India
Toll free
Our Toll Free Numbers:

1800 313 5555

Call us
You can also call us on:

+91 22 2101 7979

+91 22 2101 6969

Foreign Nationals
Foreign Nationals/NRIs travelling

Within India+91 915 200 4511

Outside India+91 887 997 2221

Business Hours

Business hours: 10AM - 7PM

Explore Topics, Tips & Stories

Balloon
Arrow
Arrow

ಲಾಪತಾ

7 mins. read
Veena Patil
Veena Patil
7 Mins Read
January 31, 2025
January 31, 2025

Quick Summary

ಪ್ರತಿ ಶುಕ್ರವಾರ ಸಿನಿಮಾ ಅಥವಾ ನಾಟಕ ನೋಡುವ ಅಭ್ಯಾಸವನ್ನು ನೆರೆಹೊರೆಯವರು ವರ್ಷಗಳಿಂದ ಮುಂದುವರಿಸಿಕೊಂಡಿದ್ದಾರೆ, ಅದರಿಂದಲೇ ವಾರಕ್ಕೊಂದು ಮನರಂಜನೆಗೆ ಪ್ರೇರಣೆ ಸಿಗುತ್ತದೆ.

ಥಿಯೇಟರ್‌ನಲ್ಲಿ ದೊಡ್ಡ ಪರದೆ, ಡಾಲ್ಬಿ ಧ್ವನಿ, ಪಾಪ್‌ಕಾರ್ನ್ ಅಥವಾ ಹಬೆಯ ಜೋಳದ ಅನುಭವ ಮನೆಯಲ್ಲಿ ಸಿಗುವುದು ಕಷ್ಟ.

ಮುಂಬೈನ ಬಾಂದ್ರಾದಲ್ಲಿ 10 ನಿಮಿಷಗಳ ಅಂತರದಲ್ಲಿರುವ ಮೂರು ಮಾಲ್‌ಗಳಲ್ಲಿ ಹಲವು ಸಿನಿಮಾ ಮಂದಿರಗಳಿದ್ದು, ಸಿನಿಮಾ ಅಭಿಮಾನಿಗಳಿಗೆ ಆಯ್ಕೆಗಳೇ ಹೆಚ್ಚು.

ಥಿಯೇಟರ್‌ಗಳ ವ್ಯಾಪಾರಕ್ಕೆ ಕೊಡುಗೆ ನೀಡಲು ವಾರಕ್ಕೊಂದು ಸಿನಿಮಾ ನೋಡಬೇಕು ಎಂಬ ಮನೋಭಾವವನ್ನು ಲೇಖಕರು ಹಂಚಿಕೊಂಡಿದ್ದಾರೆ.

ರಜಾ ದಿನಗಳಲ್ಲಿ ಮಾರ್ನಿಂಗ್ ಷೋ ನೋಡಿದರೆ ಟಿಕೆಟ್ ದರ ಕಡಿಮೆ, ಜನದಟ್ಟಣೆ ಕಡಿಮೆ, ಮತ್ತು ವ್ಯವಸ್ಥೆ ಉತ್ತಮವಾಗಿರುತ್ತದೆ.

ಭಾನುವಾರ ಬೆಳಿಗ್ಗೆ 9 ಅಥವಾ 10ರ ಷೋಗೆ ಟಿಕೆಟ್ ಬುಕ್ ಮಾಡುವ ಯೋಜನೆ ರೂಪಿಸಿದರೂ, ರಾತ್ರಿ 10ರ ಷೋ ಮಾತ್ರ ಸಾಧ್ಯವೆಂದು ಸುಧೀರ್ ಹೇಳಿ ಚರ್ಚೆ ಮುಂದುವರಿದಿದೆ.

Published in the Sunday Vijay Karnataka on 02 February, 2025

ನಾವು ಭಾನುವಾರವನ್ನು ಶುಕ್ರವಾರವಾಗಿ ಬದಲಾಯಿಸಿಕೊಂಡಿದ್ದೀವಿ. ಬಾಲಿವುಡ್, ಟಾಲಿವುಡ್ ಹಾಗೂ ಹಾಲಿವುಡ್‌ನಲ್ಲಿ ಹಿಂದೆ ಸಿನಿಮಾಗಳು ಶುಕ್ರವಾರದಂದು ಬಿಡುಗಡೆ ಆಗುತ್ತಿದ್ದವು. ಬಹಳಷ್ಟು ಜನ ಮೊದಲ ದಿನ ಮೊದಲ ಪ್ರದರ್ಶನ ನೋಡುವುದರಲ್ಲಿ ಖುಷಿ ಕಾಣುತ್ತಿದ್ದರು. ನಮ್ಮ ನೆರೆಯ ಯೋಗೇಶ್ ಮತ್ತು ಕಲ್ಪನಾ ಶಾ ಅವರು ಪ್ರತಿ ಶುಕ್ರವಾರವೂ ಸಿನಿಮಾ ಅಥವಾ ನಾಟಕ ನೋಡುವ ಅಭ್ಯಾಸ ಹೊಂದಿದ್ದರು. ಅವರು ಇವತ್ತಿಗೂ ಅದನ್ನು ಅನುಸರಿಸುತ್ತಾ ಬಂದಿದ್ದಾರೆ. ಹಲವಾರು ಸಲ ನಾವೂ ಅವರಂತೆಯೇ ಅದನ್ನು ಅಳವಡಿಸಿಕೊಳ್ಳಲು ಪ್ರಯತ್ನ ಮಾಡಿದ್ದೇವಿ. ಆದರೆ, ನಮ್ಮ ಪ್ರಯತ್ನ ಶೋಚನೀಯವಾಗಿ ವಿಫಲವಾಗಿದೆ. ಈಗಲೂ ನಾವು ಅವರನ್ನು ನೋಡಿ, ವಾರಕ್ಕೊಂದು ಸಿನಿಮಾ ನೋಡುವ ಗುರಿ ಈಡೇರಿಸಿಕೊಳ್ಳಲು ಸಾಕಷ್ಟು ಪ್ರಯಾಸ ಪಡುತ್ತೇವೆ. ಥಿಯೇಟರ್‌ನಲ್ಲಿ ದೊಡ್ಡ ಪರದೆ ಮೇಲೆ ಡಾಲ್ಬಿ ಧ್ವನಿಯೊಂದಿಗೆ ಪಾಪ್‌ಕಾರ್ನ್ ಅಥವಾ ಹಬೆಯಲ್ಲಿ ಬೇಯಿಸಿದ ಜೋಳ ಮೆಲ್ಲುತ್ತಾ ಸಿನಿಮಾ ನೋಡುವ ಖುಷಿ ಮನೆಯಲ್ಲಿ ಸಿನಿಮಾ ವೀಕ್ಷಣೆ ಮಾಡುವಾಗ ಸಿಗಲು ಸಾಧ್ಯವಿಲ್ಲ.

 

ನಿಮ್ಮ ಹಂಬಲ ಎಷ್ಟು ತೀವ್ರವಾಗಿರುತ್ತದೋ, ಅದು ಈಡೇರುವ ಸಾಧ್ಯತೆಯೂ ಅಷ್ಟೇ ಹೆಚ್ಚಾಗಿರುತ್ತದೆ. ಬಾಲಿವುಡ್ ಚಿತ್ರ ‘ಓಂ ಶಾಂತಿ ಓಂ’ದಲ್ಲಿನ ಸಂಭಾಷಣೆಯೊAದನ್ನು ನೆನಪಿಸಿಕೊಳ್ಳಿ- “ನೀವು ಹೃದಯಾಂತರಾಳದಿAದ ನಿಜವಾಗಿಯೂ ಹಂಬಲಿಸಿದ್ದೇ ಆದರೆ, ಅದನ್ನು ಸಾಧಿಸಲು ಇಡೀ ಬ್ರಹ್ಮಾಂಡವೇ ನಿಮಗೆ ಸಾಥ್ ನೀಡುತ್ತದೆ ಎನ್ನುವ ಮಾತಿದೆ.”

 

ಮುಂಬೈನ ಬಾಂದ್ರಾದಲ್ಲಿ ೧೦ ನಿಮಿಷಗಳಷ್ಟು ಅಂತರದ ವ್ಯಾಪ್ತಿಯಲ್ಲಿರುವ ಮೂರು ಮಾಲ್‌ಗಳಲ್ಲಿ ೨೦ ಸಿನಿಮಾ ಮಂದಿರಗಳಿವೆ. ನನ್ನಂತಹ ಸಿನಿಮಾ ಅಭಿಮಾನಿಗೆ ಇನ್ನೇನು ಬೇಕು ಹೇಳಿ? ಹೀಗಿರುವಾಗ, ಥಿಯೇಟರ್‌ನಲ್ಲಿ ವಾರಕ್ಕೊಂದು ಸಿನಿಮಾ ನೋಡಬೇಕೆಂಬ ನನ್ನ ಹಂಬಲವನ್ನು ನಾನು ಈಡೇರಿಸಿಕೊಳ್ಳದಿದ್ದರೆ ನನಗಿಂತ ದೌರ್ಭಾಗ್ಯಶಾಲಿ ಬೇರೆ ಯಾರಿರಲು ಸಾಧ್ಯ? ಹತ್ತು ವರ್ಷಗಳಾದ ಮೇಲೆ ನನ್ನನ್ನು ನಾನೇ ದೂಷಿಸಿಕೊಳ್ಳಲು ಆಗುವುದಿಲ್ಲ. ಥ್ರೀ ಈಡಿಯಟ್ಸ್ ಮೂವಿಯಲ್ಲಿ, “ಕೈನಲ್ಲಿ ಪತ್ರವಿತ್ತು, ಗೇಟ್ ಹತ್ತಿರ ಟ್ಯಾಕ್ಸಿ ಇತ್ತು, ನಾನು ಒಂದಷ್ಟು ಧೈರ್ಯ ತಂದುಕೊAಡಿದ್ದರೆ ಬದುಕು ಬೇರೆಯದೇ ಆಗಿರುತ್ತಿತ್ತು” ಎಂಬ ಸಂಭಾಷಣೆಯೊAದಿದೆ. ಅದೇ ರೀತಿಯಾಗಿ, ಒಂದೊಮ್ಮೆ ನನ್ನ ಹಂಬಲ ಈಡೇರಿಸಿಕೊಳ್ಳಲು ಯಶಸ್ವಿ ಆಗದಿದ್ದರೆ, ನಾನು ಹೀಗೆ ಹೇಳಬೇಕಾಗಿ ಬರುತ್ತದೆ : ‘ಥಿಯೇಟರ್ ಹತ್ತಿರದಲ್ಲೇ ಇತ್ತು, ಕಾರಿನ ಅಗತ್ಯವೇ ಇರಲಿಲ್ಲ, ನಾನು ಒಂದಿಷ್ಟು ಮನಸ್ಸು ಮಾಡಿದ್ದರೆ ಹಾಗೂ ಉತ್ತಮವಾಗಿ ಯೋಜನೆ ಹಾಕಿಕೊಂಡಿದ್ದರೆ ನನ್ನ ಬದುಕು ಬಾಲಿವುಡ್‌ನ ಸಂತೋಷದಿAದ ತುಂಬಿ ತುಳುಕಿರುತ್ತಿತ್ತು’ ಎಂದು.

 

ಇದೇ ವೇಳೆ, ನಾನು ಥಿಯೇಟರ್ ಹಾಗೂ ಮಾಲ್ ಮಾಲೀಕರ ಬಗ್ಗೆಯೂ ಕಾಳಜಿ ಹೊಂದಿದ್ದೇನೆ. ನಾವು ಥಿಯೇಟರ್‌ಗಳಿಗೆ ಹೋಗುವುದನ್ನು ನಿಲ್ಲಿಸಿದರೆ ಅವುಗಳ ಕುರುಹೇ ಇಲ್ಲವಾಗಿಬಿಡಬಹುದು. ಅವುಗಳ ವ್ಯಾಪಾರಕ್ಕೆ ಕೊಡುಗೆ ನೀಡುವುದು ನಮ್ಮ ಕರ್ತವ್ಯ. ನಮಗಾಗಿ ಅವರು ಎಷ್ಟೆಲ್ಲಾ ಮಾಡುತ್ತಾರೆ ನೋಡಿ. ನಾವು ಕನಿಷ್ಠ ವಾರಕ್ಕೊಂದು ಸಿನಿಮಾ ನೋಡಿ ಅವರಿಗೆ ಒಂದಷ್ಟು ವಾಪಸ್ಸು ಕೊಡಬಾರದೇಕೆ? ಹೀಗೆ ಸಿನಿಮಾ ನೋಡುವುದು ನಮಗೂ ಒಂದು ಉಲ್ಲಾಸಕರ ಬದಲಾವಣೆ ಆಗುತ್ತದಲ್ಲವೇ?

 

ನನ್ನ ಈ ಉದಾರ ಆಲೋಚನೆಗಳನ್ನು ಸುಧೀರ್ ಜೊತೆ ಹಂಚಿಕೊAಡಾಗ, “ವೀಣಾ, ನೀನೋಬ್ಬಳು ಥಿಯೇಟರ್‌ಗೆ ಹೋಗದಿದ್ದರೆ ಅವು ಮುಚ್ಚಿಯೇ ಬಿಡುತ್ತವೆ ಅಂದುಕೊಳ್ತೀಯ?” ಎಂದರು. ಮಾಮೂಲಿನಂತೆ ನಾನು ಪಟ್ಟು ಮುಂದುವರಿಸಿದೆ. “ಈ ಚುನಾವಣೆ ಸಂದರ್ಭದಲ್ಲಿ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ಮೇಲ್ಮಟ್ಟದ ನಾಯಕರವರೆಗೆ ಪ್ರತಿಯೊಬ್ಬ ರಾಜಕಾರಣಿಯೂ ಒಂದೊAದು ವೋಟೂ ಅಮೂಲ್ಯವೆಂದು ಭಾವಿಸಿ, ಅದರ ಚಲಾವಣೆ ಖಾತರಿಪಡಿಸಿಕೊಳ್ಳಲು ಎಷ್ಟೊಂದು ಪರಿಶ್ರಮಿಸುತ್ತಿದ್ದಾರೋ ಅದೇ ರೀತಿಯಲ್ಲಿ ಥಿಯೇಟರ್‌ಗೆ ನನ್ನ ಅಲ್ಪ ಕಾಣಿಕೆ ಕೂಡ ಮುಖ್ಯವಾದುದು. ಒಂದೊAದು ಹನಿ ಸೇರಿಯೇ ದೊಡ್ಡ ಸಾಗರವಾಗುತ್ತದೆ. ಇದು ಹಣದ ಪೋಲು ಎಂಬುದು ನಿಮ್ಮ ಅನಿಸಿಕೆಯಾದರೆ ರಜಾ ದಿನಗಳಂದು ಮಾರ್ನಿಂಗ್ ಷೋ ನೋಡೋಣ. ಅವುಗಳ ಟಿಕೆಟ್ ದರ ಹೆಚ್ಚಿರುವುದಿಲ್ಲ; ಜನದಟ್ಟಣೆ ಕೂಡ ಕಡಿಮೆ ಇರುತ್ತದೆ; ಅನುಕೂಲಕರ ವ್ಯವಸ್ಥೆಗೇನೂ ಕೊರತೆ ಇರದು; ಇನ್ನಷ್ಟು ಹೆಚ್ಚು ಖುಷಿಯಾಗುತ್ತದೆ” ಎಂದೆ.

 

ಇದು ನಮ್ಮ ಸಂಸ್ಥೆಗಳ ಜಾಹೀರಾತುಗಳ ಸಾಲಿನ ಉಲ್ಲೇಖವೇ ಆಗಿತ್ತು. ಒಂದೇ ಒಂದು ಬದಲಾವಣೆ ಎಂದರೆ, ಅದರಲ್ಲಿನ ಋತುಮಾನ ಎಂಬ ಜಾಗದಲ್ಲಿ ಈಗ ಥಿಯೇಟರ್ ಎಂಬ ಪದ ಬಳಸಿದ್ದೆನಷ್ಟೆ. ಕೊನೆಗೆ, ಬಹಳ ಭಾವನಾತ್ಮಕವಾಗಿ ಮನವೊಲಿಸಿದ ಮೇಲೆ, ಬಹಳಷ್ಟು ಗಂಡAದಿರAತೆಯೇ ಸುಧೀರ್ ಒಪ್ಪಿಕೊಂಡರು.. ದೊಡ್ಡ ನಿಟ್ಟುಸಿರುಬಿಟ್ಟು, ‘ನಿನ್ನ ತಲೆಗೆ ಏನೆಲ್ಲಾ ವಿಚಿತ್ರ ಆಲೋಚನೆಗಳು ಬರುತ್ತವೆ!’ ಎಂದೂ ಹೇಳಿದರು. ಆದರೆ, ಭಾನುವಾರ ಬೆಳಿಗ್ಗೆ ೯ ಅಥವಾ ೧೦ರ ಷೋಗೆ ಟಿಕೆಟ್ ಬುಕ್ ಮಾಡಲು ಶುರು ಮಾಡಿದರು.

 

ಕೆಲಸದ ಸ್ಥಳದಲ್ಲಿ, ನಮ್ಮ ಮಧ್ಯಾಹ್ನದ ಟೇಬಲ್‌ನಲ್ಲಿ ನಾವು ನಮ್ಮ ಕೆಲಸಕ್ಕೆ ಸಂಬAಧಿಸಿದ ವಿಷಯಗಳ ಬಗ್ಗೆ ಚರ್ಚಿಸಬಾರದೆಂಬ ನಿಯಮಕ್ಕೆ ಬದ್ಧರಾಗಿರುತ್ತೇವೆ. ಬದಲಿಗೆ, ಆ ಸಮಯದ ನಮ್ಮ ಮಾತುಕತೆಗಳು, ಬದುಕಿನಲ್ಲಿ ಎರಡನೇ ಅತ್ಯಂತ ಪ್ರಮುಖ ಸಂಗತಿಗಳೆನೆಸಿದ ಮನರಂಜನೆ, ಆಹಾರ ಇತ್ಯಾದಿ ಬಗ್ಗೆ ಗಿರಕಿ ಹೊಡೆಯುತ್ತಿರುತ್ತವೆ. ಕಳೆದ ವರ್ಷ ಇಂತಹ ಮಾತುಕತೆಗಳ ಮಧ್ಯೆ, ‘ಲಾಸ್ಟ್ ಲೇಡೀಸ್’ (ಲಾಪತಾ ಲೇಡೀಸ್) ಸಿನಿಮಾದ ಮಾತು ಪದೇಪದೇ ಕೇಳಿಬಂದಿತ್ತು. ಅದಾಗಲೇ ಆ ಸಿನಿಮಾ ನೋಡಿದ್ದ ಸುನೀಲಾಳು, “ನೀನು ಅದಕ್ಕೆ ಹೋಗಲೇಬೇಕು; ಅದೊಂದು ಅದ್ಭುತ ಸಿನಿಮಾ” ಎಂದಿದ್ದಳು. ಊಟದ ಟೇಬಲ್‌ನಲ್ಲಿ ನಡೆದಿದ್ದ ಈ ಚರ್ಚೆಗಳಿಂದ ಪ್ರಭಾವಿತಳಾಗಿದ್ದ ನಾನು, “ಈ ಭಾನುವಾರ ವರ್ಲ್ಡ್ ಪ್ಲಾಜಾಗೆ ಬೆಳಿಗ್ಗೆ ೯ ಅಥವಾ ೧೦ ಗಂಟೆಯ ಷೋಗೆ ಹೋಗೋಣ. ಅದು ಒಳ್ಳೆಯ ಥಿಯೇಟರ್, ಬೆಳಿಗ್ಗೆ ಷೋಗೆ ದರ ಕಡಿಮೆ ಇರುತ್ತದೆ’ ಎಂದೆ ಸುಧೀರ್‌ಗೆ.

‘ಮಾರ್ನಿಂಗ್ ಷೋ ಇಲ್ಲ, ಬರೀ ರಾತ್ರಿ ೧೦ರ ಷೋ ಇದೆ” ಎಂದರು ಸುಧೀರ್.

‘ಅದಂತೂ ಸಾಧ್ಯವೇ ಇಲ್ಲ! ತಡರಾತ್ರಿಯ ಷೋಗೆ ಹೋಗುವ ಯೋಚನೆಯೇ ಇಲ್ಲ. ವರ್ಲ್ಡ್ ಡ್ರೈವ್ ನೋಡೋಣ’ ಎಂದೆ.

‘ಅಲ್ಲೂ ಬೆಳಿಗ್ಗೆ ಷೋಗಳು ಇಲ್ಲ. ಸಂಜೆ ೬ರ ಷೋ ಇದೆ. ಆದರೆ, ಪ್ರತಿ ಟಿಕೆಟ್ ಬೆಲೆ ರೂ ೧,೩೦೦” ಎಂದರು.

ಅದನ್ನು ಕೇಳಿ, “ಅಷ್ಟೊಂದು ಹಣವನ್ನು ಅನವಶ್ಯಕವಾಗಿ ಏಕೆ ಖರ್ಚು ಮಾಡಬೇಕು?!” ಎಂದು ನನ್ನಗೆ ಅನ್ನಿಸಿತು. ಆಗ ನಾನು, ‘ಸಂಜೆ ೬ರ ಸಮಯದಲ್ಲಿ ಮಾಲ್‌ನಲ್ಲಿ ತುಂಬಾ ರಷ್ ಇರುತ್ತದೆ. ಮಾರ್ಕೆಟ್ ಸಿಟಿ ಒಂದು ಸಲ ನೋಡಿ’ ಎಂದೆ,

‘ಭಾನುವಾರ ಮಧ್ಯಾಹ್ನ ೧ಕ್ಕೆ ಇದೆ. ಟಿಕೆಟ್ ಬೆಲೆಯೂ ಅಷ್ಟೇನೂ ದುಬಾರಿ ಇಲ್ಲ’ ಎಂದರು.

‘ಹೋ, ಇದು ಆಗದು, ಮಧ್ಯಾಹ್ನ ೧೨ಕ್ಕೆ ಊಟದ ಕತೆ?’- ಎನ್ನುವ ಯೋಚನೆಯೂ ಮೂಡಿತು.

ಸುಧೀರ್ ಕೊನೆಯ ತೀರ್ಮಾನವೆಂಬAತೆ, “ಬಹುಶಃ ಥಿಯೇಟರ್‌ನಲ್ಲಿ ಇದು ಸಿನಿಮಾದ ಕೊನೆಯ ವಾರ. ಸದ್ಯದಲ್ಲೇ ಒಟಿಟಿ ಗೆ ಬರುತ್ತೆ. ಆಗ ನೋಡು” ಎಂದರು.

“ಇಲ್ಲ, ಇಲ್ಲ. ಇಂತಹ ಒಳ್ಳೆಯ ಸಿನಿಮಾವನ್ನು ಥಿಯೇಟರ್‌ನಲ್ಲೇ ನೋಡಬೇಕು!” ಎಂದೆ.

ಅAತೂ, ನಮ್ಮ ಕೆಲಸಕಾರ್ಯಗಳನ್ನು ಹೊಂದಾಣಿಕೆ ಮಾಡಿಕೊಂಡು ಕುಟುಂಬದವರೆಲ್ಲಾ ಭಾನುವಾರ ಮಧ್ಯಾಹ್ನ ೧ ರ ಷೋಗೆ ಹೋದೆವು. ಊಟದ ಟೇಬಲ್‌ನಲ್ಲಿ ನಡೆಯುವ ಚರ್ಚೆಗಳ ಎಷ್ಟು ಪ್ರಭಾವಶಾಲಿ ಆಗಿರುತ್ತವೆ ನೋಡಿ! ಸಿನಿಮಾ ಅದ್ಭುತವಾಗಿತ್ತು, ಹೆಚ್ಚು ಭಾರ ಎನ್ನಿಸದ, ಲಘು ದಾಟಿಯಲ್ಲಿರುವ, ಆದರೆ ಬುದ್ಧಿವಂತಿಕೆಯಿAದ ಕೂಡಿರುವ ಹಾಗೂ ಕೆಲವು ಮುಖ್ಯವಾದ ಪ್ರಶ್ನೆಗಳನ್ನು ಧ್ವನಿಸುವ ಸಿನಿಮಾ ಅದು.

 

ಈ ಸಿನಿಮಾ ವೀಕ್ಷಣೆ ವಿಷಯದಲ್ಲಿ, ನಾವು ಥಿಯೇಟರ್ ವಿಷಯದಲ್ಲಿ ಮಾತ್ರವೇ ರಾಜಿ ಮಾಡಿಕೊಳ್ಳಲಿಲ್ಲ. ಸಮಯದ ವಿಷಯದಲ್ಲೂ ಹೊಂದಾಣಿಕೆ ಮಾಡಿಕೊಂಡೆವು. ಉತ್ತಮ ವಿಷಯ ಹಾಗೂ ಗುಣಮಟ್ಟ ಜನರನ್ನು ಸೆಳೆಯುತ್ತದೆ. ನಾನು ಈ ಪ್ರಸಂಗವನ್ನು ನಮ್ಮ ಪ್ರತಿ ತಿಂಗಳ ಅಖಿಲ ಭಾರತ ಮೀಟಿಂಗ್‌ನಲ್ಲಿ ಹಂಚಿಕೊAಡೆ. “ಒಂದು ಒಳ್ಳೆಯ ಸಿನಿಮಾವು ಜನರನ್ನು ಹೇಗೆ ಸೆಳೆಯುತ್ತದೋ ಅದೇ ರೀತಿಯಲ್ಲಿ ಉತ್ತಮ ಯೋಜನೆಯಿಂದ ಕೂಡಿದ ಪ್ರವಾಸವು ಎಲ್ಲಾ ಕಡೆಗಳಿಂದಲೂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಉತ್ತಮ ಪ್ರವಾಸಗಳನ್ನು ಲಭ್ಯವಾಗಿಸುವುದು ಯಾವಾಗಲೂ ನಮ್ಮ ಆದ್ಯತೆ ಆಗಿರಬೇಕು. ಅದಕ್ಕಾಗಿ ನಾವು ಪರಿಶ್ರಮಿಸೋಣ. ಏನಾದರೂ ತಪ್ಪುಗಳಾದರೆ ತಕ್ಷಣವೇ ಸರಿಪಡಿಸಿಕೊಳ್ಳೋಣ, ಪುನಃ ಅದೇ ತಪ್ಪು ಆಗುವುದಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳೋಣ” ಎಂದು ಹೇಳಿ ಗಮನಸೆಳೆದೆ.

 

ಲಾಪತಾ ಲೇಡೀಸ್ ಸಿನಿಮಾ ಹಾಗೂ ಆ ಕತೆಗೆ ಹೆಣೆದುಕೊಂಡ ಘಟನೆಗಳು ನಮಗೆ ನಿರ್ವಹಣಾ ಪಾಠವನ್ನು ಹೇಳಿಕೊಟ್ಟವು. ನೀವು ಇದುವರೆಗೂ ಈ ಸಿನಿಮಾ ನೋಡಿಲ್ಲವಾದರೆ ಖಂಡಿತವಾಗಿಯೂ ನೋಡಿ. ಮತ್ತೊಂದು ವಿಷಯವೆಂದರೆ, ಥಿಯೇಟರ್‌ನಲ್ಲೇ ಸಿನಿಮಾ ನೋಡಿ. ಥಿಯೇಟರ್‌ಗಳನ್ನು ಉಳಿಸುವ ಹಾಗೂ ಅವುಗಳ ವ್ಯಾಪಾರ ಹೆಚ್ಚಿಸುವ ಬಗ್ಗೆಯೂ ನಾವು ಗಮನ ಕೊಡಬೇಕು. ನಾವು ಈ ರೀತಿ ಪ್ರೋತ್ಸಾಹಿಸಿದರೆ, ಅವರು ನಮಗಾಗಿ ಮತ್ತಷ್ಟು ಥಿಯೇಟರ್ ಗಳನ್ನು ನಾವಿರುವ ಜಾಗಕ್ಕೆ ಇನ್ನಷ್ಟು ಹತ್ತಿರವಾದ ಸ್ಥಳದಲ್ಲಿ ನಿರ್ಮಿಸುತ್ತಾರೆ. ಥಿಯೇಟರ್‌ಗಾಗಿ ದೂರ ಹೋಗಬೇಕಾದ ಪ್ರಮೇಯವನ್ನೂ ಇದು ತಪ್ಪಿಸುತ್ತದೆ.

 

ರಸ್ತೆಗಳು, ಸೈಡ್ ವಾಕ್ ಗಳು, ನೀರು, ವಿದ್ಯುತ್ತು, ಶುದ್ಧ ಗಾಳಿ, ಮತ್ತು ಆಹಾರಗಳಿಗೆ ಕೊರತೆಯಾದರೂ ನಾವು ಮನರಂಜನೆಯಲ್ಲಿ ಹಿಂದೆ ಬೀಳಬಾರದು. ಇದು ಉದಾತ್ತ ಯೋಚನೆಯಲ್ಲವೇ? ಹ ಹಾ!

 

ಲಾಪತಾ ಲೇಡೀಸ್ ಕಳೆದುಹೋಗುವ ಹುಡುಗಿಯರ ಸುತ್ತ ಹೆಣೆದುಕೊಂಡ ಕತೆಯಾಗಿದ್ದು, ಸುಂದರವಾಗಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ಕೆಲವೊಮ್ಮೆ ‘ಕಳೆದುಹೋಗುವುದು’ ಪ್ರಯೋಜನಕಾರಿ ಕೂಡ ಎನ್ನುವುದನ್ನೂ ಕತೆಯು ಸೂಚಿಸುತ್ತದೆ. ಕಳೆದುಹೋಗುವುದು ಬದುಕಿನಲ್ಲಿ ವಿಶಿಷ್ಟ ಘಟನೆಯಾಗಿದ್ದು, ಕೆಲವರು ಆಕಸ್ಮಿಕವಾಗಿ ಕಣ್ಮರೆಯಾಗುತ್ತಾರೆ; ಇನ್ನು ಕೆಲವರು ಬೇರೊಬ್ಬರ ಬೇಜವಾಬ್ದಾರಿಯಿಂದ ನಾಪತ್ತೆಯಾಗುತ್ತಾರೆ; ಒಂದಷ್ಟು ವ್ಯಕ್ತಿಗಳು ಅಪರಿಚಿತ ಸ್ಥಳಗಳಲ್ಲಿ ನಿಜವಾಗಿಯೂ ಕಳೆದು ಹೋಗುತ್ತಾರೆ.

 

ಕೆಲವೊಮ್ಮೆ ಪ್ರವಾಸದ ವೇಳೆ ಅತಿಥಿಗಳು ಕೂಡ ಕಳೆದುಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿಯೇ, ನಮ್ಮ ಟೂರ್ ಮ್ಯಾನೇಜರ್‌ಗಳು ಪ್ರತಿಯೊಬ್ಬರಿಗೂ ತಂಡವನ್ನು ಅನುಸರಿಸುವಂತೆ ಪದೇಪದೇ ನೆನಪಿಸುತ್ತಿರುತ್ತಾರೆ; ಸೂಚನೆಗಳನ್ನು ಹಾಗೂ ನಿರ್ದೇಶನಗಳನ್ನು ಪಾಲಿಸುವಂತೆ, ಧ್ವಜಗಳನ್ನು ಗಮನದಲ್ಲಿಟ್ಟುಕೊಳ್ಳುವಂತೆ ಹಾಗೂ ಹಳದಿ ಟಿ-ಶರ್ಟ್ಗಳು ಕಾಣುವ ಜಾಗಕ್ಕೆ ಹತ್ತಿರದಲ್ಲಿರುವಂತೆ ಹೇಳುತ್ತಿರುತ್ತಾರೆ. ಈ ಸೂಚನೆಗಳ ಅನುಸರಣೆಯು ಕಳೆದುಹೋಗುವ ಘಟನೆಗಳಿಂದ ಉಂಟಾಗುವ ಒತ್ತಡವನ್ನು ತಪ್ಪಿಸುತ್ತದೆ.

 

ಆದರೆ ಕೆಲವೊಮ್ಮೆ, ಜನರು ದಾರಿ ತಪ್ಪುತ್ತಾರೆ ಅಥವಾ ಬದುಕಿನ ಯಾವುದೇ ಘಟ್ಟದಲ್ಲಿ ನಾವು ಕೂಡ ದಾರಿ ತಪ್ಪಿದ್ದಿರಬಹುದು. ಒಮ್ಮೆ ಹಿಂದಿರುಗಿ ಯೋಚಿಸಿ: “ನೀವು ಯಾವಾಗ ಕಳೆದುಹೋಗಿದ್ದಿರಿ ಹಾಗೂ ಆಗ ನಿಮಗೆ ಎಂತಹ ಅನುಭವವಾಗಿತ್ತು?” ಎಂದು. ಆಮೇಲೆ, ನಮ್ಮ ಪ್ರೀತಿಪಾತ್ರರÀನ್ನು ಪುನಃ ಸೇರಿಕೊಂಡ ಸಂತೋಷವು, ಕಳೆದುಹೋದಾಗ ಉಂಟಾಗುವ ನೋವನ್ನು ಮೀರಿಸುವಂಥÀದ್ದಾಗಿರುತ್ತದೆ. ಆ ಖುಷಿಯು ಒಂದು ರೀತಿಯಲ್ಲಿ ಸಂತಸದ ತುತ್ತತುದಿಯನ್ನು ಮುಟ್ಟಿದಂತೆ. ಅದನ್ನು ಅನುಭವಿಸಬೇಕೆಂದರೆ, ಕೆಲವೊಮ್ಮೆ ನಾವು ಕಳೆದುಹೋಗುವುದು ಅತ್ಯಗತ್ಯ.

 

ಆದರೆ ಪ್ರಸ್ತುತ ದಿನಮಾನದಲ್ಲಿ ತಂತ್ರಜ್ಞಾನವು ಕಳೆದುಹೋಗುವ ಖುಷಿಯನ್ನೂ ನಮ್ಮಿಂದ ಕಿತ್ತುಕೊಂಡು ಬಿಟ್ಟಿದೆ. ಮೊಬೈಲ್ ಫೋನ್‌ಗಳಿಂದಾಗಿ ‘ಎಲ್ಲಿ, ಯಾರು, ಯಾವಾಗ’ ಎಂಬ ಅಚ್ಚರಿಗಳು ಸಂಪೂರ್ಣವಾಗಿ ನಾಪತ್ತೆಯಾಗಿಬಿಟ್ಟಿವೆ. ಇದೇ ಸಂದರ್ಭದಲ್ಲಿ, ಬಹಳ ವರ್ಷಗಳ ಹಿಂದೆ ನಾನು ಸಿಂಗಪುರದಲ್ಲಿ ನೋಡಿದ್ದ ಒಂದು ಸೈನ್ ಬೋರ್ಡ್ ನನಗೆ ನೆನಪಾಗುತ್ತಿದೆ: “ನಮ್ಮ ದೇಶದಲ್ಲಿ ನೀವು ಕಳೆದುಹೋಗಲು ಸಾಧ್ಯವೇ ಇಲ್ಲ. ಮಾರ್ಗದರ್ಶಕ ಸಂಕೇತಗಳನ್ನು ಅನುಸರಿಸಿ. ನೀವು ತಲುಪಬೇಕಾದ ಸ್ಥಳವನ್ನು ನಿಶ್ಚಿತವಾಗಿಯೂ ಪ್ರಯಾಸವಿಲ್ಲದೆ ತಲುಪುತ್ತೀರಿ. ‘ಇದು ಪರಿಪೂರ್ಣ ವ್ಯವಸ್ಥೆ. ಯಾವುದೇ ದೇಶವೊಂದರಲ್ಲಿ ಸೌಲಭ್ಯಗಳು ಇರಬೇಕಾದ ರೀತಿ ಇದು’ ಎಂಬುದು ಬೇರೆ ವಿಷಯ.

 

ಆದರೆ, ಬದುಕಿನಲ್ಲಿ ಒಮ್ಮೆಯೂ ಕಳೆದುಹೋಗದವರು, ಪುನಃ ಸಿಕ್ಕಿದಾಗ ಉಂಟಾಗುವ ಖುಷಿಯ ಅನುಭವದಿಂದ ವಂಚಿತರಾಗಿರುತ್ತಾರೆ. ಅಂಥವರನ್ನು ನೋಡಿದಾಗ ಬಾಲಿವುಡ್‌ನ ಪ್ರಸಿದ್ಧ ಸಾಲು, “ಹೇ ಕಂಬಕ್ತ್ ತೂನೆ ತೂ ಪೀ ಹೀ ನಹೀ (… .ನೀನು ಅದರ ರುಚಿಯನ್ನು ಕೂಡ ಸವಿದಿಲ್ಲ) ಎಂಬ ಮತ್ತೊಂದು ಮಾತು ನೆನಪಿಗೆ ಬರುತ್ತದೆ.

ಕಳೆದು ಹೋಗುವ ಕಲೆಯನ್ನು ಕಲಿಯಬಹುದೇ? ಹೌದು, ಏಕೆಂದರೆ, ಅದು ನಮ್ಮ ಬದುಕಿನಲ್ಲಿ ಸಹಜವಾಗಿ ಸಂಭವಿಸುತ್ತಿಲ್ಲವೆAದರೆ, ನಾವು ಅದರ ಖುಷಿಯನ್ನು ಅನುಭವಿಸಲು ಪ್ರಜ್ಞಾಪೂರ್ವಕವಾಗಿ ಕಳೆದುಹೋಗುವ ಅಗತ್ಯವಿರುತ್ತದೆ. ಕೆಲವೊಮ್ಮೆ ಕಾಡಿನಲ್ಲಿ ಕಳೆದು ಹೋಗುವುದಿರಬಹುದು’ ಅಥವಾ ‘ಪುಸ್ತಕದಲ್ಲಿ ಕಳೆದು ಹೋಗುವುದಿರಬಹುದು’ ಅಥವಾ ‘ಆಲೋಚನೆಗಳಲ್ಲಿ ಕಳೆದು ಹೋಗುವುದಿರಬಹುದು’. ಅದೇನೇ ಇರಲಿ, ನಮಗೆ ಅದರ ಅಗತ್ಯವಂತೂ ಇರುತ್ತದೆ. ಯಾವಾಗ ನಮಗೆ ನಾವು ಸಂಪೂರ್ಣವಾಗಿ ಕಳೆದುಹೋಗಲು ಅವಕಾಶ ಮಾಡಿಕೊಡುತ್ತೇವೋ ಆಗ ಮಾತ್ರವೇ ಅದರೊಟ್ಟಿಗಿರುವ ಸರಿಸಾಟಿಯಿಲ್ಲದ ಖುಷಿ ಅನುಭವಿಸಲು ಸಾಧ್ಯವಾಗುತ್ತದೆ.

 

ಆದರೆ, ಇದು ಆಗಬೇಕೆಂದರೆ, ನಾವು ಮೊದಲಿಗೆ ನಮ್ಮ ಅತ್ಯಂತ ನಿಕಟ ಸಹಚರನನ್ನು, ಅಂದರೆ ಮೊಬೈಲ್ ಫೋನನ್ನು ಕಳೆದುಕೊಳ್ಳಬೇಕು. ದಿನದಲ್ಲಿ ಕೆಲವು ಗಂಟೆಗಳಾದರೂ ಮೊಬೈಲ್ ಅಥವಾ ನಾವು ಪರಸ್ಪರರÀ ಬದುಕಿನಿಂದ ಕಳೆದುಹೋಗಬೇಕು.

Post your Comment

Please let us know your thoughts on this story by leaving a comment.

Explore Topics, Tips & Stories

Balloon
Arrow
Arrow

Get in touch with us

Share your details for a call back and subscribe to our newsletter for travel inspiration.

+91

Listen to our Travel Stories

You May also like

View all
ಮೇಡ್ ಇನ್ ಅಲಾಸ್ಕಾ
7 mins, read

ಮೇಡ್ ಇನ್ ಅಲಾಸ್ಕಾ

“ನೀವು ಅಲಾಸ್ಕಾಗೆ ಹೋಗಿದ್ದಿರಾ? ವಾವ್! ಹೇಗಿತ್ತು? ಮಧ್ಯರಾತ್ರಿಯಲ್ಲಿ ಬೆಳಗುವ ಸೂರ್ಯ,  ಉತ್ತರ ಪ್ರಭೆ ಇವೆಲ್ಲಾ ನಿಜವೇ?”   ‘ಅಲಾಸ್ಕಾ” ಎಂದು ದಪ್ಪಕ್ಷರದಲ್ಲಿ ಅಚ್ಚುಹಾಕಿದ್ದ ನೀರಿನ ಬಾಟಲಿಯನ್ನು ನನ್ನ ಕೈಗೆ ವಾಪಸ್ಸು ಕೊಡುತ್ತ

ಮಳೆಹಾಡಿನ ಗುಂಗಿನಲ್ಲಿ!
7 mins, read

ಮಳೆಹಾಡಿನ ಗುಂಗಿನಲ್ಲಿ!

Published in the Sunday Vijay Karnataka on 17 Aug 2025 ಕೊನೆಗೂ ಬಿಸಿಲ ಝಳ ಹೋಗಲಾಡಿಸುವ ಮಳೆಯು ಧರೆಗಿಳಿದಾಗ ಆದರದಿಂದ ಬರಮಾಡಿಕೊಳ್ಳುತ್ತೇವೆ. ಆದರೆ, ಅದು ವಿದಾಯ ಹೇಳಲು ಹೊರಟಾಗ ನಾವು ಸೂಕ್ತ ರೀತಿಯಲ್ಲಿ ಬೀಳ್ಕೊಡುಗೆ ನೀಡುತ್ತೇವ

ದುಬೈ ಮತ್ತು ಅಬೂಧಾಬಿ: ಪ್ರತಿಸಲವೂ ಹೊಸ ಪ್ರವಾಸವೇ
7 mins, read

ದುಬೈ ಮತ್ತು ಅಬೂಧಾಬಿ: ಪ್ರತಿಸಲವೂ ಹೊಸ ಪ್ರವಾಸವೇ

Published in the Sunday Prajavani on 10 August 2025 ನನ್ನ ಸ್ನೇಹಿತೆಯೊಬ್ಬಳು ಕಡಿಮೆ ಸಮಯದಲ್ಲಿ ಕುಟುಂಬ ಸಮೇತ ವಿದೇಶ ಪ್ರವಾಸಕ್ಕೆ ಯಾವುದು ಸೂಕ್ತ ಸ್ಥಳವೆಂದು ನನ್ನ ಸಲಹೆ ಕೇಳಿದಳು. ಭಾರತದಿಂದ 3ರಿಂದ 4 ಗಂಟೆಯೊಳಗಿನ ಪ್ರಯಾಣವಾಗಿ

Veena World tour reviews

What are you waiting for? Chalo Bag Bharo Nikal Pado!

150+ Veena World Offices
Locate Us
Request a Quote
1800 313 5555
Connect with us

© 2013 - 26 Veena Patil Hospitality Pvt Ltd. All Rights Reserved.

Payments on website are secure

Scroll to Top