಿಲ್ಪ, ಚಾರಿತ್ರಿಕ ಓಲ್ಡ್ ಟೌನ್, ಜೊತೆಗೆ ಆರಾಮದಾಯಕ ನಡಿಗೆಗೆ ಹೇಳಿಮಾಡಿಸಿದಂತಹ ಸುಂದರ ಉದ್ಯಾನಗಳಿವೆ. ಲಿಥುವಿನ್ಯಾದ ವಿಲ್ನಿಯಸ್‌ನಲ್ಲಿ ಬರೋಕ್ ಅವಧಿಯ ಓಲ್ಡ್ ಟೌನ್, ಪ್ರಸಿದ್ಧ ಹಿಲ್ ಆಫ್ ಕ್ರಾಸಸ್ ಮತ್ತು ಬೊಹೀಮಿಯನ್ ಚೈತನ್ಯಶೀಲತೆಯನ್ನು ಪ್ರತಿನಿಧಿಸುವ ಊಜ್ಜಪಿಸ್ ಡಿಸ್ಟ್ರಿಕ್ಟ್ ಅನ್ನು ನೋಡಬಹುದು. ಎಸ್ಟೋನಿಯದಲ್ಲಿನ ಲಹೇಮಾ ನ್ಯಾಷನಲ್ ಪಾರ್ಕ್, ಅರಣ್ಯದ ಮೂಲಕ ಕಾಲ್ನಡಿಗೆಯ ಅವಕಾಶವನ್ನು ಲಭ್ಯವಾಗಿಸುತ್ತದೆ. ಇಲ್ಲಿ ನೀವು ಕಡಲ ತೀರದಲ್ಲಿ ರಮಣೀಯವೆನ್ನಿಸುವ ಹಳ್ಳಿಗಳನ್ನು ಹಾಗೂ ಪರಿಶುಭ್ರ ಪ್ರಕೃತಿಯ ನಡುವೆ ವನ್ಯಜೀವಿಗಳನ್ನು ದರ್ಶಿಸಬಹುದು. ಯುನೆಸ್ಕೊ ವಿಶ್ವಪಾರಂಪರಿಕ ತಾಣಗಳಲ್ಲಿ ಒಂದಾದ ಲಿಥುವಿನ್ಯಾದ ಕುರೋನಿಯನ್ ಸ್ಪಿಟ್‌ನಲ್ಲಿ ಆಕರ್ಷಕ ಮರಳಿನ ದಿಬ್ಬಗಳು, ಸಾಂಪ್ರದಾಯಿಕ ಮೀನುಗಾರಿಕೆ ಹಳ್ಳಿಗಳು ಹಾಗೂ ಕಂಗೊಳಿಸುವ ಪ್ರಕೃತಿಯ ನಡುವೆ ಮುದಗೊಳ್ಳಬಹುದು. ಎಸ್ಟೋನಿಯದ ಸಾರೀಮಾದಲ್ಲಿ ಮಧ್ಯಕಾಲೀನ ಯುಗದ ಗಾಳಿಗಿರಣಿಗಳನ್ನು ನೋಡಬಹುದು, ಉಲ್ಕ್ಕಾಪಾತದಿಂದ ಸೃಷ್ಟಿಯಾದ ಕುಳಿಗಳನ್ನು ಕಂಡು ಗದ್ದಲಮುಕ್ತ ನಿಶ್ಶಬ್ದ ತಾಣದಲ್ಲಿ ವಿರಮಿಸಬಹುದು. ಲಾಟ್ವಿಯದ ಗಾಜಾ ನ್ಯಾಷನಲ್ ಪಾರ್ಕ್, ಮಧ್ಯಕಾಲೀನ ಯುಗದ ಅರಮನೆಗಳು, ದಟ್ಟಾರಣ್ಯಗಳು ಹಾಗೂ ರಮಣೀಯ ಕಣಿವೆಗಳಿಂದ ಕೂಡಿದೆ. ಕಡೆಯದಾಗಿ, ಲಿಥುವಿನ್ಯಾದ ಟ್ರಾಕಿಯಲ್ಲಿ ದೋಣಿ ಹಿಡಿದು ಕ್ಯಾಸಲ್ ಐಲ್ಯಾಂಡ್‌ಗೆ ತೆರಳಿ ನಿಬ್ಬೆರಗಾಗಿಸುವ ನೋಟಗಳನ್ನು ಸವಿದು ಪಾರಂಪರಿಕ ಕೆರೀಮ್ ಅಡುಗೆ ಭಕ್ಷ್ಯ ಸವಿಯಬಹುದು. ಹೀಗೆ ಪ್ರತಿಯೊಂದು ಜಾಗವೂ ಬಾಲ್ಟಿಕ್ ದೇಶಗಳ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ನಿಸರ್ಗ ವೈಭವದ ದರ್ಶನ ಮಾಡಿಸುತ್ತದೆ. ಹೀಗಾಗಿ, ಈ ತಾಣಗಳು ಯಾವುದೇ ಪ್ರವಾಸಿಯು ಭೇಟಿ ನೀಡಲು ಬಯಸುವಂತಹ ಮೆಚ್ಚಿನ ತಾಣಗಳಾಗಿವೆ. ಬಾಲ್ಕನ್ ಮತ್ತು ಬಾಲ್ಟಿಕ್ ಇವೆರಡೂ ತಮ್ಮದೇ ವಿಶಿಷ್ಟ ಸೌಂದರ್ಯ ರಾಶಿಯಿಂದ ಮೈಮನಗಳನ್ನು ಆವರಿಸುವ ಪ್ರಯಾಣದ ಅನುಭವಗಳನ್ನು ನೀಡುತ್ತವೆ. ಬಾಲ್ಕನ್‌ನಲ್ಲಿರುವ ಬೃಹತ್ ಪರ್ವತಗಳಿರಬಹುದು; ಅಲ್ಲಿನ ಪ್ರಾಚೀನ ನಗರಗಳಿರಬಹುದು; ಅಥವಾ ಬಾಲ್ಟಿಕ್‌ನ ಮಧ್ಯಕಾಲೀನ ವೈಭವವಿರಬಹುದು; ಇಲ್ಲವೇ ಅಲ್ಲಿನ ದಿವ್ಯಮೌನದಿಂದ ಕೂಡಿದ ನಿಸರ್ಗವಾಗಿರಬಹುದು, ಪ್ರವಾಸಿಗರಿಗೆ ಅಚ್ಚಳಿಯದ ನೆನಪುಗಳಂತೂ ಖಾತರಿ. ನಾವು, ವೀಣಾ ವರ್ಲ್ಡ್ ನಲ್ಲಿ, ನಿಮಗೆ ರೋಮಾಂಚಕ ಅನುಭವಗಳನ್ನು ಲಭ್ಯವಾಗಿಸಲು ಅತ್ಯುತ್ತಮ ಪ್ರವಾಸ ಯೋಜನೆಗಳನ್ನು ಹೊಂದಿದ್ದೇವೆ. ಈ ದೇಶಗಳ ಪ್ರವಾಸವನ್ನು ನಿಮಗೆ ಅತ್ಯಂತ ಹೆಚ್ಚು ಖುಷಿಯಾಗುವಂತೆ ಆಸಕ್ತಿದಾಯಕವಾಗಿ ಸಂಯೋಜನೆಗೊಳಿಸುತ್ತೇವೆ. ನೀವು ಬಾಲ್ಕನ್ ಅಥವಾ ಬಾಲ್ಟಿಕ್ ಅನ್ನು ಪ್ರತ್ಯೇಕ ಪ್ರವಾಸಗಳಾಗಿ ಆಯ್ಕೆ ಮಾಡಿಕೊಳ್ಳಬಹುದು ಅಥವಾ ಸ್ಕ್ಯಾಂಡಿನೇವಿಯಾ ಜೊತೆಗೆ ಸಂಯೋಜನೆಗೊಳಿಸಿಕೊAಡು ಯೂರೋಪಿನ ಅತ್ಯುತ್ತಮ ಪ್ರವಾಸಾನುಭವನ್ನು ನಿಮ್ಮದಾಗಿಸಿಕೊಳ್ಳಬಹುದು.

Post your Comment

Please let us know your thoughts on this story by leaving a comment.

Explore Topics, Tips & Stories

Balloon
Arrow
Arrow

Get in touch with us

Share your details for a call back and subscribe to our newsletter for travel inspiration.

+91

Listen to our Travel Stories

You May also like

View all
ಮೇಡ್ ಇನ್ ಅಲಾಸ್ಕಾ
6 mins, read

ಮೇಡ್ ಇನ್ ಅಲಾಸ್ಕಾ

“ನೀವು ಅಲಾಸ್ಕಾಗೆ ಹೋಗಿದ್ದಿರಾ? ವಾವ್! ಹೇಗಿತ್ತು? ಮಧ್ಯರಾತ್ರಿಯಲ್ಲಿ ಬೆಳಗುವ ಸೂರ್ಯ,  ಉತ್ತರ ಪ್ರಭೆ ಇವೆಲ್ಲಾ ನಿಜವೇ?”   ‘ಅಲಾಸ್ಕಾ” ಎಂದು ದಪ್ಪಕ್ಷರದಲ್ಲಿ ಅಚ್ಚುಹಾಕಿದ್ದ ನೀರಿನ ಬಾಟಲಿಯನ್ನು ನನ್ನ ಕೈಗೆ ವಾಪಸ್ಸು ಕೊಡುತ್ತ

ಮಳೆಹಾಡಿನ ಗುಂಗಿನಲ್ಲಿ!
6 mins, read

ಮಳೆಹಾಡಿನ ಗುಂಗಿನಲ್ಲಿ!

Published in the Sunday Vijay Karnataka on 17 Aug 2025 ಕೊನೆಗೂ ಬಿಸಿಲ ಝಳ ಹೋಗಲಾಡಿಸುವ ಮಳೆಯು ಧರೆಗಿಳಿದಾಗ ಆದರದಿಂದ ಬರಮಾಡಿಕೊಳ್ಳುತ್ತೇವೆ. ಆದರೆ, ಅದು ವಿದಾಯ ಹೇಳಲು ಹೊರಟಾಗ ನಾವು ಸೂಕ್ತ ರೀತಿಯಲ್ಲಿ ಬೀಳ್ಕೊಡುಗೆ ನೀಡುತ್ತೇವ

ದುಬೈ ಮತ್ತು ಅಬೂಧಾಬಿ: ಪ್ರತಿಸಲವೂ ಹೊಸ ಪ್ರವಾಸವೇ
6 mins, read

ದುಬೈ ಮತ್ತು ಅಬೂಧಾಬಿ: ಪ್ರತಿಸಲವೂ ಹೊಸ ಪ್ರವಾಸವೇ

Published in the Sunday Prajavani on 10 August 2025 ನನ್ನ ಸ್ನೇಹಿತೆಯೊಬ್ಬಳು ಕಡಿಮೆ ಸಮಯದಲ್ಲಿ ಕುಟುಂಬ ಸಮೇತ ವಿದೇಶ ಪ್ರವಾಸಕ್ಕೆ ಯಾವುದು ಸೂಕ್ತ ಸ್ಥಳವೆಂದು ನನ್ನ ಸಲಹೆ ಕೇಳಿದಳು. ಭಾರತದಿಂದ 3ರಿಂದ 4 ಗಂಟೆಯೊಳಗಿನ ಪ್ರಯಾಣವಾಗಿ

Veena World tour reviews

What are you waiting for? Chalo Bag Bharo Nikal Pado!

150+ Veena World Offices
Locate Us
Request a Quote
+1 903 648 5240
Connect with us

© 2013 - 26 Veena World Inc. All Rights Reserved.

Payments on website are secure

Scroll to Top