We Just Opened 3 New Branches!
We're Open, now in Vadodara, Kochi & Nungambakkam (Chennai).
India
Toll free
Our Toll Free Numbers:

1800 313 5555

Call us
You can also call us on:

+91 22 2101 7979

+91 22 2101 6969

Foreign Nationals
Foreign Nationals/NRIs travelling

Within India+91 915 200 4511

Outside India+91 887 997 2221

Business Hours

Business hours: 10AM - 7PM

Explore Veena World Travel Stories

  • Travel Inspiration
  • Destination Guides
  • Travel Tips

ನಿಮ್ಮ ಮೆಚ್ಚಿನ ದೇಶ ಯಾವುದು?

6 mins. read
Veena Patil
Veena Patil
6 Mins Read
August 21, 2026
August 21, 2026

Quick Summary

‘ವೀಣಾ ವರ್ಲ್‌್ಡ’ನ ‘ಓಪನ್‌ ಹೌಸ್‌’ನಲ್ಲಿ ವಾರಕ್ಕೊಮ್ಮೆ ಕೆಲಸವಲ್ಲದ ಅನೌಪಚಾರಿಕ ಹರಟೆಗಾಗಿ ಸಮಯ ಕಳೆಯುವ ಪದ್ಧತಿ ಇದೆ.

ಯಾವುದೇ ವಿಚಾರವು ನಿಮ್ಮನ್ನು ಕಾಡಲು ಶುರುವಾದರೆ, ಮನೆಗೆ ಹೋದ ನಂತರ ಮೊಬೈಲ್‌ ದೂರವಿಟ್ಟು ಶಾಂತವಾಗಿ ಯೋಚಿಸಿ ನಿರ್ಧಾರಕ್ಕೆ ಬನ್ನಿ.

ಆಸ್ಟ್ರಿಯಾ ಮತ್ತು ಜಪಾನ್‌ ನಡುವೆ ಅಂತಿಮ ತೀರ್ಪು ನೀಡಿದಾಗ, ಗೊಂದಲವಿಲ್ಲದೆ ಜಪಾನ್‌ ಗೆದ್ದಿತು ಮತ್ತು ನಿಮ್ಮ ಮೆಚ್ಚಿನ ದೇಶ ನಿರ್ಧಾರವಾಯಿತು.

ಜಪಾನ್‌ ಅನ್ನು ಮುಂಚೂಣಿಗೆ ತಂದದ್ದು ಶಾಂತಿಪ್ರಿಯತೆ, ಸೌಮ್ಯ ನಡೆನುಡಿ ಮತ್ತು ವಿನಮ್ರತೆಯಂತಹ ಗುಣಗಳು.

ಸಣ್ಣ ದೇಶವಾಗಿದ್ದರೂ ಜಪಾನ್‌ ತನ್ನ ಸಂಸ್ಕೃತಿ ಮತ್ತು ಪರಂಪರೆಗಳನ್ನು ಗೌರವಿಸಿ ಗುಣಮಟ್ಟ ಹಾಗೂ ನಿಖರತೆಯಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ.

ಜಪಾನ್‌ ಜನರಲ್ಲಿ ಕೆಲಸ ಮತ್ತು ಬದುಕಿನ ಉತ್ಸಾಹ ಕಡಿಮೆಯಾಗದಿರುವುದು ದೀರ್ಘಾಯುಷ್ಯಕ್ಕೆ ಕಾರಣವಾಗಬಹುದು ಎಂಬ ಭಾವನೆ ಇದೆ.

Published in Vijay Karanaka. Date 23rd August, 2026

ನಮ್ಮ ಅದ್ಭುತ ಭಾರತವನ್ನು ಹೊರತುಪಡಿಸಿ ಎಂದು ಬಿಡಿಸಿ ಹೇಳಬೇಕಿಲ್ಲ ಬಿಡಿ

…ಈಗ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಯಂತೆ ಅಂತಿಮ ತೀರ್ಪು ನೀಡಬೇಕಾದ ಜವಾಬ್ದಾರಿ ನನ್ನದಾಗಿತ್ತು. ಎರಡೂ ದೇಶಗಳ ನಡುವೆ ತುರುಸಿನ ಪೈಪೋಟಿ ಆರಂಭವಾಯಿತು. ಎರಡೂ ದೇಶಗಳು ತಮ್ಮಲ್ಲಿನ ಹಿರಿಮೆಗಳನ್ನು ಮನಸ್ಸಿನ ಪರದೆಯ ಮೇಲೆ ಅನಾವರಣಗೊಳಿಸುತ್ತಲೇ ಇದ್ದವು. ಆದರೆ, ಇದು ಕೊನೆಯೇ ಇಲ್ಲದ ಕತೆಯಾಗುವುದು ನನಗೆ ಬೇಕಿರಲಿಲ್ಲ…

 

Main Article:

‘ವೀಣಾ ವರ್ಲ್ಡ್’ನಲ್ಲಿ ‘ಓಪನ್ ಹೌಸ್’ ಎಂಬ ಪದ್ಧತಿಯೊಂದಿದೆ. ನಾನು ಮುಂಬೈನಲ್ಲಿರುವಾಗ ನನ್ನನ್ನು ಭೇಟಿಯಾಗಲು ಬಯಸುವವರೊಂದಿಗೆ ವಾರಕ್ಕೊಮ್ಮೆ ಸಮಯ ಕಳೆಯುತ್ತೇನೆ. ಇದಕ್ಕೊಂದು ಅಲಿಖಿತ ನಿಯಮವಿದೆ: ಯಾವುದೇ ಪೂರ್ವನಿಗದಿತ ಕಾರ್ಯಸೂಚಿ ಇರಬಾರದು, ಕೆಲಸದ ಬಗ್ಗೆ ಮಾತನಾಡಬಾರದು. ಅಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಹರಟೆ ಹೊಡೆಯಬೇಕು ಅಷ್ಟೇ.

ಒಮ್ಮೆ ಇಂತಹ ಅನೌಪಚಾರಿಕ ಮಾತುಕತೆಗಾಗಿ ನಮ್ಮ ‘ಕಸ್ಟಮೈಸ್ಡ್ ಹಾಲಿಡೇಸ್’ ತಂಡದವರು ಬಂದಿದ್ದರು. ನಮ್ಮ ಮಾತುಕತೆಯ ನಡುವೆ ತನ್ವಿ ಚೂರಿ ಅವರು ನನ್ನನ್ನು, ‘ನಿಮ್ಮ ಮೆಚ್ಚಿನ ದೇಶ ಯಾವುದು?’- ಎಂದು ಕೇಳಿದರು. ಇದು ಎಷ್ಟು ಕಷ್ಟದ ಪ್ರಶ್ನೆಯಲ್ಲವೇ? ಒಬ್ಬ ತಾಯಿಗೆ ತನ್ನ ಮಕ್ಕಳಲ್ಲಿ ಯಾರು ಹೆಚ್ಚು ಇಷ್ಟ ಎಂದು ಕೇಳಿದರೆ ಆಕೆ ಏನು ಹೇಳಲು ಆಗುತ್ತದೆ?- ಈಗ ಅಂಥದ್ದೇ ಪರಿಸ್ಥಿತಿ ನನ್ನದಾಗಿತ್ತು. ನಾನು ಪ್ರತಿಯೊಂದು ದೇಶವನ್ನೂ ಬೇರೆ ಬೇರೆ ಕಾರಣಕ್ಕಾಗಿ ಇಷ್ಟಪಡುತ್ತೇನೆ. ಸರಿ, ನಾವು ಈ ಬಗ್ಗೆ ಸ್ವಲ್ಪ ಹೊತ್ತು ಚರ್ಚಿಸಿದೆವು. ಆದರೆ, ಆ ಸಮಯದಲ್ಲಿ ನಾನು ನೀಡಿದ ಉತ್ತರದಿಂದ ನನಗೇ ತೃಪ್ತಿಯಾಗಲಿಲ್ಲ. ಯಾರಾದರೂ ನನ್ನನ್ನು ಈ ಪ್ರಶ್ನೆ ಕೇಳಿದರೆ, ಅದಕ್ಕೊಂದು ಖಚಿತವಾದ ಉತ್ತರ ನನ್ನಲ್ಲಿರಬೇಕು ಎಂದು ಅನ್ನಿಸತೊಡಗಿತು. ಹೀಗಾಗಿ, ಆ ಪ್ರಶ್ನೆ ನನ್ನ ಮನಸ್ಸಿನಲ್ಲಿ ಉಳಿದು ಕಾಡತೊಡಗಿತು.

ನನ್ನ ಜೀವನಯಾನದ ಉತ್ತರಾರ್ಧದಲ್ಲಿ ನಾನು ರೂಢಿಸಿಕೊಂಡಿರುವ ಒಂದು ಒಳ್ಳೆಯ ಅಭ್ಯಾಸವೇನೆಂದರೆ, ಯಾವುದೇ ವಿಚಾರವು ನನ್ನನ್ನು ಗುಂಗಿ ಹುಳುವಿನಂತೆ ಕಾಡಲು ಶುರುವಿಟ್ಟುಕೊಂಡರೆ ಮನೆಗೆ ಹೋದ ಮೇಲೆ ಆ ರಾತ್ರಿ ನನ್ನ ಮೊಬೈಲ್‌ನಿಂದ ದೂರವಿದ್ದು, ಶಾಂತವಾಗಿ ಕುಳಿತು, ಕಣ್ಣು ಮುಚ್ಚಿಕೊಂಡು, ಆ ವಿಷಯದ ಬಗ್ಗೆ ಸಂಪೂರ್ಣ ಗಮನಕೇಂದ್ರೀಕರಿಸಿ ಯೋಚಿಸುತ್ತೇನೆ. ಈ ಬಾರಿಯೂ ಹಾಗೆಯೇ ಮಾಡಿದೆ. “ನಾನು ನಿಜವಾಗಿಯೂ ಯಾವ ದೇಶವನ್ನು ಎಲ್ಲಕ್ಕಿಂತ ಹೆಚ್ಚು ಇಷ್ಟ ಪಡುತ್ತೇನೆ?” ಎಂದು ನನ್ನನ್ನೇ ಕೇಳಿಕೊಂಡೆ. ಇದ್ದಕ್ಕಿದ್ದಂತೆ, ಮಾಯಾಹಾಸಿನ ಮೇಲೆ ಕುಳಿತ ಪೀಟರ್ ಪ್ಯಾನ್‌ನಂತೆ ನಾನು ಏಳು ಖಂಡಗಳಾದ್ಯAತ ಹಾರಾಡತೊಡಗಿದೆ. ಪ್ರತಿಯೊಂದು ದೇಶವೂ “ನಾನೇ ಆ ದೇಶ!” ಎಂದು ಕೈ ಎತ್ತಿ ಹೇಳುತ್ತಿರುವಂತೆ ಭಾಸವಾಯಿತು. ಇದರಿಂದ ಬಹಳ ಕಷ್ಟವೇ ಆಯಿತು; ಏಕೆಂದರೆ ಪ್ರತಿಯೊಂದು ದೇಶವೂ ನನಗೆ ಅದ್ಭುತ ನೆನಪುಗಳನ್ನು ನೀಡಿದೆ. ಆದರೆ, ನನಗೋ ಈಗ ಒಂದು ನಿರ್ದಿಷ್ಟ ಉತ್ತರವನ್ನು ಕಂಡುಕೊಳ್ಳಲೇಬೇಕಿತ್ತು. ಅದಕ್ಕಾಗಿ ಪ್ರತಿಯೊಂದು ದೇಶದ ಬಗ್ಗೆಯೂ ನಿಷ್ಠುರವಾಗಿಯೇ ಯೋಚಿಸಬೇಕಾಯಿತು. ಮತ್ತೊಂದು ಒಳ್ಳೆಯ ಸಂಗತಿಯೆಂದರೆ, ಯಾವುದೇ ವಿಷಯದ ಬಗ್ಗೆ ನಿರ್ದಿಷ್ಟ ನಿರ್ಧಾರವನ್ನು ತೆಗೆದುಕೊಳ್ಳಲೇಬೇಕು ಎಂಬ ಪಾಠವನ್ನು ವ್ಯವಹಾರ ಕ್ಷೇತ್ರವು ನನಗೆ ಕಲಿಸಿಕೊಟ್ಟಿತ್ತು.

ಹೀಗಾಗಿ, ನನ್ನ ತಲೆಯೊಳಗಿದ್ದ ಪುಟ್ಟ ನ್ಯಾಯಪೀಠಕ್ಕೆ “ಒಂದು ನಿರ್ಧಾರವನ್ನು ತೆಗೆದುಕೊಳ್ಳಲೇಬೇಕು!” ಎಂಬುದನ್ನು ಪದೇಪದೇ ನೆನಪಿಸುತ್ತಿದ್ದೆ. ಆಡಿಷನ್, ಅರ್ಹತಾ ಸುತ್ತು, ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್‌ಗಳನ್ನು ದಾಟಿದ ಬಳಿಕ ಅಂತಿಮ ಸುತ್ತಿಗೆ ಎರಡು ದೇಶಗಳು ಆಯ್ಕೆಯಾದವು- ಆಸ್ಟ್ರಿಯಾ ಮತ್ತು ಜಪಾನ್. ಈಗ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಯಂತೆ ಅಂತಿಮ ತೀರ್ಪು ನೀಡಬೇಕಾದ ಜವಾಬ್ದಾರಿ ನನ್ನದಾಗಿತ್ತು. ಎರಡೂ ದೇಶಗಳ ನಡುವೆ ತುರುಸಿನ ಪೈಪೋಟಿ ಆರಂಭವಾಯಿತು. ಎರಡೂ ದೇಶಗಳು ತಮ್ಮಲ್ಲಿನ ಹಿರಿಮೆಗಳನ್ನು ಮನಸ್ಸಿನ ಪರದೆಯ ಮೇಲೆ ಅನಾವರಣಗೊಳಿಸುತ್ತಲೇ ಇದ್ದವು. ಆದರೆ, ಇದು ಇಸ್ರೇಲ್–ಪ್ಯಾಲೆಸ್ಟೈನ್ ಅಥವಾ ರಷ್ಯಾ–ಉಕ್ರೇನ್ ವಿವಾದದಂತೆ ಕೊನೆಯೇ ಇಲ್ಲದ ಕತೆಯಾಗುವುದು ನನಗೆ ಬೇಕಿರಲಿಲ್ಲ. ಕಟ್ಟಕಡೆಗೆ ಯಾವುದೇ ಗೊಂದಲವಿಲ್ಲ, ಯಾವುದೇ ದ್ವಂದ್ವವೂ ಇಲ್ಲ; ಜಪಾನ್ ಗೆದ್ದಿತು. ಆಸ್ಟ್ರಿಯಾ ಹಿಂದೆ ಸರಿಯಿತು; ನನ್ನ ನೆಚ್ಚಿನ ದೇಶ ಯಾವುದೆಂಬುದು ನಿರ್ಧಾರವಾಯಿತು. ಉತ್ತರ ಸಿಕ್ಕ ಸಂತೃಪ್ತಿಯಿಂದ ಕಣ್ಣು ತೆರೆದಾಗ ನನ್ನ ಮನಸ್ಸು ಸಂತೋಷದಿAದ ಹಾರಾಡುವ ಚಿಟ್ಟೆಯಂತೆ ಪೂರ್ತಿ ಸ್ವತಂತ್ರವಾಗಿರುವAತೆೆಯೂ ಹಗುರವಾಗಿರುವಂತೆಯೂ ಅನ್ನಿಸಿತು.

ಆದರೆ, ಈ ಸ್ಪರ್ಧೆಯಲ್ಲಿ ಇತರ ಎಲ್ಲ ದೇಶಗಳಿಗಿಂತ ಜಪಾನ್‌ಅನ್ನು ಮುಂಚೂಣಿಗೆ ತಂದಿದ್ದು ಯಾವುದು? ಶಾಂತಿಪ್ರಿಯತೆ,  ಸೌಮ್ಯ ನಡೆನುಡಿ ಹಾಗೂ ವಿನಮ್ರತೆಯಿಂದ ಹೃದಯಕ್ಕೆ ಆಪ್ತವಾಗುವ ಜಪಾನ್ ಸೌಜನ್ಯ ಮತ್ತು ಸರಳತೆಯ ಪ್ರತಿಯೊಂದು ಪರೀಕ್ಷೆಯಲ್ಲೂ ತೇರ್ಗಡೆಯಾಗುತ್ತದೆ. ಅಷ್ಟು ಸಣ್ಣ ದೇಶವಾಗಿದ್ದರೂ ಬೃಹತ್ ಅಮೆರಿಕಕ್ಕೆ ಸರಿಸಮಾನವಾಗಿ ನಿಂತು, ತನ್ನ ಸಂಸ್ಕೃತಿ ಮತ್ತು ಪರಂಪರೆಗಳನ್ನು ಗೌರವಿಸುತ್ತಲೇ ಗುಣಮಟ್ಟ ಹಾಗೂ ನಿಖರತೆಯಲ್ಲಿ ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ. ಹಲವು ರೀತಿಯಲ್ಲಿ ಜಪಾನ್ ನನಗೆ ಒಂದು ಆದರ್ಶದಂತೆ ಕಾಣುತ್ತದೆ; ಒಂದೆಡೆ ವಿನಮ್ರತೆ, ಮತ್ತೊಂದೆಡೆ ಅಸಾಧಾರಣ ಶಕ್ತಿ ಎರಡೂ ಮೇಳೈಸಿರುವ ಒಬ್ಬ ಅದ್ಭುತ ವ್ಯಕ್ತಿಯಂತೆ ತೋರುತ್ತದೆ; ತನ್ನಲ್ಲಿರುವುದರಲ್ಲಿ ತೃಪ್ತಿ, ಆದರೆ ಇನ್ನೂ ಏನನ್ನೋ ಸೃಷ್ಟಿಸಬೇಕು ಎಂಬ ವಿಚಾರದಲ್ಲಿ ಎಂದಿಗೂ ತಣಿಯದ ಮನೋಭಾವ- ಹೀಗೆ ಆ ದೇಶದಲ್ಲಿ ಕಂಡುಬರುವ ಇಂತಹ ಸಕಾರಾತ್ಮಕ ಗುಣಗಳ ಪಟ್ಟಿಯನ್ನು ಗಮನಿಸಿದಾಗ, “ಅಬ್ಬಾ, ಎಂತಹ ಅದ್ಭುತ ದೇಶವಿದು!” ಎಂದು ಉದ್ಗರಿಸದೇ ಇರಲು ಸಾಧ್ಯವೇ ಇಲ್ಲವಾಗುತ್ತದೆ.

ಜಪಾನೀಯರಲ್ಲಿ ನೂರು ವರ್ಷ ವಯಸ್ಸಾದವರಲ್ಲೂ ಕೆಲಸ ಮತ್ತು ಬದುಕಿನ ಬಗ್ಗೆ ಉತ್ಸಾಹ ಕುಗ್ಗಿದಂತೆ ಕಾಣಿಸದು. ಬಹುಶಃ ಅವರು ಸದಾ ಚಟುವಟಿಕೆಯಿಂದ ಇರುವುದೇ ಇದಕ್ಕೆ ಕಾರಣವಿರಬಹುದು. ದೀರ್ಘಾಯುಷ್ಯಕ್ಕಾಗಿ ಜಗತ್ತಿಗೆ ಅತ್ಯಂತ ಸರಳವಾದ ಸೂತ್ರವೊಂದನ್ನೂ ಅವರು ಕೊಡುಗೆಯಾಗಿ ನೀಡಿದ್ದಾರೆ: ಹಬೆಯಲ್ಲಿ ಬೇಯಿಸಿದ, ಹುದುಗಿಸಿದ, ನಿಧಾನವಾಗಿ ಬೇಯಿಸಿದ ಅಥವಾ ಗ್ರಿಲ್ ಮಾಡಿದ ತರಕಾರಿಯನ್ನು ಸಾಕಷ್ಟು ಸೇವಿಸಿ; ತಾಜಾ ಆಹಾರ ಸೇವಿಸಿ, ಸಾವಧಾನದಿಂದ ಸೇವಿಸಿ, ಸಣ್ಣ ತಟ್ಟೆಗಳಲ್ಲಿ ಸೇವಿಸಿ, ಹೊಟ್ಟೆಯಲ್ಲಿ ಸ್ವಲ್ಪ ಜಾಗ ಉಳಿದಿರುವಂತೆ ಸೇವಿಸಿ; ಹೆಚ್ಚು ನಡೆಯಿರಿ ಹಾಗೂ ಬೆಳಗಿನ ವ್ಯಾಯಾಮವನ್ನು ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಳ್ಳಿ. ಇವನ್ನು ರೂಢಿಸಿಕೊಂಡಿರುವ ಜಪಾನೀಯರು ಸುಶಿ, ಕಿಮೋನೊ, ಸುಮೊ, ಬೇಸ್‌ಬಾಲ್, ಸಮುರಾಯಿ, ಬೌದ್ಧ ಧರ್ಮ ಮತ್ತು ಶಿಂಟೋ ಧರ್ಮಗಳ ಬಗೆಗೆ ತಮಗಿರುವ ಹೆಮ್ಮೆಯಿಂದಲೂ ಗಮನಸೆಳೆಯುತ್ತಾರೆ.

ಸ್ಟೀವ್ ಜಾಬ್ಸ್ ಜಪಾನಿನ ಜೀವನತತ್ತ್ವದ ದೊಡ್ಡ ಅಭಿಮಾನಿಯಾಗಿದ್ದರು. ಝೆನ್ ಮತ್ತು ಬೌದ್ಧ ಧರ್ಮದ ತತ್ತ್ವಗಳನ್ನು ತಮ್ಮ ಬದುಕಿನಲ್ಲಿಯೂ ಅಳವಡಿಸಿಕೊಂಡಿದ್ದರು. ಆಪಲ್  ವಿನ್ಯಾಸದಲ್ಲಿನ ಸರಳ ಸೊಬಗಿನ ಹಿಂದಿನ ಪ್ರೇರಣೇ ಇದೇ ಎಂದೂ ಹೇಳಲಾಗುತ್ತದೆ. ಅದೇನೇ ಇರಲಿ, ನಾನು ಕೂಡ ಈ ಜೀವನತತ್ತ್ವದ ಅಭಿಮಾನಿಯೇ. ಯಾರೇ ಆದರೂ ಅರ್ಥಮಾಡಿಕೊಂಡು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬಹುದಾದ ಸರಳ ವಿಚಾರಧಾರೆ ಇದಾಗಿದೆ. ಈ ವಿಷಯದ ಬಗ್ಗೆ ನಮ್ಮ ಗ್ರಂಥಾಲಯದಲ್ಲಿ ಕನಿಷ್ಠ ಇಪ್ಪತ್ತು ಪುಸ್ತಕಗಳಾದರೂ ಇವೆಯೇನೋ. ಅದರಂತೆ, ಇಲ್ಲಿ ಇಕಿಗೈ ಎಂದರೆ ಬದುಕಿಗೆ ಒಂದು ಉದ್ದೇಶ ಹೊಂದಿರುವುದು; ಇಚಿಗೊ ಇಚಿಯೆ ಎಂದರೆ ಮರಳಿ ಬಾರದ ವರ್ತಮಾನದ ಕ್ಷಣವನ್ನು ಸಂಪೂರ್ಣವಾಗಿ ಬದುಕುವುದು; ಕೈಜೆನ್ ಎಂದರೆ ಬದಲಾವಣೆಯನ್ನು ಸ್ವೀಕರಿಸಿ ನಿರಂತರವಾಗಿ ಸುಧಾರಣೆಗೊಳ್ಳುವುದು; ಗಮನ್ ಎಂದರೆ ಕಷ್ಟಗಳನ್ನು ತಾಳ್ಮೆಯಿಂದ ಎದುರಿಸುವುದು; ವಾಬಿ-ಸಾಬಿ ಎಂದರೆ ಅಪೂರ್ಣತೆಯಲ್ಲೂ ಸೌಂದರ್ಯವನ್ನು ಕಂಡುಕೊಳ್ಳುವುದು; ಗಂಬಟ್ಟೆ ಎಂದರೆ ಎಂದಿಗೂ ಸೋಲೊಪ್ಪಿಕೊಳ್ಳದೆ ಎದ್ದು ನಿಲ್ಲುವುದು; ಕಿಂಟ್ಸುಗಿ ಎಂದರೆ ಒಡೆದ ವಸ್ತುವನ್ನು ಚಿನ್ನದೊಂದಿಗೆ ಜೋಡಿಸಿ ಅದಕ್ಕೆ ಮೊದಲಿಗಿಂತಲೂ ಹೆಚ್ಚಿನ ಸೌಂದರ್ಯ ನೀಡುವುದು; ಒಬೈಟೋರಿ ಎಂದರೆ ನಮ್ಮನ್ನು ಇತರರೊಂದಿಗೆ ಎಂದಿಗೂ ಹೋಲಿಸಿಕೊಳ್ಳದಿರುವುದು; ಕಾನ್ಸೊ ಎಂದರೆ ಸರಳತೆ ಮತ್ತು ಗೊಂದಲರಹಿತ ಬದುಕನ್ನು ಸಂಭ್ರಮಿಸುವುದು; ಮೊಟ್ಟೈನೈ ಎಂದರೆ ಸಮಯ, ಆಹಾರ ಅಥವಾ ಸಂಪನ್ಮೂಲಗಳನ್ನು ಎಂದಿಗೂ ವ್ಯರ್ಥ ಮಾಡದಿರುವುದು; ಮತ್ತು ಶಿನ್ರಿನ್-ಯೋಕು ಎಂದರೆ ಪ್ರಕೃತಿಯಲ್ಲಿರುವ ಗುಣಪಡಿಸುವ ಶಕ್ತಿಯನ್ನು ಅರಿಯುವುದು.

‘ಉದಯಿಸುವ ಸೂರ್ಯನ ನಾಡು’ ಎಂದೇ ಹೆಸರಾದ ಜಪಾನ್, ಬೇಸಿಗೆ ಮತ್ತು ಚಳಿಗಾಲದ ಒಲಿಂಪಿಕ್ಸ್ ಎರಡನ್ನೂ ಆಯೋಜಿಸಿದ ಏಷ್ಯಾದ ಮೊದಲ ದೇಶವಾಗಿದೆ. ಜಗತ್ತಿನಲ್ಲೇ ಅತ್ಯಂತ ದುಬಾರಿ ಜೀವನ ವೆಚ್ಚದ ದೇಶಗಳ ಪೈಕಿ ಒಂದಾಗಿರುವ ಜಪಾನ್, ಅತ್ಯಧಿಕ ಜೀವಿತಾವಧಿ ಮತ್ತು ಅತ್ಯಂತ ಕಡಿಮೆ ಶಿಶುಮರಣ ಪ್ರಮಾಣವನ್ನೂ ಸಾಧಿಸಿದೆ. ಜಗತ್ತಿನ ಎಂಟನೇ ಅತಿ ದೊಡ್ಡ ರಕ್ಷಣಾ ಬಜೆಟ್, ನಾಲ್ಕನೇ ಅತಿ ದೊಡ್ಡ ವಹಿವಾಟು ಪ್ರಮಾಣ ಹಾಗೂ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯನ್ನು ಹೊಂದಿದೆ. ತನ್ನ ಚಕ್ರವರ್ತಿಗೆ ಪರಮೋಚ್ಚ ಗೌರವ ನೀಡುವ ಸಾಂವಿಧಾನಿಕ ರಾಜಪ್ರಭುತ್ವವಾಗಿರುವ ಈ ದೇಶದಲ್ಲಿ ಜನಸಂಖ್ಯೆಯ ಶೇಕಡಾ 98.5ರಷ್ಟು ಮಂದಿ ಜಪಾನೀಯರಾಗಿದ್ದಾರೆ. ಪರಮಾಣು ಬಾಂಬ್ ದಾಳಿಯ ಭೀಕರ ವಿನಾಶದ ಬಳಿಕವೂ ಈ ನಾಡು  ಮತ್ತೆ ಎದ್ದು ನಿಂತಿದೆ. ಎರಡು ವಿಶ್ವಯುದ್ಧಗಳಲ್ಲಿ ತನ್ನ ಪಾತ್ರವನ್ನು ನಿರ್ವಹಿಸಿದೆ. ಪ್ರತಿದಿನವೂ ಭೂಕಂಪ ಮತ್ತು ಸುನಾಮಿಗಳ ಅಪಾಯವನ್ನು ಎದುರಿಸುತ್ತಿದ್ದರೂ ಎಂದಿಗೂ ನಿಲ್ಲದೆ ಮುನ್ನಡೆಯುತ್ತಿದೆ. ಜಪಾನಿನ ಶೇಕಡಾ 73ರಷ್ಟು ಭೂಭಾಗ ಪರ್ವತಗಳಿಂದ ಕೂಡಿದ್ದು, ಸುಮಾರು ಶೇಕಡಾ 67ರಷ್ಟು ಪ್ರದೇಶ ಅರಣ್ಯದಿಂದ ಆವೃತವಾಗಿದೆ. 14,000ಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿರುವ ದ್ವೀಪರಾಷ್ಟ್ರವು ಜಾಗತಿಕ ಮಟ್ಟದ ಪ್ರಮುಖ ಸಂಶೋಧನಾ ಶಕ್ತಿಕೇಂದ್ರವಾಗಿದೆ. ಹೋಲಿಕೆಯಲ್ಲಿ ಸಣ್ಣ ದೇಶವಾಗಿದ್ದರೂ 97 ವಿಮಾನ ನಿಲ್ದಾಣಗಳನ್ನು ಹೊಂದಿದೆ ಮತ್ತು ಪ್ರಪಂಚದ ಅತಿ ದೊಡ್ಡ ವಾಹನ ಉತ್ಪಾದಕ ರಾಷ್ಟ್ರಗಳ ಪೈಕಿ ಒಂದಾಗಿದೆ. ಜಗತ್ತಿನ ಅತಿ ದೊಡ್ಡ ಸಗಟು ಮೀನು ಮಾರುಕಟ್ಟೆಯಾದ ಟೋಕಿಯೊದ ಟೊಯೊಸು ಮಾರುಕಟ್ಟೆ ಇಲ್ಲಿದೆ.  ಸಾರ್ವತ್ರಿಕ ಸಾಕ್ಷರತೆ ಹಾಗೂ ಅತ್ಯಂತ ಅಭಿವೃದ್ಧಿ ಹೊಂದಿದ ಆರ್ಥಿಕತೆ ಹೊಂದಿರುವ ಜಪಾನ್ ಇಡೀ ಪ್ರಪಂಚದ ಗಮನವನ್ನು ಎಡೆಬಿಡದೆ ತನ್ನತ್ತ ಸೆಳೆಯುತ್ತಾ ಸಾಗಿದೆ .

ಜಪಾನ್ ಹಾಗೂ ಭಾರತದ ನಡುವಿನ ಸಾಮ್ಯತೆಗಳನ್ನು ಸಣ್ಣಪುಟ್ಟ ಸಂಗತಿಗಳಲ್ಲೂ ಕಾಣಬಹುದಾಗಿದೆ: ಆರೇಳು ಇಂಚು ಎತ್ತರದ ಹೊಸ್ತಿಲುಗಳು, ಕನಿಷ್ಠ ಪ್ರಮಾಣದ ಪೀಠೋಪಕರಣಗಳು, ಮನೆಯ ಬಾಗಿಲಿನ ಬಳಿಯೇ ಪಾದರಕ್ಷೆಗಳನ್ನು ಬಿಟ್ಟು ಒಳಗೆ ಹೋಗುವುದು, ನೆಲದ ಮೇಲೆ ಕುಳಿತು ಊಟ ಮಾಡುವುದು ಇವು ಎರಡೂ ದೇಶಗಳಲ್ಲಿನ ಸಾಮಾನ್ಯ ಪದ್ಧತಿಗಳು. ಹಾಗೆಯೇ, ಜಪಾನಿನಲ್ಲಿನ ಊಟಕ್ಕೆ ಮುಂಚಿನ ‘ಇತದಾಕಿಮಾಸು’ ಎಂಬ ಉಚ್ಚಾರವು ಭಾರತೀಯ ಸಂಪ್ರದಾಯದಲ್ಲಿ ಊಟಕ್ಕೂ ಮುನ್ನ ಪ್ರಾರ್ಥನೆ ಅಥವಾ ಕೃತಜ್ಞತೆ ಸಲ್ಲಿಸುವುದನ್ನು ನೆನಪಿಸುತ್ತದೆ. ನಡುಬಾಗಿ ವಿನಮ್ರವಾಗಿ ನಮಿಸುವ ಜಪಾನೀಯರು ವ್ಯವಹಾರದಲ್ಲಿ ಅಷ್ಟೇ ಚುರುಕುತನ ಹಾಗೂ ಜಾಣ್ಮೆಯಿಂದ ಇಷ್ಟವಾಗುತ್ತಾರೆ. ಸಮಯಪಾಲನೆ, ಶಿಸ್ತು ಮತ್ತು ಸದಾ ಹೊಸತನ್ನು ಕಲಿಯಬೇಕೆಂಬ ಗುಣಗಳನ್ನು ಕಣಕಣದಲ್ಲೂ ಅಂತರ್ಗತಗೊಳಿಸಿಕೊAಡಿರುತ್ತಾರೆ.

ಹಾಗೆAದ ಮಾತ್ರಕ್ಕೆ, ಜಪಾನ್‌ನಲ್ಲಿ ಎಲ್ಲವೂ ಪರಿಪೂರ್ಣವೆಂದೇನಲ್ಲ. ಆದರೆ, ಯಾವುದೇ ಸ್ಥಳದಿಂದ ಒಳ್ಳೆಯದನ್ನು ಮತ್ತು ಅರ್ಥಪೂರ್ಣವಾದುದನ್ನು ನಮ್ಮೊಂದಿಗೆ ಮನೆಗೆ ಕೊಂಡೊಯ್ಯುವುದು ಪ್ರವಾಸಿಗರಾದ ನಮ್ಮ ಕರ್ತವ್ಯವಾಗಿರುತ್ತದೆ. ಭಾರತ, ರಷ್ಯಾ, ಅಮೆರಿಕ ಅಥವಾ ಚೀನಾಕ್ಕಿಂತ ಚಿಕ್ಕದಾಗಿರುವ ಜಪಾನ್ ದೇಶವು ಇಂಗ್ಲಿಷ್ ಮಾತನಾಡುವ ಜಗತ್ತಿನ ಅನುಯಾಯಿಯಾಗದೆ ತನ್ನದೇ ದಾರಿಯಲ್ಲಿ ಬೆಳೆದಿದೆ. ತನ್ನ ಅಸ್ಮಿತೆಯನ್ನು ಉಳಿಸಿಕೊಂಡಿದೆ, ತನ್ನದೇ ಭಾಷೆಯನ್ನು ಪೋಷಿಸಿದೆ. ಹಿರೋಷಿಮಾ ಮತ್ತು ನಾಗಸಾಕಿಯ ದುರಂತದ ಬಳಿಕವೂ ಇನ್ನಷ್ಟು ಬಲಿಷ್ಠವಾಗಿ ಎದ್ದು ನಿಂತು, “ಎಂತಹುದೇ ಸವಾಲುಗಳು ಎದುರಾದರೂ ಅವುಗಳನ್ನು ಹಿಮ್ಮೆಟ್ಟಿಸಿ ನಾವು ಮೇಲುಗೈ ಸಾಧಿಸುತ್ತೇವೆ” ಎಂಬ ಶಾಶ್ವತ ಸಂದೇಶವನ್ನು ಜಗತ್ತಿಗೆ ನೀಡಿದೆ:.

ಇಷ್ಟೆಲ್ಲಾ ಕಾರಣಗಳಿಗಾಗಿ, ಹೃದಯಾಂತರಾಳದಿಂದ ಹೇಳಬಯಸುತ್ತೇನೆ- “ಐ ಲವ್ ಯೂ, ಜಪಾನ್!”

Post your Comment

Please let us know your thoughts on this story by leaving a comment.

Get in touch with us

Share your details for a call back and subscribe to our newsletter for travel inspiration.

+91

Listen to our Travel Stories

You May also like

View all
ऑस्ट्रेलिया - न्यूझीलंड निसर्गाने मुक्तहस्ताने रेखाटलेली दोन अद्भुत चित्रं!
6 mins, read

ऑस्ट्रेलिया - न्यूझीलंड निसर्गाने मुक्तहस्ताने रेखाटलेली दोन अद्भुत चित्रं!

Published in Sakal Saptrang. Date 23rd August, 2026 अपसाईड डाऊन एकदा मी जगाच्या नकाशासमोर उभी होते. नकाशा ओळखीचा वाटत होता, पण तरीही काहीतरी वेगळं जाणवत होतं आणि मग माझ्या लक्षात आलं, की मी जगाच

रंगों की जादुई रातें नॉर्दर्न लाइट्स
6 mins, read

रंगों की जादुई रातें नॉर्दर्न लाइट्स

Published in Navabharat Times. Date 23rd August, 2026 हम रोशन करते हैं आपकी दुनिया ज़िंदगी में कुछ अनुभव ऐसे होते हैं जिन्हें एक बार देख लेने भर से उन्हें अपनी बकेट लिस्ट में टिक नहीं किया जा सकत

आपण अतिरेक करतोय का
6 mins, read

आपण अतिरेक करतोय का

Published in Maharashtra Times.  Date 23rd August, 2026 ...मला कोणीतरी सांगितलं की “तू झांगजियाजिऐला नक्की जा कारण तिथे ‌‘अवतार‌’ सिनेमातले पर्वत पाहायला मिळतील.” बस्स! इतकं माझ्यासाठी पुरेसं होतं.

Veena World tour reviews

What are you waiting for? Chalo Bag Bharo Nikal Pado!