Published in the Sunday Vijay Karnataka on 06 July 2025
ನಾನೊಮ್ಮೆ ಆಪಲ್ ಸೇಲ್ಸ್ ಪರ್ಸನ್‌ಗೆ, “ಇದನ್ನು ಎಲ್ಲರಿಗೂ ಸರಿ ಹೊಂದುವAತೆ ವಿನ್ಯಾಸಗೊಳಿಸದಿರುವ ನಿಮ್ಮ ಮೇಲೆ ನ್ಯಾಯಾಲಯದ ಕಟ್ಟೆ ಏರುತ್ತೇನೆ’ ಎಂದಿದ್ದೆ. ಆಗ ಆತ ಹುಸಿನಗೆಯೊಂದಿಗೆ, “ನಾವು ರೂಪಿಸಿರುವು ಈ ಏರ್‌ಪಾಡ್‌ಗಳು ಸಹಜವಾಗಿರುವವರಿಗೆ ಸರಿಯೊಪ್ಪುತ್ತವೆ” ಎಂದಿದ್ದು ನೆನಪಾಗುತ್ತಿದೆ. “ನಿನ್ನ ಕಿವಿಗಳು ಎಲ್ಲರಂತಿಲ್ಲದೆ ಚಿಕ್ಕದಾಗಿವೆ” ಎಂದು ಸುನೀಲಾ ಆಗ ರೇಗಿಸಿದ್ದಳು. ನಾನು ಸಹ ನಕ್ಕು ಸುಮ್ಮನಾಗಿದ್ದೆ.
“ವಾಕಿಂಗ್ ಗೆ ಬರ್ತೀಯಾ?”
“ಇಲ್ಲಪ್ಪ, ನಾನು ಬರೆಯೋಕ್ಕಿದೆ. ಈಗ ಬೆಳಿಗ್ಗೆ 11ಕ್ಕೆ ಡೆಡ್‌ಲೈನ್ ಇದೆ”.
“ಸರಿ, ನಾನು ಹೋಗ್ತೀನಿ. ಅಂದಂತೆ, ನೀನು ಬರೆಯುತ್ತಿರುವ ವಿಷಯ?”
“ಮಾರ್ನಿಂಗ್ ವಾಕ್” ಎಂದೆ ಎದ್ದುನಿಲ್ಲುತ್ತಾ.
“ಸುಧೀರ್, ಸ್ವಲ್ಪ ಕೇಳಿಸಿಕೊಳ್ಳಿ! ಮಾರ್ನಿಂಗ್ ವಾಕ್ ಬಗ್ಗೆ ಲೇಖನ ಬರೆಯುವುದು, ಆದರೆ ವಾಕಿಂಗ್ ಅನ್ನೇ ತಪ್ಪಿಸುವುದು ಎಂದರೇನರ್ಥ? ಅದನ್ನು ಒಪ್ಪಲಾಗದು! ಏನನ್ನು ಬೋಧಿಸುತ್ತೀರೋ ಅದನ್ನು ಮೊದಲು ಸ್ವತಃ ಪಾಲಿಸಿ” ಎಂದು ತಾಕೀತು ಮಾಡಿದರು. ಆ ಸಾಲು ನನ್ನ ಮನಸ್ಸನ್ನು ನಾಟಿಬಿಟ್ಟಿತು. ನನಗೆ ಕುರ್ಚಿ ಮೇಲೆ ಕುಳಿತಿದ್ದುಕೊಂಡೇ ಉಪದೇಶಿಸಲು ಮನಸ್ಸು ಒಪ್ಪಲಿಲ್ಲ. ಹೀಗಾಗಿ, ತಕ್ಷಣವೇ ಎದ್ದು ಹುರುಪಿನಿಂದ ಹೊರನಡೆದೆ.
ಒಮ್ಮೆ ನಡಿಗೆಯನ್ನು ಮುಗಿಸುತ್ತಿದ್ದಂತೆ ಆನೆಯಷ್ಟು ಶಕ್ತಿ ನನ್ನ ಮೂಲಕ ಪ್ರವಹಿಸುತ್ತಿದೆಯೇನೋ ಎನ್ನಿಸತೊಡಗುತ್ತದೆ. ಆಲೋಚನೆಗಳು ಮೂಡುತ್ತವೆ, ದಿನವಿಡೀ ಉಲ್ಲಾಸವಿರುತ್ತದೆ. ದಿನದ ಸಂಜೆಯ ವೇಳೆಗೆ ಕೃತಜ್ಞತಾ ಭಾವದಿಂದ “ಹೋ ಬದುಕೇ, ನಿನಗೆ ಪ್ರೀತಿಪೂರ್ವಕ ಪ್ರಣಾಮಗಳು” ಎಂದು ಹೇಳಬೇಕೆನ್ನಿಸುತ್ತದೆ. ಕಾಲ್ನಡಿಗೆಯಿಂದ ಇಷ್ಟೆಲ್ಲಾ ಪ್ರಯೋಜನಗಳಿದ್ದರೂ ಅದು ನನ್ನ ಬದುಕಿನ ಅಭ್ಯಾಸವಾಗಿದ್ದು ನನಗೆ ನಲವತ್ತು ವರ್ಷ ದಾಟಿದ ನಂತರವಷ್ಟೇ.
ಅAದ ಹಾಗೆ, ನಡಿಗೆಗೆ ಬಹಳ ಸೂಕ್ತವಾದ ಸಮಯ ಯಾವುದು?- ಬೆಳಿಗ್ಗೆ 5ರಿಂದ 6, 6ರಿಂದ 7 ಅಥವಾ 8ರಿಂದ 9? ಈ ಚರ್ಚೆ ಎಂದಿನಿAದಲೂ ನಡೆಯುತ್ತಲೇ ಇದೆ. ನಂತರ, ಸುರಕ್ಷಾ ಪರಿಕರಗಳಿಗೆ ಸಂಬಂಧಿಸಿದ್ದು- ವಾಕಿಂಗ್ ಅಥವಾ ಜಾಗಿಂಗ್‌ಗೆ ಷೂಗಳು, ಬಣ್ಣದ ಆಯ್ಕೆ, ಬ್ರ್ಯಾಂಡೆಡ್ ಪೇರ್‌ಗಳು, ಒಪ್ಪುವ ದಿರಿಸಿಗಾಗಿ ಹುಡುಕಾಟ;. ಇಂತಹ ದಿರಿಸಿಗಾಗಿ ನಾನು ವಿದೇಶಗಳಲ್ಲೆಲ್ಲಾ ಅರಸಿದ್ದೂ ಉಂಟು.
.
ಪೋಷಾಕುಗಳಿಗೆ ಸಂಬಂಧಿಸಿದಂತೆಯೂ ಇದೇ ತಾಕಲಾಟ- ಕಾಟನ್ ಸೂಕ್ತವೋ ಅಥವಾ ಸಿಂಥೆಟಿಕ್ಕೋ? ಸಡಿಲವಾದದ್ದೋ ಅಥವಾ ಫಿಟ್ ಆಗಿ ಕೂರುವಂಥದ್ದೋ? ಹಿಮ್ಮಡಿವರೆಗೆ ಇರಬೇಕೋ ಅಥವಾ ತುಂಡುದ್ದದ ಶಾರ್ಟ್ಸೋ? ಕಪ್ಪು ಬಿಳುಪೋ ಅಥವಾ ಬಣ್ಣದ್ದೋ? ಚಳಿಗಾಲಕ್ಕೆ ಹುಡಿಗಳು, ಮುಂಗಾರಿನ ಅವಧಿಗೆ ಪೋಂಚೋಗಳು ಅಥವಾ ವಿಂಡ್‌ಚೀಟರ್‌ಗಳು. ಕ್ರಮೇಣವಾಗಿ ಬೆಳಗಿನ ನಡಿಗೆಗೆ ಸಂಬಂಧಿಸಿದ ವಸ್ತ್ರವಿನ್ಯಾಸಗಳೇ ನನ್ನ ವಾರ್ಡ್-ರೋಬಿನ ಒಂದಿಡೀ ಭಾಗವನ್ನು ಆಕ್ರಮಿಸಿಬಿಟ್ಟವು.
ಅದಾದ ನಂತರದಲ್ಲಿ ಆದ್ಯತೆ ಪಡೆದಿದ್ದು ಪೂರಕ ಸಾಮಗ್ರಿಗಳು- ರಿಸ್ಟ್ ಬಾಟಲಿಗಳು, ಬೆಲ್ಟ್ ಬ್ಯಾಗುಗಳು, ಹೆಡ್ ಬ್ಯಾಂಡುಗಳು, ಟೋಪಿಗಳು, ತೋಳುಪಟ್ಟಿಗಳು, ಕಿವಿಗವಸುಗಳು, ಹೆಡ್ ಫೋನುಗಳು, ಮಂಡಿಗಳಿಗೆ ಬೆಂಬಲ ನೀಡಲು ‘ನೀ ಸಪೋರ್ಟ್’ಗಳು. “ನಡಿಗೆ ಮಾಡುತ್ತಿರುವಾಗ ನಾನು ಸ್ಮಾರ್ಟ್ ಆಗಿ ಹಾಗೂ ಹೊಸ ತಲೆಮಾರಿನವನಂತೆ ಕಾಣಬೇಕಲ್ಲವೇ?” ಎಂಬ ಆಲೋಚನೆ ನನ್ನ ಮನಸ್ಸನ್ನು ಆವರಿಸಿತ್ತು.
ಇವೆಲ್ಲವನ್ನೂ ಅಣಿಗೊಳಿಸಿಕೊಂಡ ಮೇಲೆ ಮೊದಲ ದಿನ ಅವೆಲ್ಲವನ್ನೂ ಧರಿಸಿದೆ. ಆಗ ನನ್ನ ಕಣ್ಣಿಗೆ ನಾನೇ ಗಗನಯಾತ್ರಿಯಂತೆ ಕಾಣತೊಡಗಿದೆ. ನನ್ನ ಶರೀರದ ಪ್ರತಿಯೊಂದು ಭಾಗದಲ್ಲೂ ಏನಾದರೊಂದು ಪರಿಕರವೋ ಇಲ್ಲವೇ ಪಟ್ಟಿಯೋ ಬಿಗಿದುಕೊಂಡಿತ್ತು. ಹಗುರವಾಗಿದ್ದ ದೇಹವು ದೊಡ್ಡ ಸರಕಾಗಿಬಿಟ್ಟಿದೆ ಎಂದು ಭಾಸವಾಗತೊಡಗಿತು. ಸಹಜವಾಗಿಯೇ ನಡಿಗೆ ನಿಂತುಹೋಯಿತು. ನಾನು ನಡಿಗೆಗೆ ಮುಂಚಿನ ಪೂರ್ವಸಿದ್ಧತೆ ಮಾಡಿಕೊಳ್ಳುವುದರಲ್ಲೇ ದಣಿದುಬಿಟ್ಟಿರುತ್ತಿದ್ದೆ.
ಮತ್ತೊಂದು ಸಮಸ್ಯೆ: ನಡೆಯುವಾಗ ನನಗೆ ಪಾಡ್ ಕಾಸ್ಟ್ ಗಳನ್ನು ಕೇಳಿಸಿಕೊಳ್ಳಬೇಕೆಂಬ ಆಸೆ. ಆದರೆ ಏರ್‌ಪಾಡ್‌ಗಳು ನನ್ನ ಕಿವಿಗೆ ಸರಿ ಹೊಂದುತ್ತಿರಲಿಲ್ಲ. ಸುನೀಲಾ ಹಾಗೂ ನಾನು ಅಮೆರಿಕದಲ್ಲಿ ಇದಕ್ಕಾಗಿ ಹುಡುಕಾಡಿದ್ದೆವು. ನಾನೊಮ್ಮೆ ಆಪಲ್ ಸೇಲ್ಸ್ ಪರ್ಸನ್‌ಗೆ, “ಇದನ್ನು ಎಲ್ಲರಿಗೂ ಸರಿ ಹೊಂದುವಂತೆ ವಿನ್ಯಾಸಗೊಳಿಸದಿರುವ ನಿಮ್ಮ ಮೇಲೆ ನ್ಯಾಯಾಲಯದ ಕಟ್ಟೆ ಏರುತ್ತೇನೆ’ ಎಂದಿದ್ದೆ. ಆಗ ಆತ ಹುಸಿನಗೆಯೊಂದಿಗೆ, “ನಾವು ರೂಪಿಸಿರುವ ಈ ಏರ್‌ಪಾಡ್‌ಗಳು ಸಹಜವಾಗಿರುವವರಿಗೆ ಸರಿಯಾಗಿ ಒಪ್ಪುತ್ತವೆ” ಎಂದಿದ್ದು ನೆನಪಾಗುತ್ತಿದೆ. “ನಿನ್ನ ಕಿವಿಗಳು ಎಲ್ಲರಂತಿಲ್ಲದೆ ಚಿಕ್ಕದಾಗಿವೆ” ಎಂದು ಆಗ ಸುನೀಲಾ ರೇಗಿಸಿದ್ದಳು. ನಾನು ಸಹ ನಕ್ಕು ಸುಮ್ಮನಾಗಿದ್ದೆ.
ಅದೃಷ್ಟವಶಾತ್ ಎರಡು ವರ್ಷಗಳ ಹಿಂದೆ ಸುಧೀರ್ ನನಗೆ ಜರ್ಮನಿಯ ಶೋಕ್ಜ್ ಹೆಡ್‌ಫೋನ್ ತಂದುಕೊಟ್ಟರು. ಅದು ನನ್ನ ಕಿವಿಗೆ ಬರೋಬ್ಬರಿ ಸರಿ ಕೂರುವಂಥದ್ದು. ಈಗ ಬೋಸ್ ಕೂಡ ಕ್ಲಿಪ್-ಆನ್ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿದ್ದು, ಅವನ್ನೂ ಹಾಕಿ ನೋಡಬೇಕೆಂದುಕೊಂಡಿದ್ದೇನೆ. ಅಂತೂ ಸುಧೀರ್ ಶೋಕ್ಜ್ ತಂದು ನನ್ನ ಕೈಗಿತ್ತ ಮೇಲೆ, “ನನ್ನಂತಹ ‘ಅಸಹಜ ಕಿವಿ’ಗಳು ಇರುವವರ ಪರಿಸ್ಥಿತಿ ಬಗ್ಗೆಯೂ ಆಲೋಚಿಸುವವರು ಇದ್ದಾರಲ್ಲ” ಎಂದು ಸಂತೋಷವೂ ಆಯಿತು.
ಆದರೆ ಬಹುತೇಕ ಫ್ಯಾಷನ್ ಟ್ರೆಂಡುಗಳ ವಿಷಯದಲ್ಲಿ ಆಗುವಂತೆಯೇ ಅತ್ಯಾಧುನಿಕ ತಾಂತ್ರಿಕ ಸಾಧನಗಳನ್ನೆಲ್ಲಾ ಶರೀರದ ವಿವಿಧ ಭಾಗಗಳಿಗೆ ಬಿಗಿದುಕೊಂಡ ನನ್ನ ಬೆಳಗಿನ ನಡಿಗೆಯ ವಿಷಯದಲ್ಲೂ ಉತ್ಸಾಹವೆಂಬುದು ಒಂಬತ್ತು ದಿನಗಳಲ್ಲೇ ಸರಕ್ಕನೆ ಇಳಿಯಿತು. ನಾನು ಮಾರ್ಕೆಟಿಂಗ್ ತಂತ್ರಗಳಿಗೆ ಬೇಸ್ತುಬಿದ್ದವನಾಗಿದ್ದೆ. ಮಾರ್ಕೆಟಿಂಗ್ ತನ್ನ ಕೆಲಸವನ್ನು ತಾನು ಮಾಡಿತ್ತು. ಬುದ್ಧಿವಂತಿಕೆ ಎಂಬುದು ಎಂದಿನಂತೆ ದುಡ್ಡನ್ನು ಖರ್ಚು ಮಾಡಿದ ಮೇಲೆ ಬಂತು. ಎಲ್ಲ ಪರಿಕರಗಳನ್ನು ಕಳಚಿಟ್ಟು ಸರಳವಾಗಿ ಫೋನು ಹಾಗೂ ಶೋಕ್ಜ್ ಹೆಡ್ ಫೋನ್‌ನೊಂದಿಗೆ ಪುನಃ ನಡಿಗೆ ಶುರುಮಾಡಿದೆ. ಆಗಿನಿಂದ ನಡಿಗೆಯ ಅಭ್ಯಾಸ ತಪ್ಪದೇ ಅಬಾಧಿತವಾಗಿ ಮುಂದುವರಿದಿದೆ.
ಒಬ್ಬ ಪ್ರವಾಸಿಗನಾಗಿ ಕೇವಲ ಕ್ಯಾಬಿನ್ ಅಳತೆಯ ಬ್ಯಾಗಿನೊಂದಿಗೆ ಬದುಕುವುದು ನನಗೆ ರೂಢಿಯಾಗಿದೆ. “ನಿಮ್ಮೊಂದಿಗೆ ಎಷ್ಟು ಕಡಿಮೆ ಲಗೇಜ್ ಒಯ್ಯುತ್ತೀರೋ ಅಷ್ಟು ಹೆಚ್ಚು ಖುಷಿಯಾಗಿರುತ್ತೀರಿ” ಎಂಬುದೇ ನನ್ನ ಮಂತ್ರವಾಗಿದೆ. ಪ್ರಯಾಣವೇ ನನ್ನ ಬದುಕಾಗಿದ್ದು, ಈ ಮೇಲಿನ ತತ್ತ್ವದ ಪಾಲನೆಯಿಂದ ನನಗೆ ಬಹಳ ಅನುಕೂಲವಾಗಿದೆ. ಆ ಅಡಕವಾದ ಬ್ಯಾಗಿನಲ್ಲೇ ಒಂದು ಟ್ರ್ಯಾಕ್ ಸೂಟ್, ಒಂದು ಸ್ವಿಮ್ ಸೂಟ್ ಇರುತ್ತವೆ. ವಾಕಿಂಗ್ ಷೂ ಧರಿಸಿರುತ್ತೇನೆ. ಮತ್ತೊಂದು ಜೊತೆ ಫಾರ್ಮಲ್ ಷೂ ಇರಿಸಿಕೊಂಡಿರುತ್ತೇನೆ. ಪ್ರಪಂಚ ಸುತ್ತಾಡಲು ಇವಿಷ್ಟಿದ್ದರೆ ಸಾಕು!
ನಮ್ಮ ಪ್ರವಾಸಿ ಅತಿಥಿಗಳು ಕೂಡ ಇವಿಷ್ಟಕ್ಕೇ ಸೀಮಿತಗೊಳ್ಳಬೇಕು ಎಂದು ನಾನು ನಿರೀಕ್ಷಿಸುವುದಿಲ್ಲ. ಅವರು ಉತ್ತಮ ಉಡುಪುಗಳನ್ನು ತೊಡಬೇಕು, ಹಲವಾರು ಫೋಟೊಗಳನ್ನು ತೆಗೆಸಿಕೊಳ್ಳಬೇಕು, ಸಾಮಾಜಿಕ ಮಾಧ್ಯಮಗಳಲ್ಲಿ ಲಗತ್ತಿಸಬೇಕು ಹಾಗೂ ಪ್ರತಿಯೊಂದು ಸಣ್ಣ ಅನುಭವವನ್ನೂ ಆನಂದಿಸಬೇಕು. ಅದಕ್ಕಾಗಿ ಮೀಡಿಯಂ ಅಳತೆಯ ನಾಲ್ಕು ಗಾಲಿಗಳ ಸೂಟ್‌ಕೇಸ್ ಸಾಕಾಗುತ್ತದೆ. ಭಾರವಾದ ಲಗೇಜನ್ನು ಸುಮ್ಮನೇ ಹೋದೆಡೆಯೆಲ್ಲಾ ಎಳೆದಾಡುತ್ತಾ ಪ್ರಯಾಸ ಪಡುವುದರಲ್ಲಿ ಅರ್ಥವಿಲ್ಲ.
ಗುಂಪು ಪ್ರವಾಸಗಳ ವೇಳೆ ಬೆಳಗಿನ ಕಾಲ್ನಡಿಗೆ ಹೆಚ್ಚುಕಡಿಮೆ ಅಸಾಧ್ಯವೇ. ದಿನದ ವೇಳಾಪಟ್ಟಿಯಲ್ಲಿ ಅದಕ್ಕೆ ಅವಕಾಶವೇ ಸಿಗದು. ಕಸ್ಟಮೈಸ್ಡ್ ಹಾಲಿಡೇ ಪ್ರವಾಸವಾಗಿರದ ಹೊರತು ಬೇರೆ ಪ್ರವಾಸಗಳ ಅವಧಿಯಲ್ಲಿ ನಡಿಗೆಗೆ ಸಮಯ ಸಿಗುವುದು ಬಹಳ ಕಷ್ಟ. ಒಂದೊಮ್ಮೆ ಇಷ್ಟೆಲ್ಲದರ ನಡುವೆಯೂ ನಡಿಗೆಗೆ ಸಮಯ ಹೊಂದಿಸಿಕೊಳ್ಳಲು ಸಾಧ್ಯವಾದ ಸಂದರ್ಭದಲ್ಲಿ ಎಲ್ಲೆಂದರಲ್ಲಿ ನಡಿಗೆಗೆ ಹೋಗಲಾಗದು. ಸುರಕ್ಷಿತ ಹಾಗೂ ಜನನಿಬಿಡ ಪ್ರದೇಶಗಳಲ್ಲಷ್ಟೇ ನಡಿಗೆಗೆ ತೆರಳಬೇಕಾಗುತ್ತದೆ. ನಿರ್ಜನ ಪ್ರದೇಶಗಳಲ್ಲಿ ಕಾಲ್ನಡಿಗೆ ಸೂಕ್ತವಲ್ಲ. ಪ್ರವಾಸಿಗರು ಅನುಸರಿಸಬೇಕಾದ ಮತ್ತೊಂದು ಮುಖ್ಯ ಅಂಶವೆಂದರೆ, ತಾವು ಎಲ್ಲಿಯೇ ಆಗಲಿ ವಾಕಿಂಗ್‌ಗೆ ತೆರಳುವುದಿದ್ದರೆ ಆ ಬಗ್ಗೆ ಟೂರ್ ಮ್ಯಾನೇಜರ್‌ಗೆ ತಿಳಿಸಿಯೇ ಹೋಗಬೇಕು.
ಇಂದು ತಂತ್ರಜ್ಞಾನವು ಪ್ರಪಂಚದ ಯಾವುದೇ ಭಾಗಕ್ಕೆ ಹೋದರೂ ನಮಗೆ ಸಂಪರ್ಕ ಸೌಲಭ್ಯವನ್ನೇನೋ ಲಭ್ಯವಾಗಿಸುತ್ತದೆ. ಆದರೆ ವಿಪರ್ಯಾಸವೆಂದರೆ, ತಾಂತ್ರಿಕತೆ ಉನ್ನತಿಗೊಂಡರೂ ಅನೇಕ ಜಾಗತಿಕ ನಗರಗಳಲ್ಲಿ ಅಭದ್ರತೆ ಕೂಡ ಅಷ್ಟೇ ಹೆಚ್ಚಾಗಿದೆ. ಮುಖ್ಯವಾಗಿ, ಯೂರೊಪ್ ಮತ್ತು ಅಮೆರಿಕದ ದೇಶಗಳಲ್ಲಿ ನಿರ್ವಸತಿ, ಮಾದಕವಸ್ತು ವ್ಯಸನ ಹಾಗೂ ವಲಸಿಗರ ಸಮಸ್ಯೆಗಳು ಇದಕ್ಕೆ ಕಾರಣವಾಗಿ ಕಾಡುತ್ತಿವೆ.
ಗಮನದಲ್ಲಿಡಬೇಕಾದ ಇನ್ನಿತರ ಅಂಶಗಳೆಂದರೆ, ನಡೆಯುವಾಗ ಸೈಡ್ ವಾಕ್‌ಗಳನ್ನು ಹಾಗೂ ಜೀಬ್ರಾ ಕ್ರಾಸಿಂಗ್‌ಗಳನ್ನು ಬಳಸಬೇಕು. ಹಾಗೆಯೇ, ಸಿಗ್ನಲ್ ದೀಪಗಳನ್ನು ಅನುಸರಿಸಬೇಕು. ರಸ್ತೆಗಳನ್ನು, ಮುಖ್ಯವಾಗಿ ಹೈವೇಗಳನ್ನು ಎಲ್ಲಿಬೇಕೆಂದರಲ್ಲಿ ಅಡ್ಡಾದಿಡ್ಡಿ ದಾಟಬಾರದು. ನಾನು ದಡ್ಡತನದಿಂದ ಮುಂಚೆ ಈ ರೀತಿ ರಸ್ತೆಗಳನ್ನು ದಾಟಿದ್ದುಂಟು. ಆ ಸಂದರ್ಭಗಳಲ್ಲಿ ನನಗೇನೂ ಆಗಿಲ್ಲವೆಂಬುದು ನಿಜ. ಆದರೆ, ಬಹುಶಃ ಆ ದಿನಗಳಲ್ಲಿ ಜಗತ್ತು ಈಗಿರುವುದಕ್ಕಿಂತ ಹೆಚ್ಚು ಸುರಕ್ಷಿತವಾಗಿದ್ದುದು ಇದಕ್ಕೆ ಕಾರಣವಿರಬೇಕು ಎನ್ನಿಸುತ್ತದೆ. ನಾನು ಅಮೆರಿಕ ಮತ್ತು ಯೂರೊಪ್‌ನಲ್ಲಿ ಬೆಳಿಗ್ಗೆ 6.30ಕ್ಕೆ ಹೊರಟು ಒಂದೂವರೆ ಗಂಟೆ ವಾಕ್ ಮಾಡುತ್ತಿದ್ದುದುಂಟು. ಆದರೆ ಈಗ ನಾನು ಈ ರೀತಿ ವಾಕ್ ಮಾಡಿ ಎಂದು ಬೇರೆಯವರಿಗೆ ಶಿಫಾರಸು ಮಾಡುವುದಿಲ್ಲ.
ಹಾಗೆಂದ ಮಾತ್ರಕ್ಕೆ ಪ್ರಪಂಚದಲ್ಲೆಲ್ಲಾ ಸಂಪೂರ್ಣ ಅಸುರಕ್ಷತೆಯೇ ತಾಂಡವವಾಡುತ್ತಿದೆ ಎಂಬುದು ನನ್ನ ಮಾತಿನ ಅರ್ಥವಲ್ಲ. ನಾನು ಜಗತ್ತಿನ ಲೆಕ್ಕವಿಲ್ಲದಷ್ಟು ನಗರಗಳಲ್ಲಿ ಹಾಗೂ ಪಟ್ಟಣಗಳಲ್ಲಿ ನಡೆದು ಸುತ್ತಾಡಿದ್ದೇನೆ. ಕಾಲ್ನಡಿಗೆಗೆ ಪ್ರಶಸ್ತವಾದ ನನ್ನ ನೆಚ್ಚಿನ ಸ್ಥಳಗಳ ಬಗ್ಗೆ ಕೇಳುವುದಾದರೆ ಸ್ವಿಸ್‌ನಲ್ಲಿ ಯಾವುದೇ ಹಳ್ಳಿ, ಭಾರತದಲ್ಲಿ ಮನಾಲಿ (ಅದರಲ್ಲೂ ಹಿಂಡಿಬಾ ದೇವಸ್ಥಾನದ ಹಿಂಭಾಗ), ಲಂಡನ್ನಿನಲ್ಲಿ ಕೆನ್ಸಿಂಗ್ಟನ್ ಪಾರ್ಕ್, ಸ್ಕಾಟ್ಲೆಂಡ್ ಮತ್ತು ನ್ಯೂಝಿಲೆಂಡಿನ ಹಳ್ಳಿಗಳು, ಆಸ್ಟ್ರೇಲಿಯಾದಲ್ಲಿ ಸಿಡ್ನಿಯ ಹಾರ್ಬರ್ ಬ್ರಿಜ್ ಹಾಗೂ ಆಪ್ರಾ (ಅಪೇರಾ) ಹೌಸ್ ನನಗೆ ಥಟ್ಟನೆ ನೆನಪಾಗುತ್ತವೆ. ಈ ಜಾಗಗಳಲ್ಲಿ ನಡಿಗೆಯು ಬಹಳ ಖುಷಿ ನೀಡುತ್ತದೆ.
ಕೆಲವು ದಿನಗಳ ಹಿಂದೆ ನಮ್ಮ ಹಿತೈಷಿ ಹಾಗೂ ನನ್ನ ಅತ್ತೆಯವರ ದಾಯಾದಿ ಬಂಧುವಾದ ಶಕುಮಾಯ್ ಚುರಿ ಅವರು ಗೋರೆಗಾಂವ್‌ದಿಂದ ನಮ್ಮ ಮನೆಗೆ ಬಂದಿದ್ದರು. ಅವರಿಗೀಗ 90 ವರ್ಷ. ಅವರು (ಆಕೆ) 30-40 ವರ್ಷಗಳ ಹಿಂದೆ ನಾನು ನೋಡಿದ್ದಾಗ ಹೇಗಿದ್ದರೊ ಈಗಲೂ ಹಾಗೆಯೇ ಇದ್ದಾರೆ. ನೇರ ಭಂಗಿ, ದೃಢವಾದ ಧ್ವನಿ ಹಾಗೂ ತುಳುಕುವ ಚೈತನ್ಯ. “ನೀವು ಆಗ ಹೇಗಿದ್ದಿರೊ ಈಗಲೂ ಹಾಗೆಯೇ ಇದ್ದೀರಿ! ಇದರ ರಹಸ್ಯವೇನು?” ಎಂದು ನಾನು ಅವರನ್ನು ಕೇಳಿದೆ.
ತಮ್ಮ ಆಹಾರ ಸೇವನೆ ಹಾಗೂ ಇನ್ನಿತರ ದಿನನಿತ್ಯದ ಅಭ್ಯಾಸಗಳ ಬಗ್ಗೆ ಅವರು ದೊಡ್ಡ ಪಟ್ಟಿಯನ್ನೇ ಕೊಡುತ್ತಾರೇನೋ ಎಂದು ನಾನು ಅಂದುಕೊಂಡಿದ್ದೆ. ಶತಾಯುಷಿಗಳಿಗೆ ಹೆಸರಾದ ಜಪಾನಿನ ‘ಬ್ಲೂ ಜೋನ್ಸ್’ಗೆ ಸೇರಿದವರೇನೋ ಎಂಬಂತೆ ತೋರುತ್ತಿದ್ದ ಆಕೆ ಯಾವ ದೊಡ್ಡ ವಿವರಣೆಯನ್ನೂ ಕೊಡಲಿಲ್ಲ. ಸಸ್ಯಾಹಾರದಲ್ಲೂ ಎಲ್ಲವನ್ನೂ ತಿನ್ನುವ ಅಭ್ಯಾಸ ಅವರಿಗೆ ಇರಲಿಲ್ಲ. ಆದರೆ ಆಕೆ ನಿರಂತರವಾಗಿ ಮಾಡುತ್ತಿದ್ದುದು ಒಂದನ್ನು ಮಾತ್ರ- ಅದು ಯಾವುದೆಂದರೆ, ನಡಿಗೆ. ಬೆಳಿಗ್ಗೆ ನಡಿಗೆ, ಸಂಜೆ ನಡಿಗೆ ಹಾಗೂ ನಡುವಿನ ಅವಧಿಯಲ್ಲೂ ನಡಿಗೆ. ಅವರು ಜಡವಾಗಿರದೆ ದೈಹಿಕವಾಗಿ ಚಲನಶೀಲವಾಗಿ ಇರುವುದನ್ನು ರೂಢಿಸಿಕೊಂಡಿದ್ದರು. ಆ ಬೆಳಿಗ್ಗೆ ಅವರನ್ನು ನೋಡಿ ನಾವೆಲ್ಲರೂ ಸ್ಫೂರ್ತಿಗೊಂಡೆವು. ಮರುದಿನ ನಮ್ಮ ಮನೆಯವರೆಲ್ಲರೂ ವಾಕ್‌ಗೆ ತೆರಳಿದೆವು. ದೀರ್ಘಾಯುಷ್ಯದ ರಹಸ್ಯವೇನೆಂಬುದು ನಮಗೆ ಮನವರಿಕೆಯಾಗಿತ್ತು.
ಇನ್ನು ವೈಯಕ್ತಿಕವಾಗಿ ನನ್ನ ಮಟ್ಟಿಗೆ ಹೇಳುವುದಾದರೆ, ಬೆಳಗಿನ ನಡಿಗೆ ಎಂದರೆ ಅದು ಕೇವಲ ಶಾರೀರಿಕ ಸದೃಢತೆಗೆ ಸಂಬಂಧಿಸಿದ್ದಲ್ಲ. ಮನಸ್ಸನ್ನು ಉದ್ದೀಪಿಸುವಂಥದ್ದು, ಆಲೋಚನೆಗಳನ್ನು ಉತ್ತೇಜಿಸುವಂಥದ್ದು. ಇವು ಕೇವಲ ನಮ್ಮ ಶರೀರವನ್ನಷ್ಟೇ ಸುಸ್ಥಿತಿಯಲ್ಲಿರಿಸಲು ಸಹಾಯಕವಲ್ಲ. ಬದಲಿಗೆ, ಇಡೀ ಸಮಾಜದ ಹಂದರವನ್ನು ಸಶಕ್ತಗೊಳಿಸುತ್ತವೆ. ಆರೋಗ್ಯಕರ ಶರೀರವು ಸಕಾರಾತ್ಮಕ ಚಿಂತನೆಗಳನ್ನು ಉಂಟುಮಾಡುತ್ತದೆ; ಸಕಾರಾತ್ಮಕ ಮನಸ್ಸು ಸಶಕ್ತ ಸಮುದಾಯಗಳನ್ನು ಹಾಗೂ ಸದೃಢ ದೇಶವನ್ನು ನಿರ್ಮಿಸುತ್ತದೆ.
ಅಂದಂತೆ, ನಾನು ಮತ್ತೊಂದು ಸಂಗತಿಯನ್ನೂ ಬಲವಾಗಿ ನಂಬುತ್ತೇನೆ- ಎಲ್ಲಿ ಸಾಮಾನ್ಯ ಪ್ರಜೆಗಳು ಬೆಳಗಿನ ನಡಿಗೆಯನ್ನು ಭಯಮುಕ್ತವಾಗಿ ಮಾಡಲು ಸಾಧ್ಯವೋ ಅಂತಹ ಸ್ಥಳವು ಸುರಕ್ಷಿತ ಸ್ಥಳವಾಗಿರುತ್ತದೆ.
Post your Comment
Please let us know your thoughts on this story by leaving a comment.