Published in the Sunday Prajavani on 13 July 2025
ನೀವು ಈಗಾಗಲೇ ನೋಡಿರುವ ತಾಣಗಳಿಗೆ ಮತ್ತೊಮ್ಮೆ ಪ್ರವಾಸ ತೆರಳಲು ಇಷ್ಟಪಡುವಿರಾ ಅಥವಾ ಹೊಸ ಸ್ಥಳಗಳನ್ನು ಅನ್ವೇಷಿಸಲು ಬಯಸುವಿರಾ? ಪರಿಚಿತ ತಾಣಗಳಿಗೆ ತೆರಳುವುದು ಅನುಕೂಲಕರ ಎನ್ನಿಸಿದರೆ, ಹೊಸ ದೇಶವೊಂದರ ಪರ್ಯಟನೆಯು ಅದ್ಭುತ ಕುತೂಹಲದಿಂದ ಕೂಡಿರುತ್ತದೆ; ಇದು ಅಪರಿಚಿತ ಸ್ಥಳಗಳು, ಸಂಸ್ಕೃತಿಗಳು ಹಾಗೂ ಆಹಾರಗಳ ಸವಿಯನ್ನು ಅನುಭವಿಸುವ ರೋಮಾಂಚನವನ್ನು ಉಂಟುಮಾಡುತ್ತದೆ. ಅದಿರಲಿ, ನನ್ನ ಪಟ್ಟಿಯಿಂದ ಹೊಸ ತಾಣವೊಂದರ ಆಯ್ಕೆ ಮಾಡುವುದಾದರೆ, ಅದು ಫಿಲಿಪ್ಪೀನ್ಸ್ ಆಗಿರುತ್ತದೆ.
ಫಿಲಿಪ್ಪೀನ್ಸ್ ಎಂದಾಕ್ಷಣ ಹುಡಿ ಹುಡಿಯಾದ ಬಿಳಿ ಮರಳು ಹಾಗೂ ಪರಿಶುಭ್ರ ನೀಲಿ ಜಲರಾಶಿ ಕಣ್ಮುಂದೆ ಮೂಡುತ್ತದೆ. ಅಂದAತೆ ಈ ದೇಶವು ೭,೬೪೧ ನಡುಗಡ್ಡೆಗಳಿಂದ ಕೂಡಿದ ದ್ವೀಪಸ್ತೋಮವಾಗಿದೆ. ಸ್ಪ್ಯಾನಿಷ್ ಕಾಲಘಟ್ಟದ ಪರಂಪರೆ, ಸಮೃದ್ಧ ಜೀವವೈವಿಧ್ಯ, ಪ್ರಪಂಚದ ಅತ್ಯಂತ ಸ್ನೇಹಪರ ಜನರು ಹೀಗೆ ಇಲ್ಲಿ ಕಂಡರಿಯಬೇಕಾದದ್ದು ಸಾಕುಬೇಕೆನಿಸುವಷ್ಟಿದೆ! ನೀವು ಏಷ್ಯಾದಲ್ಲಿ ಈಗಾಗಲೇ ಸಾಕಷ್ಟು ಪಯಣಿಸಿ ಇನ್ನೂ ಫಿಲಿಪ್ಪೀನ್ಸ್ ಗೆ ತೆರಳಿಲ್ಲವೆಂದರೆ ಇದನ್ನು ತಡಮಾಡದೆ ನಿಮ್ಮ ಪ್ರವಾಸ ಪಟ್ಟಿಗೆ ಸೇರಿಸಿಕೊಂಡುಬಿಡಿ.
ಫಿಲಿಪ್ಪೀನ್ಸ್ ದೇಶದ ನಕ್ಷೆಗೆ ೫೩೪ ನಡುಗಡ್ಡೆಗಳು ಅಧಿಕೃತವಾಗಿ ಸೇರ್ಪಡೆಗೊಂಡಿದ್ದು ೨೦೧೭ರಲ್ಲಿ. ಇಲ್ಲಿನ ಒಟ್ಟು ೭,೬೪೧ ದ್ವೀಪಗಳ ಪೈಕಿ ಜನವಸತಿ ಇರುವುದು ೨,೦೦೦ ನಡುಗಡ್ಡೆಗಳಲ್ಲಿ ಮಾತ್ರ. ಧರೆಯ ಮೇಲಿನ ಸ್ವರ್ಗದಂತಿರುವ ಇಲ್ಲಿನ ಎಲ್ಲ ದ್ವೀಪಗಳಿಗೂ ಭೇಟಿ ನೀಡಬೇಕೆಂದರೆ ಏನಿಲ್ಲವೆಂದರೂ ೨೦ ವರ್ಷಗಳಿಗೂ ಹೆಚ್ಚಿನ ಸಮಯ ಬೇಕಾಗಬಹುದು! ಆದರೆ, ‘ವೀಣಾ ವರ್ಲ್ಡ್’ ಇಲ್ಲಿನ ಭೇಟಿಯ ಮಹತ್ವವನ್ನು ನಿಮಗೆ ಸಾರ ರೂಪದಲ್ಲಿ ಲಭ್ಯವಾಗಿಸಲು ನಿರ್ದಿಷ್ಟ ಪ್ರವಾಸ ಕಾರ್ಯಕ್ರಮ ರೂಪಿಸಿದೆ; ಮನಿಲಾ, ಸೆಬು ಹಾಗೂ ಬೊಹೊಲ್‌ಗಳ ಅನ್ವೇಷಣೆ ಮೂಲಕ ಅವಿಸ್ಮರಣೀಯ ಗಾಢ ಅನುಭವವನ್ನು ನಿಮ್ಮದಾಗಿಸಲಿದೆ.
ಸಾಹಸ ಹಾಗೂ ವಿಶ್ರಾಂತಿ ಇವೆರಡಕ್ಕೂ ಹೇಳಿ ಮಾಡಿಸಿದಂತಿರುವ ದೇಶ ಫಿಲಿಪ್ಪೀನ್ಸ್. ಅಂದAತೆ, ಸ್ಪೇನ್‌ನ ರಾಜನಾಗಿದ್ದ ಫಿಲಿಪ್-೨ ನಿಂದಾಗಿ ಈ ದೇಶಕ್ಕೆ ಫಿಲಿಪ್ಪೀನ್ಸ್ ಎಂಬ ಹೆಸರು ಬಂದಿದೆ. ಪೋರ್ಚುಗೀಸ್ ಅನ್ವೇಷಕ ಫರ್ಡಿನ್ಯಾಂಡ್ ಮಾಗೆಲ್ಲನ್ ೧೫೨೧ರಲ್ಲಿ ಈ ನೆಲಕ್ಕೆ ಹೀಗೆ ನಾಮಕರಣ ಮಾಡುವ ಮೂಲಕ ಅದನ್ನು ಸ್ಪೇನ್‌ಗೆ ಸೇರಿದ ನೆಲವೆಂದು ಕಬಳಿಸಲು ಹುನ್ನಾರ ಹೂಡಿದ. ಆದರೆ, ಸ್ಥಳೀಯ ಮಾಕ್ಟನ್ ದ್ವೀಪದ ಪಾಳೆಗಾರನಾಗಿದ್ದ ಲಾಪು-ಲಾಪು ಇದಕ್ಕೆ ಪ್ರತಿರೋಧ ಒಡ್ಡಿದ; ವಸಾಹತುಶಾಹಿ ಆಡಳಿತದ ಮುಂದೆ ಮಂಡಿಯೂರಲು ನಿರಾಕರಿಸಿದ. ಮುಂದುವರಿದು, ಇದೇ ವೇಳೆ ನಡೆದ ಕಾಳಗದಲ್ಲಿ ಮಾಗೆಲ್ಲನ್‌ನನ್ನು ಲಾಪು-ಲಾಪು ಕೊಂದು ಹಾಕಿದ ಎಂಬ ಕತೆಗಳು ಫಿಲಿಪ್ಪೀನ್ಸ್ನಲ್ಲಿ ಜನಜನಿತವಾಗಿವೆ. ಈ ದೇಶದ ಜನರು ಲಾಪು-ಲಾಪುನನ್ನು ‘ರಾಷ್ಟ್ರ ನಿರ್ಮಾತೃ’ ಎಂದೇ ಪರಿಭಾವಿಸಿದ್ದಾರೆ. ಸೆಬು ಸಿಟಿಯಲ್ಲಿ ಆತನ ಪ್ರತಿಮೆ ವಿರಾಜಮಾನವಾಗಿ ಕಣ್ಸೆಳೆಯುತ್ತದೆ.
ಮನಿಲಾ: ವೈರುದ್ಧ್ಯಗಳ ಸಂಗಮ
ದೇಶದ ರಾಜಧಾನಿ ಮನಿಲಾವು ಪ್ರಾಚೀನತೆ ಹಾಗೂ ಆಧುನಿಕತೆಗಳೆರಡೂ ಮೇಳೈಸಿದ ೧೬ ಪುಟ್ಟ ನಗರಗಳು ಸೇರಿ ರೂಪುಗೊಂಡ ಮನಮೋಹಕ ನಗರವಾಗಿದೆ. ೧೬ನೇ ಶತಮಾನದಲ್ಲಿ ನಿರ್ಮಾಣಗೊಂಡ ಇಲ್ಲಿನ ಗೋಡೆಗಳಿಂದ ಸುತ್ತುವರಿದ ಐತಿಹಾಸಿಕ ನಗರ ಇಂಟ್ರಾಮುರೋಸ್‌ನಲ್ಲಿ ಸ್ಪೇನ್‌ನ ವಸಾಹತುಶಾಹಿ ಕಾಲಘಟ್ಟದ ಸನ್ನಿವೇಶಗಳವನ್ನು ಆಳವಾಗಿ ಅವಲೋಕಿಸಬಹುದು. ಅಲ್ಲಿನ ಕಲ್ಲುಹಾಸಿನ ಬೀದಿಗಳಲ್ಲಿ ಅಡ್ಡಾಡಿದರೆ ಬೇರೊಂದು ಯುಗಮಾನಕ್ಕೆ ಪದಾರ್ಪಣೆ ಮಾಡಿದಂತೆ ಭಾಸವಾಗುತ್ತದೆ. ಇಲ್ಲಿಂದ ಅನತಿ ದೂರದಲ್ಲೇ ಏಷ್ಯಾದ ಅತಿದೊಡ್ಡ ನಗರೋದ್ಯಾನವೆಂದು ಹೆಸರಾದ ರಿಜಾಲ್ ಪಾರ್ಕ್ ಇದೆ. ಮತ್ತೊಬ್ಬ ‘ರಾಷ್ಟ್ರ ನಿರ್ಮಾತೃ’ ಡಾ.ಜೋಸ್ ರಿಸಾಲ್ ಸ್ಮಾರಕ ಇಲ್ಲಿ ನೆಲೆಯಾಗಿದೆ.
ಮನಿಲಾದಲ್ಲಿ ಜೀಪ್ನಿ ಸವಾರಿಯನ್ನು ಯಾರೂ ತಪ್ಪಿಸಿಕೊಳ್ಳಬಾರದು. ಎರಡನೇ ವಿಶ್ವಯುದ್ಧದ ನಂತರ ಅಮೆರಿಕದ ಮಿಲಿಟರಿ ಜೀಪುಗಳ ಅಳಿದುಳಿದ ಭಾಗಗಳನ್ನು ಬಳಸಿಕೊಂಡು ಸಿದ್ಧಪಡಿಸಲಾದ, ಕಲಾರಚನೆಗಳಿಂದ ಕೂಡಿದ ವರ್ಣಮಯ ಜೀಪ್ ಇದಾಗಿದೆ. ಇದು ಫಿಲಿಪ್ಪಿನೋ ಜನರ ಕ್ರಿಯಾಶೀಲತೆ ಹಾಗೂ ಕ್ಷಮತೆಗೆ ಸಾಕ್ಷಿಯೆಂಬAತೆ ತೋರಿಬರುತ್ತದೆ.
ಸೆಬು: ಚರಿತ್ರೆ ಹಾಗೂ ನಿಸರ್ಗದ ಮೇಳೈಸುವಿಕೆ
‘ಕ್ವೀನ್ ಸಿಟಿ ಆಫ್ ಸೌಥ್’ ಎಂದೇ ಹೆಸರಾದ ಸೆಬು, ಸಾಂಸ್ಕೃತಿಕ ಹೆಗ್ಗುರುತಿನ ತಾಣಗಳು ಹಾಗೂ ನೈಸರ್ಗಿಕ ಸೊಬಗು ಮೇಳೈಸಿರುವ ನಗರವಾಗಿದೆ. ಕ್ರೈಸ್ತ ಧರ್ಮದ ಆಗಮನದ ಸ್ಮಾರಕವಾದ ಮಾಗೆಲ್ಲನ್ ಶಿಲುಬೆ ಇಲ್ಲಿದೆ. ಇದರ ಬದಿಯಲ್ಲೇ ದೇಶದ ಅತ್ಯಂತ ಹಳೆಯ ರೋಮನ್ ಕ್ಯಾಥೊಲಿಕ್ ಇಗರ್ಜಿಯಾದ ‘ಬೆಸಿಲಿಕಾ ದೆಲ್ ಸ್ಯಾಂತೊ ನಿನೊ’ ಇದೆ. ಪ್ರಪಂಚದ ಮೂರನೇ ಅತಿ ದೊಡ್ಡ ಕ್ರೈಸ್ತರ ಬಾಹುಳ್ಯದ ದೇಶವಾದ ಫಿಲಿಪ್ಪೀನ್ಸ್ನಲ್ಲಿ ಸಹಜವಾಗಿಯೇ ಕ್ರಿಸ್‌ಮಸ್ ವಿಜೃಂಭಣೆಯ ಹಬ್ಬವಾಗಿದೆ. ಪ್ರತಿವರ್ಷ ಸೆಪ್ಟೆಂಬರ್‌ನಲ್ಲೇ ಕ್ರಿಸ್‌ಮಸ್ ಸಂಬAಧಿ ಸಂಭ್ರಮಾಚರಣೆಗಳು ಆರಂಭವಾಗುತ್ತವೆ. ಇದರ ನಿಮಿತ್ತ ರಾತ್ರಿವೇಳೆ ಜನಸ್ತೋಮದ ನಡುವೆ ಆಚರಣೆಗಳು ವಿಶೇಷವಾಗಿ ಗಮನಸೆಳೆಯುತ್ತವೆ.
ಇಲ್ಲಿನ ಕವಾಸನ್ ಫಾಲ್ಸ್ ಪ್ರಕೃತಿಪ್ರಿಯರ ನೆಚ್ಚಿನ ತಾಣವಾಗಿದೆ. ಬೇಡಿಯನ್‌ನಲ್ಲಿರುವ ಬಹು ಸ್ತರಗಳ ಈ ಜಲಪಾತವು ಈಜಾಡಲು ಅಥವಾ ಸುತ್ತಲೂ ಆವರಿಸಿದ ಪ್ರಶಾಂತ ಮೌನದಲ್ಲಿ ಲೀನವಾಗಲು ಪ್ರಶಸ್ತವಾಗಿದೆ. ಇಲ್ಲಿನ ಮತ್ತೊಂದು ಮೋಹಕ ತಾಣವೆಂದರೆ ಮಆಲ್ ಬಆಲ್. ಸಾರ್ಡಿನ್ ಮೀನುಗಳ ಈಜಿನ ನೋಟಕ್ಕೆ ಪ್ರಸಿದ್ಧವಾದ ಕರಾವಳಿ ಪಟ್ಟಣ ಇದು. ಇಲ್ಲಿನ ಪನಜಸಮ ಬೀಚ್ ಸಮುದ್ರದಲ್ಲಿ ರಾಶಿ ರಾಶಿ ಸಾರ್ಡಿನ್ ಮೀನುಗಳು ಒಟ್ಟಾಗಿ ಬಾಗಿ ಬಳುಕುತ್ತಾ ಅನುರೂಪವಾಗಿ ಈಜಾಡುವ ಅಚ್ಚರಿಯ ನೋಟವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿ ಸ್ನಾರ್ಕೆಲ್ಲಿಂಗ್ ಅನುಭವವನ್ನು ನಿಮ್ಮದಾಗಿಸಿಕೊಂಡರೆ ಅದು ಜೀವಿತಾವಧಿಯಲ್ಲೊಮ್ಮೆ ಲಭ್ಯವಾಗಬಹುದಾದ ಅನುಭವವಾಗಿ ನಿಮ್ಮ ನೆನಪಿನಲ್ಲಿ ಚಿರಸ್ಥಾಯಿಯಾಗಬಹುದು.
ಬೋಹಾಲ್: ಚಾಕೊಲೇಟ್ ಹಿಲ್ಸ್ ಮತ್ತು ಟಾರ್ಸಿಯರ್ಸ್
ಸೆಬುವಿನಿಂದ ಒಂದಷ್ಟು ದೂರ ದೋಣಿಯಲ್ಲಿ ಸಾಗಿದರೆ ಬೋಹಾಲ್ ದ್ವೀಪಕ್ಕೆ ಎಡತಾಕಬಹುದು. ಕಲ್ಪಿತ ಭೂಪ್ರದೇಶಗಳು ಕಣ್ಣೆದುರು ಬಂದು ನಿಂತಿವೆಯೇನೋ ಎಂಬAತೆ ಮಂತ್ರಮುಗ್ಧಗೊಳಿಸುವ ಈ ತಾಣವು ವಿಶಿಷ್ಟ ಅಭಯಾರಣ್ಯದಿಂದ ಆವೃತಗೊಂಡಿದೆ. ಇಲ್ಲಿನ ಪ್ರಸಿದ್ಧ ಚಾಕೊಲೇಟ್ ಹಿಲ್ಸ್ ೧,೨೦೦ಕ್ಕೂ ಹೆಚ್ಚು ಶೃಂಗಾಕೃತಿಯ ಬೆಟ್ಟಗುಡ್ಡಗಳ ಸಮೂಹವಾಗಿದೆ. ಇದು ಬೇಸಿಗೆ ಕಾಲದಲ್ಲಿ ಕಂದುಬಣ್ಣಕ್ಕೆ ತಿರುಗುವುದರಿಂದ ‘ಚಾಕೊಲೇಟ್ ಹಿಲ್ಸ್’ ಎಂಬ ಹೆಸರು ಪಡೆದಿದೆ. ಅಲ್ಲಿಗೆ ಕಾಲಿಡುತ್ತಿದ್ದಂತೆ ಬೇರೊಂದು ಲೋಕದಲ್ಲಿದ್ದೇವೇನೋ ಹಾಗೂ ಭೂಮಿಯ ಮೇಲೆ ಮತ್ತೆಲ್ಲೂ ಇಂತಹ ಮತ್ತೊಂದು ಸ್ಥಳ ಇರಲಾರದೇನೋ ಎಂಬ ಭಾವ ಮೂಡಿಸಿ ಸಮ್ಮೋಹಕಗೊಳಿಸುವ ತಾಣ ಇದಾಗಿದೆ.
ಬೋಹಾಲ್‌ನಲ್ಲಿ ಜಗತ್ತಿನ ಅತ್ಯಂತ ಪುಟ್ಟ ಸಸ್ತನಿ ಫಿಲಿಪ್ಪೀನ್ ಟಾರ್ಸಿಯರ್‌ಅನ್ನು ದರ್ಶಿಸಬಹುದು. ಅತ್ಯಂತ ಪುಟ್ಟನೆಯ ಈ ದೊಡ್ಡಕಣ್ಣಿನ ಜೀವಿಗಳು ಕೊರೆಲ್ಲಾದ ಟಾರ್ಸಿಯರ್ ವನ್ಯಧಾಮದಲ್ಲಿ ನೆಲೆಯಾಗಿವೆ. ಗೌಜು ಗದ್ದಲಗಳಿಂದ ಮುಕ್ತವಾದ, ಕಣ್ಣು ಕೋರೈಸುವ ಪ್ರಕಾಶಮಾನ ದೀಪಗಳ ಹಾವಳಿಯಿಲ್ಲದ ತಾಣ ಇದಾಗಿದೆ. ಇಲ್ಲಿ ಕಾಣಸಿಗುವ ಅಂಗೈ ಗಾತ್ರಕ್ಕಿಂತ ಪುಟ್ಟದಾದ ಟಾರ್ಸಿಯರ್ ಮಂಗಗಳು ಸೃಷ್ಟಿಯ ಬೆರಗಿಗೆ ನಿದರ್ಶನವಾಗಿವೆ.
ತಾಳೆ ಮರಗಳ ಸಾಲಿನಗುಂಟ ಪಚ್ಚೆ ಜಲರಾಶಿಯನ್ನು ಸೀಳುತ್ತಾ ಲೋಬೊಕ್ ರಿವರ್ ಕ್ರೂಸ್ ಮಾಡಬಹುದು . ಜೊತೆಗೆ ಇಲ್ಲಿನ ಸಂಗೀತ ಕಾರ್ಯಕ್ರಮಗಳು ಉತ್ತೇಜಕ. ಮನಸ್ಸನ್ನು ಶಾಂತಗೊಳಿಸುವ ಈ ಚಟುವಟಿಕೆಗಳು ಸಾಂಸ್ಕೃತಿಕ ಸ್ಪರ್ಶದೊಂದಿಗೆ ಮುದ ನೀಡುತ್ತವೆ. ಬೋಹಾಲ್‌ಗೆ ಬಂದವರು ತಪ್ಪಿಸಿಕೊಳ್ಳಬಾರದ ಅವಕಾಶ ಇದಾಗಿದೆ.
ಬೊರಕೆ ಮತ್ತು ಪಲಾವನ್ ರಮ್ಯತಾಣಗಳು
ಸಂಗಾತಿಗಳಿಗೆ ಪ್ರಣಯಾನುಭವದಲ್ಲಿ ಮಿಂದೇಳುವ ಬಯಕೆಯೇ? ಹಾಗಾದರೆ ಬೊರಕೆ ಅಥವಾ ಪಲಾವನ್‌ಗೆ ತೆರಳಿದರೆ ಸಾಕು. ಕಡಲದಂಡೆಯಲ್ಲಿ ಮೈಮರೆಯಲು ಹಂಬಲಿಸುವ ಹಾಗೂ ಸಮುದ್ರ ಸಾಹಸಗಳನ್ನು ಬಯಸುವ ಜೋಡಿಗಳಿಗೆ ಇವು ಹೇಳಿ ಮಾಡಿಸಿದಂತಿವೆ. ಬಿಳಿ ಮರಳಿನ ಕಡಲದಂಡೆಗಳು ಮತ್ತು ಹವಳದ ದಿಬ್ಬಗಳಿಂದ ಕೂಡಿದ ಸಮೃದ್ಧ ಜಲರಾಶಿಯಲ್ಲಿ ಡೈವಿಂಗ್ ಹಾಗೂ ಸ್ನಾರ್ಕೆಲಿಂಗ್ ಮರೆಯಲಾಗದ ಅನುಭವಗಳನ್ನು ಮೊಗೆದು ಕೊಡುತ್ತವೆ.
ಇಲ್ಲಿನ ಮತ್ತೊಂದು ವಿಸ್ಮಯವೆಂದರೆ, ಪ್ಯೂರ್ಟೊ ಪ್ರನ್ಸೆಸಾ ಸಬ್‌ಟೆರೇನಿಯನ್ ರಿವರ್. ಯುನೆಸ್ಕೊ ವಿಶ್ವ ಪಾರಂಪರಿಕ ತಾಣವಾಗಿರುವ ಇದು, ಪ್ರಕೃತಿಯ ಏಳು ಹೊಸ ವಿಸ್ಮಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಗುಹೆಗಳಿಂದ ಆವೃತವಾದ ಈ ಭೂಗತ ನದಿಯಲ್ಲಿ ಸಾಗುವುದು ರೋಮಾಂಚಕಾರಿ. ಹಾಗೆಯೇ, ಇಲ್ಲಿ ಪ್ರಕೃತಿಯ ಭವ್ಯತೆಯು ಮನುಷ್ಯರಾದ ನಮ್ಮನ್ನು ವಿನೀತರನ್ನಾಗಿಸುತ್ತದೆ ಕೂಡ.
ರಮ್ಯ ತಾಣದಲ್ಲಿ ಪ್ರಣಯಾನುಭವ ಸವಿಯುವ ಹಂಬಲ ನಿಮ್ಮದಾಗಿದ್ದರೆ ‘ವೀಣಾ ವರ್ಲ್ಡ್’ನ ಕಸ್ಟಮೈಸ್ಡ್ ಹಾಲಿಡೇಸ್ ತಂಡದವರು ಈ ಮೋಹಕ ದ್ವೀಪಗಳಿಗೆ ನಿಮ್ಮನ್ನು ಸುರಕ್ಷಿತವಾಗಿ ಕರೆದೊಯ್ಯಲು ಸದಾ ಸಿದ್ಧರಿರುತ್ತಾರೆ.
ಫಿಲಿಪಿನೋ ಆತಿಥ್ಯದ ಆರ್ದ್ರತೆ
ಫಿಲಿಪ್ಪೀನ್ಸ್ ಭೂಪ್ರದೇಶಗಳು ಎಷ್ಟು ಚಿತ್ತಾಪಹಾರಿಯೋ ಫಿಲಿಪಿನೋ ಜನರ ಆತಿಥ್ಯ ಕೂಡ ಹೃದಯವನ್ನು ಅಷ್ಟೇ ಬೆಚ್ಚಗಾಗಿಸುವಂತಹದ್ದು. ಇದು ಅಲ್ಲಿನ ವಿಶೇಷ ಗುಣ. ಫಿಲಿಪಿನೋ ಜನರು ಸ್ನೇಹಪರತೆ ಹಾಗೂ ಆದರದ ಆತಿಥ್ಯಕ್ಕೆ ಹೆಸರಾದವರು. ನೀವು ಸ್ಥಳೀಯ ಮಾರುಕಟ್ಟೆಯಿರಲಿ ಅಥವಾ ಬೀಚ್ ಬಾರಿನಲ್ಲಿ ಕರೋಕೆ ಗಾಯನವಾಗಿರಲಿ ಹೀಗೆ ಎಲ್ಲೆಲ್ಲೂ ಅವರ ಸ್ನೇಹಪರತೆಯ ಒರತೆ ಎದ್ದು ಕಾಣುತ್ತದೆ. ಅಂದಹಾಗೆ, ಕರೋಕೆ ಗಾಯನವು ಈ ದೇಶದಲ್ಲಿ ಜನಜನಿತ ಹವ್ಯಾಸವೂ ಹೌದು!
ಶಾಪಿಂಗ್ ಆಸಕ್ತರಿಗೆ ಕೂಡ ಇಲ್ಲಿ ಯಾವ ಕೊರತೆಯೂ ಇಲ್ಲ. ಪ್ರಪಂಚದ ಅತಿ ದೊಡ್ಡ ಐದು ಮಾಲ್‌ಗಳು ಇಲ್ಲಿವೆ. ಕೈನೇಯ್ಗೆಯ ಉಡುಪುಗಳು, ಕಪ್ಪೆಚಿಪ್ಪಿನ ಆಲಂಕಾರಿಕ ಸಾಮಗ್ರಿಗಳು, ಮರದ ಕೆತ್ತನೆಯ ಕೃತಿಗಳನ್ನು ಕೊಳ್ಳುವವರು ಹೆಚ್ಚು. ಇನ್ನು ಸ್ಥಳೀಯ ತಿನಿಸುಗಳಾದ ಮನಿಲಾ ಲೇಸ್, ಒಣಗಿಸಿದ ಮಾವು ಹಾಗೂ ಫಿಲಿಪಿನೊ ಕಾಫಿ ಸವಿಯಲು ಮುಗಿಬೀಳುವವರ ಸಂಖ್ಯೆಯೂ ಕಮ್ಮಿಯೇನಿಲ್ಲ.
ಸಾಟಿಯಿಲ್ಲದ ಪ್ರವಾಸ
ಮನಿಲಾದ ಸ್ಪೇನ್ ವಸಾಹತುಶಾಹಿ ವೈಭವ ಹಾಗೂ ಸೆಬುವಿನ ಸಮೃದ್ಧ ಪರಂಪರೆಯಿAದ ಹಿಡಿದು ಬೋಹಾಲ್, ಬೊರಕೆ ಮತ್ತು ಪಲಾವನ್ ನೈಸರ್ಗಿಕ ವಿಸ್ಮಯಗಳವರೆಗೆ ಫಿಲಿಪ್ಪೀನ್ಸ್ ಬೇರೊಂದರ ಜೊತೆಗೆ ಹೋಲಿಸಲಾಗದಂತಹ ತಾಣವಾಗಿದೆ. ಉಷ್ಣವಲಯದ ಸೊಬಗು, ಚಾರಿತ್ರಿಕ ಹಿನ್ನೆಲೆ ಹಾಗೂ ಸಾಂಸ್ಕೃತಿಕ ಸಿರಿವಂತಿಕೆ ಇಲ್ಲಿ ಮೇಳೈಸಿವೆ.
ಸರಿ, ನಿಮ್ಮನ್ನು ಆಪ್ತವಾಗಿ ಬರಮಾಡಿಕೊಳ್ಳಲು ಕಾದಿರುವ ಫಿಲಿಪ್ಪೀನ್ಸ್ನ ಕರೆಗೆ ನೀವು ಓಗೊಡುವುದು ಯಾವಾಗ? ಇಲ್ಲಿ ಸೊಬಗಿನ ಕಡಲದಂಡೆಯಲ್ಲಿ ಅಡ್ಡಾಡುವುದಿರಲಿ, ಹವಳದ ದಿಬ್ಬಗಳ ಅನ್ವೇಷಣೆಯಾಗಿರಲಿ, ಇಲ್ಲವೇ ಪಚ್ಚೆ ಜಲರಾಶಿಯ ನದಿಗಳಲ್ಲಿ ದೋಣಿ ಸಂಚಾರವಾಗಿರಲಿ ಅಥವಾ ಪ್ರಾಚೀನ ನಗರಗಳಲ್ಲಿ ಇತಿಹಾಸದ ಮೆಲುಕು ಹಾಕುವುದಿರಲಿ ಎಂದೆAದೂ ಮರೆಯಲಾಗದ ಸಾಹಸಯಾನವು ನಿಮ್ಮ ಆಗಮನವನ್ನು ತವಕದಿಂದ ನಿರೀಕ್ಷಿಸುತ್ತಿದೆ.
Post your Comment
Please let us know your thoughts on this story by leaving a comment.