Published in the Sunday Prajavani on 10 August 2025
ನನ್ನ ಸ್ನೇಹಿತೆಯೊಬ್ಬಳು ಕಡಿಮೆ ಸಮಯದಲ್ಲಿ ಕುಟುಂಬ ಸಮೇತ ವಿದೇಶ ಪ್ರವಾಸಕ್ಕೆ ಯಾವುದು ಸೂಕ್ತ ಸ್ಥಳವೆಂದು ನನ್ನ ಸಲಹೆ ಕೇಳಿದಳು. ಭಾರತದಿಂದ 3ರಿಂದ 4 ಗಂಟೆಯೊಳಗಿನ ಪ್ರಯಾಣವಾಗಿರಬೇಕು, ಎಲ್ಲಾ ವಯಸ್ಸಿನವರಿಗೂ ಖುಷಿ ಆಗುವಂತಿರಬೇಕು ಹಾಗೂ ಪ್ಲ್ಯಾನ್ ಮಾಡಿಕೊಳ್ಳಲು ಸುಲಭವಾಗಿರಬೇಕು ಎಂಬುದು ಅವರ ನಿರೀಕ್ಷೆಗಳಾಗಿದ್ದವು. ಹೀಗೆ ಆಕೆ ಕೇಳಿದಾಗ, ದುಬೈ ಅಥವಾ ಅಬೂಧಾಬಿ ಎಂಬುದು ನಾನು ನನ್ನ ಗೆಳತಿಗೆ ತತ್‌ಕ್ಷಣವೇ ನೀಡಿದ ಸಲಹೆಯಾಗಿತ್ತು.
ನಾನು ಹೀಗೆ ಹೇಳುತ್ತಿದ್ದಂತೆ ನನ್ನ ಗೆಳತಿ ನಿರುತ್ಸಾಹಗೊಂಡಳು. “ನಾವು ಅಲ್ಲಿಗೆ ಈಗಾಗಲೇ ಹೋಗಿ ಬಂದಿದ್ದೇವೆ” ಎಂದಳು. ಆಗ ನಾನು, “ನೀವು ಅಲ್ಲಿ ಸಮುದ್ರ ತಳದಲ್ಲಿ ಭೋಜನ ಸವಿದಿದ್ದೀರಾ? ಬಂಗಾರದ ಹುಡಿ ಸೇರಿಸಿ ಅಲಂಕರಿಸಿದ ಕ್ಯಾಪುಚೀನೊ ಗುಟುಕರಿಸಿದ್ದೀರಾ? ಅಥವಾ, ಫೆರಾರಿ ವರ್ಲ್ಡ್ ನ ಛಾವಣಿ ಮೇಲೆ ನಡಿಗೆ ಮಾಡಿದ್ದೀರಾ?- ಎಂದು ಕೇಳಿದೆ. ಆಗ ಅವಳು ತನ್ನ ಮುಖದಲ್ಲಿ ಇಣುಕಿಸಿದ ನಗೆಯೇ ಎಲ್ಲಕ್ಕೂ ಉತ್ತರವೇನೆಂಬುದನ್ನು ಸೂಚಿಸಿತು. ಅಂದಂತೆ, ಇವೆರಡೂ ಸದಾಕಾಲ ನವೀಕರಣಗೊಳ್ಳುತ್ತಲೇ ಇರುವ ನಗರಗಳಾಗಿವೆ. ನೀವು ಈ ಹಿಂದೆ ಅದೆಷ್ಟೋ ಸಲ ಇಲ್ಲಿಗೆ ಭೇಟಿ ನೀಡಿರಬಹುದು, ಆದರೆ ಪ್ರತಿ ಬಾರಿ ಭೇಟಿ ನೀಡಿದಾಗಲೂ ನೀವು ಹೊಸದಾಗಿ ಅನ್ವೇಷಿಸಬೇಕಾದ ಏನಾದರೊಂದು ಅಲ್ಲಿ ಇಲ್ಲಿ ನಿಶ್ಚಿತವಾಗಿಯೂ ಇದ್ದೇ ಇರುತ್ತದೆ.
ಮೊದಲಿಗೆ, ದುಬೈ ಬಗ್ಗೆ ಹೇಳುವುದಾದರೆ, ಪ್ರತಿ ಸಲ ಭೇಟಿ ನೀಡಿದಾಗಲೂ ಅತಿಥಿಗಳನ್ನು ತನ್ನ ವೈಭವ, ಕಲಾಸಿರಿ, ಸಮುದ್ರ ದಂಡೆಗಳು ಹಾಗೂ ಮೈಮರೆಸುವ ಅನುಭವಗಳಿಂದ ಬೆರಗುಗೊಳಿಸುವ ನಗರ ಇದಾಗಿದೆ.
ಸ್ಕೈ ಪೂಲ್‌ಗಳು ಮತ್ತು ಗಗನಚುಂಬಿ ನೋಟಗಳು
ದುಬೈನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ‘ಅಟ್ಲಾಂಟಿಸ್ ದಿ ರಾಯಲ್’, ಐಷಾರಾಮಕ್ಕೆ ಹೊಸ ವ್ಯಾಖ್ಯಾನವನ್ನೇ ಬರೆದಿರುವ ರೆಸಾರ್ಟ್ ಆಗಿದೆ. ಇಲ್ಲಿ 22ನೇ ಅಂತಸ್ತಿನಲ್ಲಿರುವ ‘ಕ್ಲೌಡ್ 22’ ಇನ್ಫಿನಿಟಿ ಪೂಲ್ ನಗರದ ಮೇಲ್ಭಾಗದಲ್ಲಿ ತೇಲುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ. ಇಲ್ಲಿಂದ ನೋಡಸಿಗುವ ತಾಳೆ ಹಾಗೂ ಗಗನಚುಂಬಿ ನಿರ್ಮಿತಿಗಳ ನೋಟಗಳು ಮನಮೋಹಕ. ಇಲ್ಲಿ ಫ್ಲೋಟಿಂಗ್ ಡೇಬೆಡ್ ಬುಕ್ ಮಾಡಿಕೊಂಡು ಶಾಂಪೇನ್ ಗುಟುಕರಿಸುತ್ತಾ ವಿರಮಿಸಲು ಅನುವು ಮಾಡಿಕೊಡುವ ಸೌಲಭ್ಯವೂ ಉಂಟು. ಸದಾ ವಿಶೇಷಕ್ಕಾಗಿ ಹಂಬಲಿಸುವ ಪ್ರಣಯ ಜೋಡಿಗಳು ಅಥವಾ ಸಣ್ಣ ತಂಡಗಳ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ ಇದಾಗಿದೆ.
ಇಲ್ಲಿಂದ ಒಂದಷ್ಟು ಬ್ಲಾಕ್‌ಗಳಷ್ಟು ಅಂತರದಲ್ಲಿ ‘ಸ್ಕೈ ವ್ಯೂ ದುಬೈ’ನಲ್ಲಿ ರೋಮಾಂಚಕಾರಿ ರೈಡಿಂಗ್‌ಗಳ ಅನುಭವವನ್ನು ದಕ್ಕಿಸಿಕೊಳ್ಳಬಹುದು. ಇಲ್ಲಿ 219 ಮೀಟರುಗಳ ಎತ್ತರದಲ್ಲಿ ತೂಗಿದಂತಿರುವ ಗಾಜಿನ ಸ್ಲೈಡ್‌ನಲ್ಲಿ ಸವಾರಿ ಕುಳಿತು ಒಂದು ಅಂತಸ್ತಿನಿಂದ ಅದರ ಕೆಳ ಅಂತಸ್ತಿಗೆ ಜಾರಬಹುದು. ಎದೆ ಝಲ್ಲೆನಿಸುವ ಕೆಲವೇ ಕ್ಷಣಗಳ ಈ ರೈಡ್ ಎಂದೆಂದಿಗೂ ಮರೆಯಲಾಗದ ಅನುಭವವಾಗಿ ಮನಸ್ಸಿನಲ್ಲಿ ಉಳಿಯಲಿದೆ. ಸವಾರಿಯ ವೇಳೆ ಕಾಣುವ ನಗರದ ಗಗನಚುಂಬಿ ನಿರ್ಮಿತಿಗಳ ನೋಟಗಳು ನಿಬ್ಬೆರಗು ಮೂಡಿಸುತ್ತವೆ. ಅಲ್ಲಿ ಇನ್ನಷ್ಟು ಎತ್ತರಕ್ಕೆ ತೆರಳಬೇಕು ಎನ್ನಿಸಿದರೆ ಬುರ್ಜ್ ಖಲೀಫಾದ ಲಾಂಜ್‌ಗೆ ಹೋಗಬಹುದು. ಪ್ರಪಂಚದ ಅತ್ಯಂತ ಎತ್ತರದ ಕಟ್ಟಡದ 152ರಿಂದ 154ನೇ ಅಂತಸ್ತಿಗಳಲ್ಲಿರುವ ಲಾಂಜ್‌ನಲ್ಲಿ ಕುಳಿತು ಚಹಾ ಅಥವಾ ವೈನ್‌ಅನ್ನು ಉದರಕ್ಕಿಳಿಸುತ್ತಾ ಸೂರ್ಯ ಪಶ್ಚಿಮದ ಅಂಚಿನಲ್ಲಿ ಟಾಟಾ ಹೇಳುವ ಕ್ಷಣಗಳಿಗೆ ಸಾಕ್ಷಿಯಾಗಬಹುದು.
ಜಲರಾಶಿಯ ಮಧ್ಯೆ ವಿಲಾಸಿ ವೈಭವ
ದುಬೈನಲ್ಲಿ ಹೊಸತನದೊಂದಿಗಿನ ಪ್ರಯೋಗಶೀಲತೆಯು ಜಲರಾಶಿಯ ಲೋಕಕ್ಕೂ ಚಾಚಿಕೊಂಡಿದೆ. ಲಕ್ಷುರಿ ಸ್ಪೋರ್ಟ್ಸ್ ಕಾರುಗಳಂತೆ ತೋರುವ ಜೆಟ್ ಕಾರುಗಳು ಸಮುದ್ರ ಸವಾರಿಗೆಂದೇ ತಯಾರಾಗಿವೆ. ಇವುಗಳಲ್ಲಿ ಕುಳಿತು ಅಲೆಗಳನ್ನು ಸೀಳುತ್ತಾ ಸಾಗರದಲ್ಲಿ ಬಿರುಸಿನಿಂದ ಮುನ್ನುಗುತ್ತಾ ಸಾಗಬಹುದು. ಪ್ರಶಾಂತ ವಾತಾವರಣದಲ್ಲಿ ವಿರಮಿಸುವ ಮನಸ್ಸಾದರೆ ಖಾಸಗಿ ಯಾಚ್‌ನಲ್ಲಿ ಪಾಮ್ ಜುಮೇರಾ ಮತ್ತು ಬುರ್ಜ್ ಅಲ್ ಅರಬ್‌ನಂತಹ ಹೆಗ್ಗುರಿತನ ಸ್ಥಳಗಳನ್ನು ದಾಟಿ ಗೋಜು ಗದ್ದಲದಿಂದ ಮುಕ್ತವಾದ ಪರಿಸರವನ್ನು ಎಡತಾಕಿ ಮಂತ್ರಮುಗ್ಧಗೊಳಿಸುವ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು.
‘ಅಟ್ಲಾಂಟಿಸ್ ದಿ ಪಾಮ್’ ರೆಸಾರ್ಟಿನಲ್ಲಿರುವ ಸಮುದ್ರ ತಳದ ಆಸಿಯಾನೊ ರೆಸ್ಟೋರೆಂಟ್‌ನಲ್ಲಿ ಕಾಲ್ಪನಿಕ ಲೋಕದಲ್ಲಿ ಭೋಜನ ಆಸ್ವಾದಿಸಿದ ಅನುಭವ ಧಕ್ಕಿಸಿಕೊಳ್ಳಬಹುದು. ಸುತ್ತುವರಿದ ವೈವಿಧ್ಯಮಯ ಕಡಲ ಜೀವಿಗಳ ನಡುವೆ ಇಲ್ಲಿ ಬಯಲು ಮತ್ಸ್ಯ ಸಂಗ್ರಹಾಲಯವಾದ ‘ಅಂಬಾಸಿಡರ್ ಲಗೂನ್’ನಲ್ಲಿ ಭೋಜನ ಆಸ್ವಾದನೆಯು ಮಾಂತ್ರಿಕ, ರಮಣೀಯ ಹಾಗೂ ಅಚ್ಚಳಿಯದ ನೆನಪಾಗಿ ಮುದ್ರೆಯೊತ್ತಲಿದೆ.
ಅಬೂಧಾಬಿಯಲ್ಲಿ ವೇಗದ ರೋಮಾಂಚನ ಹಾಗೂ ಕಲಾಸಿರಿ
ಅಬೂಧಾಬಿ ಕೂಡ ಭರಪೂರ ಅನುಭವಗಳನ್ನು ನೀಡುವ ತಾಣವಾಗಿದೆ. ಇಲ್ಲಿ ಫೆರಾರಿ ವರ್ಲ್ಡ್ ನಲ್ಲಿ ಹೊಸದಾಗಿ ಕಲ್ಪಿಸಲಾಗಿರುವ ರೂಫ್ ವಾಕ್‌ನಲ್ಲಿ ಕೆಂಪು ಛಾವಣಿ ಮೇಲೆ ನಡೆದಾಡಿ ಪ್ರಪಂಚದ ಅತ್ಯಂತ ದೊಡ್ಡ ಫೆರಾರಿ ಲಾಂಚನದ ಬದಿ ಪೋಸ್ ನೀಡಬಹುದು. ಅಲ್ಲಿಂದ ಕೆಳ ಕಾಣುವ ಯಾಸ್ ದ್ವೀಪವು 360 ಕೋನದ ಪರಿಪೂರ್ಣ ನೋಟವನ್ನು ಲಭ್ಯವಾಗಿಸಿ ಪರವಶಗೊಳಿಸುತ್ತದೆ.
ಇನ್ನು ವೇಗದ ಚಾಲನೆಯ ರೋಮಾಂಚನ ಬಯಸುವವರು ಯಾಸ್ ಮರೀನಾ ಸರ್ಕೀಟ್‌ನಲ್ಲಿ ವಿಐಪಿ ಡ್ರೈವಿಂಗ್ ಸೆಷನ್‌ಗಳನ್ನು ಬುಕ್ ಮಾಡಬಹುದು. ಕಿರಿಯ ವಯಸ್ಸಿನವರಿಗಾಗಿ ವರ್ಲ್ಡ್ ಜೂನಿಯರ್ ಗ್ರ್ಯಾಂಡ್ ಪ್ರಿ ರೈಡ್‌ಗಳನ್ನು ಹಾಗೂ ಫ್ಯಾಮಿಲಿ-ಫ್ರೆಂಡ್ಲಿ ಜೋನ್‌ಗಳನ್ನು ಫೆರಾರಿ ಲಭ್ಯವಾಗಿಸುತ್ತದೆ.
ಸಾಂಸ್ಕೃತಿಕ ಅಭಿರುಚಿಯುಳ್ಳವರು ಲೂವ್ ಅಬೂಧಾಬಿಯನ್ನು ತಪ್ಪಿಸಿಕೊಳ್ಳುವಂತೆಯೇ ಇಲ್ಲ. ವಾಸ್ತುಶಿಲ್ಪ ಹಾಗೂ ಕಲಾತ್ಮಕ ವಿಸ್ಮಯವಾದ ಬೃಹತ್ ಬೆಳ್ಳಿಯ ಗುಮ್ಮಟದಿಂದ ಕೂಡಿದ ಈ ನಿರ್ಮಿತಿಯು ಕಾಲಾತೀತ ಕಲಾಕೃತಿಗಳನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ಪೌರಾತ್ಯ ಹಾಗೂ ಪಾಶ್ಚಿಮಾತ್ಯ ಪ್ರಭಾವಗಳು ಹದವಾಗಿ ಮೇಳೈಸಿದ ಸೊಬಗಿನ ಕಲಾಕೃತಿಗಳು ಇವಾಗಿವೆ. ಇಲ್ಲಿನ ಪ್ರಶಾಂತ ವಾತಾವರಣವು ಕಾಲವನ್ನೇ ಸಾವಧಾನಗೊಳಿಸಿದಂತೆ ಭಾಸವಾಗಿ ಪ್ರತಿಯೊಂದು ಕಲಾಕೃತಿಯನ್ನೂ ಕಣ್ತುಂಬಿಕೊಳ್ಳಲು ಇಂಬು ನೀಡುತ್ತದೆ.
ಹೊಸ ಬಗೆಯ ಪಾನೀಯ ಹೀರುವ ಮನಸ್ಸು ನಿಮ್ಮದಾಗಿದ್ದರೆ, ಎಮಿರೇಟ್ಸ್ ಪ್ಯಾಲೆಸ್‌ನಲ್ಲಿ 24 ಕ್ಯಾರಟ್ ಪರಿಶುದ್ಧ ಬಂಗಾರದ ಹುಡಿಯಿಂದ ಅಲಂಕರಿಸಿದ ಕ್ಯಾಪುಚೀನೊವನ್ನು ಗುಟುಕರಿಸಬಹುದು. ಹೌದು, ಇದು ವಾಸ್ತವ ಹಾಗೂ ಹೆಸರಿಗೆ ತಕ್ಕಂತೆ ಐಷಾರಾಮಿ ಕೂಡ.
ಸಮುದ್ರ ದಂಡೆ, ಬಜಾರ್, ಮರಳುಗಾಡು
ದುಬೈನ ಸಮುದ್ರ ದಂಡೆಗಳು ಅತ್ಯಾಧುನಿಕ ಜೀವನಶೈಲಿಯ ನೆಲೆಗಳಾಗಿಯೂ ಪ್ರಸಿದ್ಧಿ ಪಡೆದಿವೆ. ಇಲ್ಲಿ ಲಾ ಮೆರ್‌ನಲ್ಲಿ ಸ್ಟ್ರೀಟ್ ಆರ್ಟ್, ಬೊಟಿಕ್ ಮಳಿಗೆಗಳು ಹಾಗೂ ಲಗೂನಾ ವಾಟರ್‌ಪಾರ್ಕ್ ನೋಡುಗರನ್ನು ಸೆಳೆಯುತ್ತವೆ. ಜೆ.ಬಿ.ಆರ್.ನಲ್ಲಿರುವ ಬೀಚ್‌ಗಳು ಜಲಕ್ರೀಡೆಗಳು, ಬಯಲು ಸಿನಿಮಾಗಳು, ಕೆಫೆಗಳಿಗೆ ಹೆಸರಾಗಿವೆ. ಚಟುವಟಿಕೆಗಳ ತಾಣವಾದ ಇಲ್ಲಿನ ಸಮುದ್ರ ದಂಡೆಗಳು ಕಾಸ್ಮೊಪಾಲಿಟನ್ ಚೈತನ್ಯವನ್ನು ತುಳುಕಿಸುತ್ತವೆ.
ಶಾಂತಿ ಹಾಗೂ ಮಾಂತ್ರಿಕತೆ ಇವೆರಡನ್ನೂ ಬಯಸುವುದಾದರೆ ಮರಳುಗಾಡಿನ ತಾಣಗಳಿಗೆ ತೆರಳಬಹುದು. ದುಬೈನಲ್ಲಿ ಪ್ಲ್ಯಾಟಿನಂ ಡೆಸರ್ಟ್ ಸಫಾರಿಗಳು ಒಂಟೆ ಸವಾರಿ, ಫಾಲ್ಕನ್ ಪ್ರದರ್ಶನ, ಮರಳುದಿಣ್ಣೆ ಚಾಲನೆ, ಹಾಗೂ ನಕ್ಷತ್ರಗಳ ಮಿಣುಕಿನಡಿ ಕುಳಿತು ಆಸ್ವಾದಿಸುವ ಗೋಮೆ ಡಿನ್ನರ್ ವಿಶಿಷ್ಟ ಅನುಭವಗಳನ್ನು ಲಭ್ಯವಾಗಿಸುತ್ತವೆ. ಪ್ರವಾಸ ಮುಗಿದ ಮೇಲೂ ಬಹುಕಾಲ ನೆನಪಿನಲ್ಲಿ ಉಳಿಯುವ ಅನುಭವಗಳು ಇವಾಗಿರುತ್ತವೆ.
ಮಕ್ಕಳಿಗೂ ಸೈ, ಮಗುವಿನ ಮನಸ್ಸುಳ್ಳ ವಯಸ್ಕರಿಗೂ ಸೈ
ಕುಟುಂಬ ಸಮೇತ ಪ್ರವಾಸದ ಮುದಕ್ಕಾಗಿ ಇವೆರಡೂ ನಗರಗಳು ಅತ್ಯಂತ ಪ್ರಶಸ್ತವಾಗಿವೆ. ಅಟ್ಲಾಂಟಿಸ್‌ನ ಡಾಲ್ಫಿನ್ ಬೇನಲ್ಲಿ ಮಕ್ಕಳು ಸುರಕ್ಷಿತ ಹಾಗೂ ನಿಗಾ ವ್ಯವಸ್ಥೆಯಡಿ ಡಾಲ್ಫಿನ್‌ಗಳೊಡನೆ ನಿಕಟ ಸಂಪರ್ಕಕ್ಕೆ ಬಂದು ರಂಜನೆ ಪಡೆಯಬಹುದು.
ಅಬೂಧಾಬಿಯಲ್ಲಿನ ‘ಸೀ ವರ್ಲ್ಡ್’, ಭೇಟಿ ನೀಡಲೇಬೇಕಾದ ಮತ್ತೊಂದು ಸ್ಥಳವಾಗಿದೆ. ಮನರಂಜನೆ ಹಾಗೂ ಶಿಕ್ಷಣದ ಸಂಯೋಜನೆಯಾದ ಇದು ಕುತೂಹಲದ ಮನಸ್ಸುಳ್ಳ ಎಲ್ಲಾ ವಯೋಮಾನದವರಿಗೂ ಇಷ್ಟವಾಗುತ್ತದೆ. ಅಂತೆಯೇ, ದುಬೈನಲ್ಲಿನ ಡಾಲ್ಫಿನೇರಿಯಂನಲ್ಲಿ ಎಲ್ಲರಲ್ಲೂ ನಗೆಯುಕ್ಕಿಸುವ ಡಾಲ್ಫಿನ್ ಹಾಗೂ ಸೀಲ್ ಷೋಗಳನ್ನು ದರ್ಶಿಸಬಹುದು.
ವಿಲಾಸಿ ಸೌಕರ್ಯಗಳು
ಉದಾರವಾಗಿ ಹಣ ವ್ಯಯಿಸಲು ಸಿದ್ಧವಿದ್ದರೆ ದುಬೈ ಹಾಗೂ ಅಬೂಧಾಬಿಗಳಲ್ಲಿ ಅದಕ್ಕೂ ಸಾಕಷ್ಟು ಅವಕಾಶಗಳಿವೆ. ದುಬೈ ಸ್ಕೈಲೈನ್‌ನಲ್ಲಿ ಹೆಲಿಕಾಪ್ಟರ್ ರೈಡ್ ಮಾಡಬಹುದು. ಬುರ್ಜ್ ಖಲೀಫಾದಲ್ಲಿ ಖಾಸಗಿಯಾಗಿ ಭೋಜನ ಸವಿಯಬಹುದು. ಅಬೂಧಾಬಿಯಲ್ಲಿನ ಅರೇಬಿಯನ್ ನೈಟ್ಸ್ ಹಳ್ಳಿಯಲ್ಲಿ ರಾತ್ರಿ ತಂಗಿದ್ದು ಮರಳುಗಾಡಿನ ಸಾಂಪ್ರದಾಯಿಕ ಸಂಸ್ಕೃತಿಯನ್ನು ಅನ್ವೇಷಿಸಬಹುದು.
ದುಬೈನ ಲಾ ಪೆರ್ಲೆಯಲ್ಲಿ ವಿವಿಧ ಕಸರಸ್ತುಗಳು ಹಾಗೂ ನೀರಿನಿಂದ ಉಂಟಾಗುವ ಭ್ರಮೆಗಳನ್ನು ನೋಡಬಹುದು. ಜೊತೆಗೆ ಸ್ವಾದಿಷ್ಟಮಯ ಭೋಜನ ಸವಿದು ಕನಸಿನ ರಾತ್ರಿಯನ್ನು ಕಳೆಯಬಹುದು.
ಸದಾ ಹೊಸತು
ಸದಾ ಹೊಸತನದ ದಿಗಂತವನ್ನು ವಿಸ್ತರಿಸುವುದರಲ್ಲಿ ದುಬೈ ಮತ್ತು ಅಬೂಧಾಬಿಗಳ ಸೊಬಗು ಅಡಗಿದೆ. ಸಮುದ್ರ ತಳದ ರೆಸ್ಟೋರೆಂಟ್, ಗಾಜಿನ ಕೋಶದಲ್ಲಿನ ಸವಾರಿ, ಸಾಂಸ್ಕೃತಿಕ ಹೆಗ್ಗುರುತುಗಳು, ಬಂಗಾರದ ಹುಡಿ ಸೇರಿಸಿದ ಕಾಫಿ ಹೀಗೆ ಇಲ್ಲಿ ಪ್ರತಿಯೊಂದೂ ಮರುಅನ್ವೇಷಣೆಯ ಅದ್ಭುತಗಳಾಗಿವೆ.
ನೀವು ಈ ಮುನ್ನವೇ ಈ ಸ್ಥಳಗಳಿಗೆ ಭೇಟಿ ನೀಡಿದ್ದರೂ ಇಲ್ಲಿ ಒಂದಷ್ಟನ್ನು ಮಾತ್ರವೇ ನೋಡಿರುವ ಸಾಧ್ಯತೆಯೇ ಹೆಚ್ಚು. ಈ ನಗರಗಳು ಹೊಸ ಅನುಭವ ಹಾಗೂ ಉನ್ನತ ಸ್ತರದ ರೋಮಾಂಚನವನ್ನು ಅನ್ವೇಷಿಸಲು ನೋಡಗರನ್ನು ಸದಾ ಸ್ವಾಗತಿಸುತ್ತವೆ.
ಅಧಿಕ ವೇಗದಿಂದ ಕೂಡಿದ ಸಾಹಸವಾಗಿರಲಿ ಅಥವಾ ಭರಪೂರ ಕಥನಗಳಿರುವ ಸಾವಧಾನದ ಪ್ರಯಾಣವಾಗಿರಲಿ, ದುಬೈ ಮತ್ತು ಅಬೂಧಾಬಿಗಳು ಎರಡನ್ನೂ ಲಭ್ಯವಾಗಿಸುತ್ತವೆ. ಆ ಮೂಲಕ, ಕುಟುಂಬಗಳು, ಪ್ರಣಯ ಜೋಡಿಗಳು ಹಾಗೂ ಏಕಾಂಗಿ ಪ್ರಯಾಣಿಕರು ಎಲ್ಲರಿಗೂ ಮುದನೀಡುತ್ತವೆ.
ನಮ್ಮ ‘ಟ್ರ್ಯಾವೆಲ್, ಎಕ್ಸ್ ಪ್ಲೋರ್, ಸೆಲೆಬ್ರೇಟ್ ಲೈಫ್’ ಎಂಬ ಪಾಡ್‌ಕಾಸ್ಟ್ ನ ವಿಶೇಷ ಸಂಚಿಕೆಯಲ್ಲಿ ನಾನು ಮತ್ತು ನನ್ನ ಸಹ-ಸ್ಥಾಪಕರಾದ ನೀಲ್ ಇದನ್ನೇ ಪ್ರಸ್ತುತಪಡಿಸಿದ್ದೇವೆ. ಈ ನಗರಗಳ ಪ್ರವಾಸವು ಯಾವಾಗಲೂ ಎಲ್ಲರೊಂದಿಗೂ ಹಂಚಿಕೊಳ್ಳಬೇಕು ಎನ್ನಿಸುವಂತಹ ವಿಶಿಷ್ಟ ಅನುಭವಗಳಿಂದ ಕೂಡಿರುತ್ತದೆ.
ದುಬೈ ಮತ್ತು ಅಬೂಧಾಬಿಗೆ ‘ವೀಣಾ ವರ್ಲ್ಡ್’ ವಿಶಾಲ ಶ್ರೇಣಿಯ ಪ್ರವಾಸಗಳನ್ನು ರೂಪಿಸಿದೆ. ನೀವು ಇಲ್ಲಿಗೆ ಮೊದಲ ಬಾರಿ ಭೇಟಿ ನೀಡುತ್ತಿರಬಹುದು ಅಥವಾ ಐದನೇ ಬಾರಿಗೆ ಭೇಟಿ ನೀಡುತ್ತಿರಬಹುದು ಯಾವುದಕ್ಕೂ ಒಪ್ಪುವ ಯೋಜನೆಗಳು ಇವಾಗಿವೆ. ಇಲ್ಲವೇ, ನಿಮ್ಮ ವೈಯಕ್ತಿಕ ಅಭಿರುಚಿಗೆ ತಕ್ಕುದಾದ ಪ್ರವಾಸಾನುಭವ ಬಯಸುತ್ತೀರಾ? ಹೀಗಿದ್ದರೆ, ನಮ್ಮ ಕಸ್ಟಮೈಸ್ಟ್ ಹಾಲಿಡೇಸ್ ತಂಡದವರನ್ನು ಫೋನ್‌ನಲ್ಲೇ ಸಂಪರ್ಕಿಸಬಹುದು.
ಅಂದಂತೆ, ನಿಮ್ಮ ಮುಂದಿನ ಪರ್ಯಟನೆ ಎಲ್ಲಿಗೆ?
Post your Comment
Please let us know your thoughts on this story by leaving a comment.